ವಿದ್ಯಾರ್ಥಿ ಪಾಸ್ ಅವಧಿ ಡಿಸೆಂಬರ್ 31ರವೆಗೂ ವಿಸ್ತರಣೆ; ವಾಯುವಜ್ರ ಬಸ್ ದರ ಇಳಿಕೆ: ಬಿಎಂಟಿಸಿ

ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದಿದ್ದು, ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ ತನ್ನ ವಾಯುವಜ್ರ ಬಸ್ ಪ್ರಯಾಣದರವನ್ನು ಇಳಿಕೆ ಮಾಡಿದ್ದು, ಅಂತೆಯೇ ವಿದ್ಯಾರ್ಥಿ ಪಾಸ್ ಅವಧಿಯನ್ನು ಡಿ.31ರವೆಗೂ ವಿಸ್ತರಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದಿದ್ದು, ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ ತನ್ನ ವಾಯುವಜ್ರ ಬಸ್ ಪ್ರಯಾಣದರವನ್ನು ಇಳಿಕೆ ಮಾಡಿದ್ದು, ಅಂತೆಯೇ ವಿದ್ಯಾರ್ಥಿ ಪಾಸ್ ಅವಧಿಯನ್ನು ಡಿ.31ರವೆಗೂ ವಿಸ್ತರಣೆ ಮಾಡಿದೆ.

ಈ ಬಗ್ಗೆ ಸ್ವತಃ ಬಿಎಂಟಿಸಿ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಇನ್ಮುಂದೆ ವೋಲ್ವೊ ಬಸ್ ಟಿಕೆಟ್ ದರ ಶೇ.34ರಷ್ಟು ಕಡಿತ ಆಗಲಿದೆ. ವಜ್ರ ಸಾರಿಗೆಗಳ ಪ್ರಯಾಣ ದರ ಶೇಕಡಾ 34ರಷ್ಟು ಕಡಿತಗೊಳಿಸಿ ಆದೇಶ ನೀಡಲಾಗಿದೆ. ದಿನದ ಪಾಸ್, ಮಾಸಿಕ ಪಾಸ್ ಸೇರಿ ಟಿಕೆಟ್ ದರ ಪರಿಷ್ಕರಣೆ ಮಾಡಲಾಗಿದೆ. ಡಿಸೆಂಬರ್ 17ರಿಂದ ಜಾರಿಗೆ ಬರುವಂತೆ ಬಿಎಂಟಿಸಿಯಿಂದ ಆದೇಶ ನೀಡಲಾಗಿದೆ. 120 ರೂ ಇದ್ದ ದಿನದ ಪಾಸ್ ಇನ್ಮುಂದೆ 100 ರೂ. ಗೆ ಲಭ್ಯ ಆಗಲಿದೆ. 2,000 ರೂ ಇದ್ದ ಮಾಸಿಕ ಪಾಸ್ ದರ ಡಿಸೆಂಬರ್ 17ರಿಂದ 1,500 ರೂ ಆಗಲಿದೆ. 

ಅಂತೆಯೇ 50 ಕಿ.ಮೀ.​ಗೆ 90 ರೂ ಇದ್ದ ಟಿಕೆಟ್​ ದರ 50 ರೂ.ಗೆ ಇಳಿಕೆ ಮಾಡಲಾಗಿದೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.

ನೂತನ ವಜ್ರಬಸ್ ದರ ಪಟ್ಟಿ ಇಂತಿದೆ


ಈಗಾಗಲೇ 09 ಮಾರ್ಗಗಳಲ್ಲಿ 83 ಎಸಿ ಬಸ್​ ಕಾರ್ಯನಿರ್ವಹಿಸುತ್ತಿದೆ. 17/12/21 ರಿಂದ ಹೊಸದಾಗಿ 12 ಮಾರ್ಗಗಳಲ್ಲಿ 90 ಎಸಿ ಬಸ್​ಗಳನ್ನ ಹೆಚ್ಚುವರಿಯಾಗಿ ಬಿಡಲಾಗುವುದು. 120 ರೂ ಇದ್ದ ದಿನದ ಪಾಸು ಇನ್ನು ಮುಂದೆ 100ರೂ ಗೆ ಲಭ್ಯ ಆಗಲಿದೆ. 2000ರೂ ಇದ್ದ ಮಾಸಿಕ ಪಾಸಿನ ದರ ಶುಕ್ರವಾರದಿಂದ 1500ರೂ ಗೆ ಸಿಗಲಿದೆ. ಈ ಹಿಂದೆ 50 ಕಿಲೋಮೀಟರ್​ಗೆ 90ರೂ ಇದ್ದ ಟಿಕೆಟ್​ ದರ ಶುಕ್ರವಾರದಿಂದ 50 ರೂಗೆ ಇಳಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ವಿದ್ಯಾರ್ಥಿ ಪಾಸ್ ಅವಧಿ ಡಿ.31ರವೆಗೂ ವಿಸ್ತರಣೆ
ಮತ್ತೊಂದೆಡೆ ವಿದ್ಯಾರ್ಥಿಗಳ ಬಿಎಂಟಿಸಿ ಬಸ್ ಪಾಸ್ ಅವಧಿಯನ್ನು ಈ ವರ್ಷಾಂತ್ಯದ ವರೆಗೂ ಅಂದರೆ ಡಿಸೆಂಬರ್ 31ರವೆರಗೂ ವಿಸ್ತರಣೆ ಮಾಡಲಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com