ಮಂಗಳೂರು: ಅಪಾರ್ಟ್ ಮೆಂಟ್ ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್ ಆರೋಪ; ಮೂವರ ಬಂಧನ
ಉಲ್ಲಾಳ್ ಪೊಲೀಸ್ ಠಾಣೆ ವ್ಯಾಪ್ತಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇರೆಗೆ ಕೇರಳದಿಂದ ಬಂದಿದ್ದ ವ್ಯಕ್ತಿಯೊಬ್ಬರು ಸೇರಿದಂತೆ ಮೂವರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
Published: 14th December 2021 05:20 PM | Last Updated: 14th December 2021 06:26 PM | A+A A-

ಸಾಂದರ್ಭಿಕ ಚಿತ್ರ
ಮಂಗಳೂರು: ಉಲ್ಲಾಳ್ ಪೊಲೀಸ್ ಠಾಣೆ ವ್ಯಾಪ್ತಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇರೆಗೆ ಕೇರಳದಿಂದ ಬಂದಿದ್ದ ವ್ಯಕ್ತಿಯೊಬ್ಬರು ಸೇರಿದಂತೆ ಮೂವರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ನಿದ್ರೆ ಮಾತ್ರೆ ಮತ್ತು ಮದ್ಯ ಕೊಟ್ಟು ತಮ್ಮ ಮಗಳ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಸಂತ್ರಸ್ತೆಯ ತಾಯಿ ದೂರು ನೀಡಿದ ನಂತರ ಮಂಗಳೂರಿನ ಇಬ್ಬರು ಹಾಗೂ ಕೇರಳದಿಂದ ಬಂದಿದ್ದ ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಮುಡಿಪುವಿನ ಅಪಾರ್ಟ್ ಮೆಂಟ್ ವೊಂದರ ಬಳಿ ಸೋಮವಾರ ಪರಿಸ್ಥಿತಿ ಬಿಗಡಾಯಿಸಿತ್ತು. ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಅತ್ಯಾಚಾರಕ್ಕೂ ಮುನ್ನ ತನ್ನ ಮಗಳಿಗೆ ನಿದ್ರೆ ಮಾತ್ರೆ ಹಾಗೂ ಮದ್ಯವನ್ನು ನೀಡಲಾಗಿದೆ ಎಂದು ಸಂತ್ರಸ್ತೆ ತಾಯಿ ಆರೋಪಿಸಿದರು. ಸಂತ್ರಸ್ತೆಯನ್ನು ಸಮಾಲೋಚನೆಗಾಗಿ ಸಂಬಂಧಿತ ಇಲಾಖೆ ವಶಕ್ಕೆ ನೀಡಲಾಗಿದೆ ಎಂದು ಅವರು ಹೇಳಿದರು.
ಈ ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಮತ್ತೊಂದು ಪೊಕ್ಸೊ ಪ್ರಕರಣದಲ್ಲಿಯೂ ಆರೋಪಿತನಾಗಿದ್ದಾನೆ. ಆತನ ವಿರುದ್ಧ ಎರಡು ಪೊಕ್ಸೊ ಕಾಯ್ದೆ, ದರೋಡೆ ಮತ್ತು ಎನ್ ಡಿಪಿಎಸ್ ಕಾಯ್ದೆಯಡಿ ಏಳು ಪ್ರಕರಣಗಳು ದಾಖಲಾಗಿವೆ.
ಆರೋಪಿಗಳಿಗೂ ತನ್ನ ಮಗಳಿಗೂ ಪರಸ್ಪರ ಗೊತಿತ್ತು. ಅಪಾರ್ಟ್ ಮೆಂಟ್ ಗೆ ಆಕೆಯನ್ನು ಕರೆದೊಯ್ದಗಿನಿಂದಲೂ ಮೂವರಿಂದ ಗ್ಯಾಂಗ್ ರೇಪ್ ನಡೆದಿರುವ ಶಂಕೆಯನ್ನು ಸಂತ್ರಸ್ತೆ ತಾಯಿ ವ್ಯಕ್ತಪಡಿಸಿದ್ದಾರೆ.