ಮೈಸೂರು: ಮೈಮೇಲೆ ಬಿಸಿ ನೀರು ಸುರಿದುಕೊಂಡಿದ್ದ 2 ವರ್ಷದ ಮಗು ಸಾವು

ತಿಳಿಯದೆ ಮೈಮೇಲೆ ಬಿಸಿ ನೀರು ಸುರಿದುಕೊಂಡಿದ್ದ 2 ವರ್ಷದ ಮಗು ಮೃತಪಟ್ಟ ಘಟನೆ ಮೈಸೂರು ತಾಲೂಕಿನ ದಾಸನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ತಿಳಿಯದೆ ಮೈಮೇಲೆ ಬಿಸಿ ನೀರು ಸುರಿದುಕೊಂಡಿದ್ದ 2 ವರ್ಷದ ಮಗು ಮೃತಪಟ್ಟ ಘಟನೆ ಮೈಸೂರು ತಾಲೂಕಿನ ದಾಸನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ರಾಮು-ಜಯಲಕ್ಷ್ಮೀ ದಂಪತಿಯ ಪುತ್ರಿ ಆದ್ಯಾ(2) ಮೃತ ಮಗು. ಸ್ನಾನ ಮಾಡಿಸುವಾಗ ತಣ್ಣೀರು ತರುವುದಕ್ಕೆಂದು ತಾಯಿ ಹೋಗಿದ್ದರು. ಈ ವೇಳೆ ತಿಳಿಯದೆ ಮಗು ಮೈಮೇಲೆ ಬಿಸಿ ನೀರು ಸುರಿದುಕೊಂಡಿದೆ.

ಗಂಭೀರವಾಗಿ ಗಾಯಗೊಂಡಿದ್ದ ಆದ್ಯಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೆ.ಆರ್.ಆಸ್ಪತ್ರೆಯಲ್ಲಿ ಮಗು ಕೊನೆಯುಸಿರೆಳೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com