ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಹುದ್ದೆಗಳಲ್ಲಿ ಶೀಘ್ರವೇ ಮಹತ್ವದ ಬದಲಾವಣೆ
ರಾಜ್ಯದ ಪೊಲೀಸ್ ಇಲಾಖೆಯ ಹುದ್ದೆಗಳಲ್ಲಿ ಶೀಘ್ರವೇ ಮಹತ್ವದ ಬದಲಾವಣೆಗಳಲಾಗಲಿದ್ದು ಸಿಸಿಬಿ, ಬೆಂಗಳೂರು ನಗರ ಪೊಲೀಸ್, ಹುದ್ದೆಗಳಿಗೆ ಹೊಸ ಅಧಿಕಾರಗಳ ನೇಮಕವಾಗಲಿದೆ ಎಂದು ತಿಳಿದುಬಂದಿದೆ.
Published: 15th December 2021 02:50 PM | Last Updated: 15th December 2021 02:50 PM | A+A A-

ಪೊಲೀಸ್ (ಸಂಗ್ರಹ ಚಿತ್ರ)
ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಯ ಹುದ್ದೆಗಳಲ್ಲಿ ಶೀಘ್ರವೇ ಮಹತ್ವದ ಬದಲಾವಣೆಗಳಲಾಗಲಿದ್ದು ಸಿಸಿಬಿ, ಬೆಂಗಳೂರು ನಗರ ಪೊಲೀಸ್, ಹುದ್ದೆಗಳಿಗೆ ಹೊಸ ಅಧಿಕಾರಗಳ ನೇಮಕವಾಗಲಿದೆ ಎಂದು ತಿಳಿದುಬಂದಿದೆ.
ಡಿಐಜಿ ಹಾಗೂ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಗೆ ಡಿ.31 ರಂದು ಬಡ್ತಿ ಸಿಗಲಿದ್ದು. ಇವರೊಂದಿಗೆ ಇನ್ನೂ ಮೂವರು ಡಿಐಜಿಗಳಾದ ಲಾಬೂರಾಮ್, ಹರ್ಷ, ವಿಕಾಸ್ ಕುಮಾರ್ ವಿಕಾಸ್ ಅವರಿಗೆ ಐಜಿಪಿ ಹುದ್ದೆಗೆ ಬಡ್ತಿ ಸಿಗಲಿದೆ.
ಐಜಿಪಿ ಹಾಗೂ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ಎಸ್ ಮುರುಗನ್ ಗೆ ಹೆಚ್ಚುವರಿ ಡಿಜಿಪಿಯಾಗಿ ಬಡ್ತಿ ಸಿಗಲಿದ್ದು, ಐಜಿಪಿ, ಅಪರಾಧ ತನಿಖೆ ವಿಭಾಗದ ಕೆವಿ ಶರತ್ ಚಂದ್ರ ಅವರಿಗೂ ಬಡ್ತಿ ಸಿಗಲಿದೆ. ಮುರನ್, ಪಾಟೀಲ್ ಅವರ ಬಡ್ತಿಯಿಂದಾಗಿ ಬೆಂಗಳೂರು ನಗರ ಪೊಲೀಸ್ ವಿಭಾಗದಲ್ಲಿ ಹಲವಾರು ಬದಲಾವಣೆಗಳಾಗಲಿದೆ.
ಇನ್ನು 26 ಮಾಂದಿ ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳ ಅಧಿಕಾರಿಗಳನ್ನು ಐಪಿಎಸ್, ಕೇಡರ್ ಮ್ಯಾನೇಜ್ಮೆಂಟ್ ಆಫ್ ಐಪಿಎಸ್ ಆಫೀಸರ್ಸ್ ಗಳಿಗೆ ನೇಮಕ ಮಾಡಿಕೊಳ್ಳುತ್ತಿರುವುದು ಸಹ ಸವಾಲಿನ ಸಂಗತಿಯಾಗಿದೆ.
26 ಮಂದಿ ಕೆಎಸ್ ಪಿಎಸ್ ಅಧಿಕಾರಿಗಳನ್ನು ಐಪಿಎಸ್ ಗೆ ನೇಮಕ ಮಾಡಿಕೊಳ್ಳುತ್ತಿರುವುದು ಎಸ್ ಪಿ ಶ್ರೇಣಿಯ ಅಧಿಕಾರಿಗಳ ಸಂಖ್ಯೆಯನ್ನು ಹೆಚ್ಚಿಸಲಿದೆ.