ಬೆಂಗಳೂರು: ಹಾಲಿನ ಪುಡಿ ಪ್ಯಾಕೆಟ್ಗಳಲ್ಲಿ ಡ್ರಗ್ಸ್ ಪೂರೈಕೆ; ಪ್ರತಿಷ್ಠಿತ ಕಂಪನಿಯ ಮಹಿಳಾ ಎಕ್ಸಿಕ್ಯೂಟಿವ್ ವಿಚಾರಣೆ
ನೈಜೀರಿಯಾ ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿದ ಆರೋಪದಡಿ ಪ್ರತಿಷ್ಟಿತ ಮುಖ್ಯ ಕಾರ್ಯನಿರ್ವಾಹಕಿಯನ್ನು ಗೋವಿಂದಪುರ ಪೊಲೀಸರು ವಿಚಾರಣೆ ನಡೆಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
Published: 17th December 2021 09:12 AM | Last Updated: 17th December 2021 09:12 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ನೈಜೀರಿಯಾ ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿದ ಆರೋಪದಡಿ ಪ್ರತಿಷ್ಟಿತ ಮುಖ್ಯ ಕಾರ್ಯನಿರ್ವಾಹಕಿಯನ್ನು ಗೋವಿಂದಪುರ ಪೊಲೀಸರು ವಿಚಾರಣೆ ನಡೆಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ರಿಯಲ್ ಎಸ್ಟೇಟ್ ಕಂಪನಿಯ ಎಕ್ಸಿಕ್ಯೂಟಿವ್ ಡೆರೆಕ್ಟರ್ ಆಗಿರುವ ಮಹಿಳೆಗೆ ನೈಜೀರಿಯಾ ಡ್ರಗ್ ಪೆಡ್ಲರ್ ಜೊತೆ ಸಂಪರ್ಕ ವಿತ್ತು ಈ ಹಿನ್ನೆಲೆಯಲ್ಲಿ ಆಕೆಯನ್ನು ವಿಚಾರಣೆಗೊಳಪಡಿಸಲಾಗಿದೆ.
ನೈಜೀರಿಯಾ ಮೂಲದ ಥಾಮಸ್ ಕಾಲು ಎಂಬಾತನನ್ನು ಆಗಸ್ಟ್ ನಮಲ್ಲಿ ಬಂಧಿಸಿದ್ದ ಪೊಲೀಸರು ಆತನಿಂದ 10 ಲಕ್ಷ ರೂ. ಮೌಲ್ಯದ 260 ಮಾದಕ ವಸ್ತು, 110 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದರು
ಹಲವು ತಿಂಗಳಿಂದ ಡ್ರಗ್ಸ್ ಜಾಲದಲ್ಲಿ ತೊಡಗಿಸಿಕೊಂಡಿದ್ದ ಆರೋಪಿಯು ಗ್ರಾಹಕರಿಗೆ ಮಾದಕ ವಸ್ತು ಸರಬರಾಜು ಮಾಡಲು ನೂತನ ತಂತ್ರ ಕಂಡುಕೊಂಡಿದ್ದ. ಪ್ರತಿಷ್ಠಿತ ಕಂಪನಿಯ ಹಾಲಿನ ಪುಡಿ ಪ್ಯಾಕೇಟ್ ಹಾಗೂ ಡಬ್ಬಿಗಳನ್ನು ತರಿಸಿಕೊಂಡು ಒಳಭಾಗದಲ್ಲಿ ಡ್ರಗ್ಸ್ ಇಟ್ಟು ಪ್ಯಾಕ್ ಮಾಡಿ ಸರಬರಾಜು ಮಾಡುತ್ತಿದ್ದ.
ಬಂಧಿತ ಆರೋಪಿಯ ವಾಟ್ಸಾಪ್ ಚಾಟ್ ನಲ್ಲಿದ್ದ ಲಿಂಕ್ ಹಿನ್ನೆಲೆಯಲ್ಲಿ ಮಹಿಳೆಯನ್ನು ವಿಚಾರಣೆಗೊಳಪಡಿಸಲಾಗಿದೆ. ಎರಡು ತಿಂಗಳ ಹಿಂದೆಯೇ ಹಾಜರಾಗಲು ಮಹಿಳೆಗೆ ನೊಟೀಸ್ ನೀಡಲಾಗಿತ್ತು, ಆದರೆ ಆಕೆ ನಿರ್ಲಕ್ಷ್ಯಿಸಿದ್ದರು, ಪೊಲೀಸರು ಡ್ರಗ್ಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿದ ಹಿನ್ನೆಲೆಯಲ್ಲಿ ಮತ್ತೆ ಆಕೆಗೆ ಸಮನ್ಸ್ ನೀಡಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡ್ರಗ್ಸ್ ಸೇವನೆ ಬಗ್ಗೆ ತಿಳಿಯಲು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಒಂದು ವೇಳೆ ವೈದ್ಯಕೀಯ ವರದಿಯಲ್ಲಿ ಡ್ರಗ್ಸ್ ಸೇವನೆ ಸಾಬೀತಾದರೆ ಮುಂದಿನ ಕಾನೂನು ಕ್ರಮಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.