1,600 ಕೋಟಿ ರೂ. ವೆಚ್ಚದ ಚನ್ನರಾಯಪಟ್ಟಣ- ಮಾಕುಟ್ಟ ಹೆದ್ದಾರಿ ಯೋಜನೆಗೆ ಗಡ್ಕರಿ ಒಪ್ಪಿಗೆ: ಸಂಸದ ಪ್ರತಾಪ್ ಸಿಂಹ

ಚನ್ನರಾಯಪಟ್ಟಣ, ಅರಕಲಗೂಡು, ಶನಿವಾರಸಂತೆ, ಸೋಮವಾರಪೇಟೆ, ಮಡಿಕೇರಿ, ವಿರಾಜಪೇಟೆ ಮೂಲಕ ಮಾಕುಟ್ಟ ಬಳಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ 183 ಕಿ.ಮೀ. ಉದ್ದದ 1600 ಕೋಟಿ ವೆಚ್ಚದ ಹೆದ್ದಾರಿ ನಿರ್ಮಾಣ ಯೋಜನೆಗೆ ಅಂತಿಮ ಒಪ್ಪಿಗೆ 
ಕೇಂದ್ರ ಸಚಿವ ನಿತಿನ್ ಗಡ್ಕರಿ-ಪ್ರತಾಪ್ ಸಿಂಹ
ಕೇಂದ್ರ ಸಚಿವ ನಿತಿನ್ ಗಡ್ಕರಿ-ಪ್ರತಾಪ್ ಸಿಂಹ

ನವದೆಹಲಿ: ಚನ್ನರಾಯಪಟ್ಟಣ, ಅರಕಲಗೂಡು, ಶನಿವಾರಸಂತೆ, ಸೋಮವಾರಪೇಟೆ, ಮಡಿಕೇರಿ, ವಿರಾಜಪೇಟೆ ಮೂಲಕ ಮಾಕುಟ್ಟ ಬಳಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ 183 ಕಿ.ಮೀ. ಉದ್ದದ 1600 ಕೋಟಿ ವೆಚ್ಚದ ಹೆದ್ದಾರಿ ನಿರ್ಮಾಣ ಯೋಜನೆಗೆ ಅಂತಿಮ ಒಪ್ಪಿಗೆ ನೀಡಲು ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. 

ಇದೇ ಯೋಜನೆಗಾಗಿ ಪ್ರತಾಪ್ ಸಿಂಹ ಅವರು ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ,  ರಸ್ತೆ ಸಂಪರ್ಕದ ಕೊರತೆಯಿಂದಾಗಿ ಕೊಡಗು ಪ್ರವಾಸೋದ್ಯಮ ಪೂರ್ಣ ಪ್ರಮಾಣದಲ್ಲಿ  ಅಭಿವೃದ್ಧಿಯಾಗಿಲ್ಲ, ಈಗಿನ ರಸ್ತೆ ದಟ್ಟವಾಗಿ ನಗರ ಪ್ರದೇಶಗಳು ಬೆಳೆದಿರುವ ಚನ್ನರಾಯಪಟ್ಟಣ, ಹೊಳೆನರಸಿಪುರ, ಅರಕಲಗೂಡು ಹಾಗೂ ವಿರಾಜಪೇಟೆ ಮೂಲಕ ಹಾದುಹೋಗುತ್ತದೆ ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಲಿದೆ ಈ ರಸ್ತೆ ಕಾರಿಡಾರ್ ಯೋಜನೆಯನ್ನು ಪ್ರಕಟಿಸುವುದು ಕೊಡಗು ಜಿಲ್ಲೆಯ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಅತ್ಯಗತ್ಯ, 

ಈ ರಸ್ತೆ ಅಭಿವೃದ್ಧಿಯಿಂದಾಗಿ ಮಡಿಕೇರಿ-ಕೇರಳದ ನಡುವಿನ ರಸ್ತೆ ಸಂಪರ್ಕ ಉತ್ತಮಗೊಳ್ಳುತ್ತದೆ. ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಉತ್ತಮ ಸಂಪರ್ಕ ಸಿಗಲಿದೆ ಎಂದು ಸಂಸದರು ತಿಳಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com