ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ಹೊರೆ: ಪ್ರವಾಹ ಪೀಡಿತ ಜಿಲ್ಲೆಗಳ ಪರಿಹಾರ ಚಟುವಟಿಕೆಗಳಿಗೆ ಅಡ್ಡಿ

ಹಣಕಾಸು ನಿರ್ವಹಣಾ ಪರಿಶೀಲನಾ ಸಮಿತಿಯು (FMRC) ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಚಟುವಟಿಕೆಗಳ ವೆಚ್ಚದ ಬದ್ಧತೆಯನ್ನು ಹೆಚ್ಚಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ರಾಜ್ಯವು ರಾಜ್ಯ ವಿಪತ್ತು ಪ್ರಕ್ರಿಯೆ ನಿಧಿ (SDRF) ಮತ್ತು ರಾಷ್ಟ್ರೀಯ ವಿಪತ್ತು ಪ್ರಕ್ರಿಯೆ ನಿಧಿ (NDRF) ಮಾನದಂಡಗಳನ್ನು ಮೀರಿ ವಿಸ್ತರಿಸುತ್ತಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಹಣಕಾಸು ನಿರ್ವಹಣಾ ಪರಿಶೀಲನಾ ಸಮಿತಿಯು (FMRC) ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಚಟುವಟಿಕೆಗಳ ವೆಚ್ಚದ ಬದ್ಧತೆಯನ್ನು ಹೆಚ್ಚಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ರಾಜ್ಯವು ರಾಜ್ಯ ವಿಪತ್ತು ಪ್ರಕ್ರಿಯೆ ನಿಧಿ (SDRF) ಮತ್ತು ರಾಷ್ಟ್ರೀಯ ವಿಪತ್ತು ಪ್ರಕ್ರಿಯೆ ನಿಧಿ (NDRF) ಮಾನದಂಡಗಳನ್ನು ಮೀರಿ ವಿಸ್ತರಿಸುತ್ತಿದೆ. ಇದರಿಂದಾಗಿ ರಾಜ್ಯದ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿದೆ ಎಂದು ಸಮಿತಿ(FMRC)ಹೇಳಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರವೇ ರಾಜ್ಯವು ವಿಪತ್ತು ಪರಿಹಾರ ವೆಚ್ಚಕ್ಕೆ ಬದ್ಧವಾಗಿರಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ. ಪ್ರಸ್ತುತ, ರಾಜ್ಯ ಸರ್ಕಾರವು ಎಸ್‌ಡಿಆರ್‌ಎಫ್ ಮಾನದಂಡಗಳಿಗೆ ವಿರುದ್ಧವಾಗಿ ಶೇಕಡಾ 50 ಕ್ಕಿಂತ ಹೆಚ್ಚು ಹಾನಿಗೊಳಗಾದ ಮನೆಗಳಿಗೆ ರೂ 5 ಲಕ್ಷ ಪರಿಹಾರವನ್ನು ನೀಡುತ್ತಿದೆ.

ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯಿಂದ ರಾಜ್ಯದ ಆರ್ಥಿಕ ಚಟುವಟಿಕೆಯು 2021-22 ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಿಂದ ಚೇತರಿಕೆ ಕಂಡಿದೆ ಎಂದು ಅದು ಹೇಳಿದೆ. ವಲಯಗಳಾದ್ಯಂತ ಆರ್ಥಿಕ ಚಟುವಟಿಕೆಯು ಚುರುಕುಗೊಂಡಿರುವುದರಿಂದ ಆದಾಯ ಸಂಗ್ರಹಣೆಯಲ್ಲಿ ಹೆಚ್ಚಳವು ಸಾಂಕ್ರಾಮಿಕ ಪೂರ್ವದ ಮಟ್ಟವನ್ನು ತಲುಪುತ್ತಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಮತ್ತು ಹಣಕಾಸು ಇಲಾಖೆಯ ಇತರ ಹಿರಿಯ ಅಧಿಕಾರಿಗಳ ನೇತೃತ್ವದ ಸಮಿತಿಯು, ಒಟ್ಟಾರೆಯಾಗಿ, ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಮೇ ಮತ್ತು ಜೂನ್‌ನಲ್ಲಿ ಲಾಕ್ ಡೌ ನ್ ಸಮಯದಲ್ಲಿ ಸರ್ಕಾರದ ಸಾರಿಗೆ ನಿರ್ಬಂಧಗಳನ್ನು ವಿಧಿಸಿದ ನಂತರ ಆದಾಯ ಸಂಗ್ರಹದಲ್ಲಿ ಕುಸಿತದಿಂದಾಗಿ ರಾಜ್ಯದ ಹಣಕಾಸಿನ ಸ್ಥಿತಿ ದುರ್ಬಲವಾಗಿದೆ ಎಂದು ಹೇಳಿದೆ. 

ರಾಜ್ಯದ ಸ್ವಂತ ತೆರಿಗೆಯಿಂದ ಆದಾಯವು 57,714 ಕೋಟಿಗಳಷ್ಟಿದೆ, ಇದು 1,24,202 ಕೋಟಿ ರೂಪಾಯಿಗಳ ಬಜೆಟ್ ಅಂದಾಜಿನ 46 ಪ್ರತಿಶತವಾಗಿದೆ. ಹಣಕಾಸು ವರ್ಷದ ಮೊದಲಾರ್ಧದಲ್ಲಿ, ರಾಜ್ಯವು ವಾಣಿಜ್ಯ ತೆರಿಗೆಯಿಂದ 36,285 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ, ಬಜೆಟ್ ಅಂದಾಜು 76,473 ಕೋಟಿ ರೂಪಾಯಿ, ಅಬಕಾರಿಯಿಂದ 12,396 ಕೋಟಿ ರೂಪಾಯಿ ಮತ್ತು ಮುದ್ರಾಂಕ ಮತ್ತು ನೋಂದಣಿ ಶುಲ್ಕದಿಂದ 5,942 ಕೋಟಿ ರೂಪಾಯಿ. 7,515 ಕೋಟಿ ಬಜೆಟ್‌ನ ಅಂದಾಜಿಗೆ ಹೋಲಿಸಿದರೆ ರಾಜ್ಯವು ಕೇವಲ 2,836 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದು, ಮೋಟಾರು ವಾಹನ ತೆರಿಗೆಯಿಂದ ಸಂಗ್ರಹಣೆಯು ಮಂದಗತಿಯಲ್ಲಿದೆ.

ಪ್ರಮುಖ ಮತ್ತು ಸಣ್ಣ ನೀರಾವರಿ ಕಾಮಗಾರಿಗಳು ಮತ್ತು ಲೋಕೋಪಯೋಗಿ ಇಲಾಖೆ ಯೋಜನೆಗಳಿಂದಾಗಿ ಹೆಚ್ಚಿದ ಬದ್ಧತೆಯನ್ನು ಸಮಿತಿಯು ಸೂಚಿಸಿದೆ. ಇದು ಆಯಾ ಇಲಾಖೆಗಳ ವಾರ್ಷಿಕ ಬಜೆಟ್‌ನ 5 ರಿಂದ 8 ಪಟ್ಟು ಹೆಚ್ಚಾಗಿದೆ. ಸರ್ಕಾರದ ಬದ್ಧತೆಗಳನ್ನು 1:3 ಅನುಪಾತಕ್ಕೆ ಇಳಿಸುವವರೆಗೆ ಯಾವುದೇ ಹೊಸ ಕಾಮಗಾರಿಗಳನ್ನು ಮಂಜೂರು ಮಾಡದಂತೆ FMRC ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com