ಕಲ್ಯಾಣ ಕರ್ನಾಟಕ ವಲಯ, ವಿಜಯಪುರ ಜಿಲ್ಲೆಯಲ್ಲಿ ಶಾಲಾ ಮಕ್ಕಳಲ್ಲಿ ಅಪೌಷ್ಠಿಕತೆ ನಿಯಂತ್ರಣಕ್ಕೆ  ಪ್ರಯತ್ನ-ಬಿ.ಸಿ. ನಾಗೇಶ್

ಆಹಾರ ಪದ್ಧತಿಯಲ್ಲಿ ಬದಲಾವಣೆಯೊಂದಿಗೆ ಮಕ್ಕಳಲ್ಲಿ ಅಪೌಷ್ಠಿಕತೆ ನಿಯಂತ್ರಣ ಮತ್ತು ಅವರ ಆರೋಗ್ಯ ವೃದ್ಧಿ ಖಾತ್ರಿಗಾಗಿ ಕಲ್ಯಾಣ ಕರ್ನಾಟಕ ವಲಯ ಮತ್ತು ವಿಜಯಪುರ ಜಿಲ್ಲೆಯ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣಿನಂತಹ ಹೆಚ್ಚಿನ ಶಕ್ತಿ ಮತ್ತು ಪೌಷ್ಠಿಕಾಂಶ ಯುಕ್ತ ಆಹಾರವನ್ನು ಪೂರೈಸಲು ಸರ್ಕಾರ ಪ್ರಯತ್ನಿಸುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಆಹಾರ ಪದ್ಧತಿಯಲ್ಲಿ ಬದಲಾವಣೆಯೊಂದಿಗೆ ಮಕ್ಕಳಲ್ಲಿ ಅಪೌಷ್ಠಿಕತೆ ನಿಯಂತ್ರಣ ಮತ್ತು ಅವರ ಆರೋಗ್ಯ ವೃದ್ಧಿ ಖಾತ್ರಿಗಾಗಿ ಕಲ್ಯಾಣ ಕರ್ನಾಟಕ ವಲಯ ಮತ್ತು ವಿಜಯಪುರ ಜಿಲ್ಲೆಯ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣಿನಂತಹ ಹೆಚ್ಚಿನ ಶಕ್ತಿ ಮತ್ತು ಪೌಷ್ಠಿಕಾಂಶ ಯುಕ್ತ ಆಹಾರವನ್ನು ಪೂರೈಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆದಾಗ್ಯೂ, ಮಕ್ಕಳಿಗೆ ಮೊಟ್ಟೆ ವಿತರಣೆಗೆ ಸಮಾಜದ ಕೆಲ ವರ್ಗಗಳು ವಿರೋಧ ವ್ಯಕ್ತಪಡಿಸುವುದರೊಂದಿಗೆ ಇದು ವಿವಾದಕ್ಕೆ ಕಾರಣವಾಗಿದೆ. ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ವಿತರಣೆಯನ್ನು ಸಮರ್ಥಿಸಿಕೊಂಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್, ಇದರಿಂದ ಮಕ್ಕಳ ಆರೋಗ್ಯ ವೃದ್ಧಿಯಾಗಲಿದ ಎಂದಿದ್ದಾರೆ.

ಮಕ್ಕಳ ಬಿಸಿಯೂಟದಲ್ಲಿ ಮೊಟ್ಟೆ ಸೇರಿಸಲು ಸರ್ಕಾರ ಏಕೆ ಉತ್ಸುಕವಾಗಿದೆ?

ಕೇಂದ್ರ ಸರ್ಕಾರದ ಮಕ್ಕಳ ಆರೋಗ್ಯ ಸ್ಥಿತಿಗತಿ ಮೌಲ್ಯಮಾಪನ ಪ್ರಕಾರ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು ಮತ್ತು ವಿಜಯಪುರದ ಅನೇಕ ಮಕ್ಕಳು ಪೌಷ್ಠಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ವಿವಿಧ ಕಾರಣಗಳಿಂದ ಅವರು ಅಪೌಷ್ಠಿಕತೆಗೆ ಒಳಗಾಗಿದ್ದಾರೆ. ಇದು ಅವರ ಬೆಳವಣಿಗೆ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆಹಾರ ಪದ್ಧತಿ ಮೂಲಕ ಮಕ್ಕಳಲ್ಲಿ ಅಪೌಷ್ಠಿಕತೆ ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು ಸೇರಿಸಲಾಗಿದೆ. 

ಮಕ್ಕಳಿಗೆ ಮೊಟ್ಟೆಯಿಲ್ಲದ ಊಟದ ಬೇಡಿಕೆ ಹಿನ್ನೆಲೆಯಲ್ಲಿ ಪರ್ಯಾಯ ಆಹಾರಗಳನ್ನು ಅನ್ವೇಷಿಸಲು ಸರ್ಕಾರ ಮುಕ್ತವಾಗಿದೆಯೇ?

ಮಕ್ಕಳಲ್ಲಿ ಅಪೌಷ್ಠಿಕತೆ ನಿಯಂತ್ರಣ ಮತ್ತು ಅವರ ಆರೋಗ್ಯ ಬೆಳವಣಿಗೆ ನೆರವಾಗಲು ಪ್ರಯತ್ನಿಸಲಾಗುತ್ತಿದೆ. ಒಂದು ವೇಳೆ ಇತರ ಪ್ರದೇಶಗಳಿಗೂ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆಯೊಂದಿಗೆ ಮಧ್ಯಾಹ್ನ ಬಿಸಿಯೂಟವನ್ನು ವಿಸ್ತರಿಸಲು ಸರ್ಕಾರ ಯೋಚಿಸಿದರೆ ಮೊಟ್ಟೆಗಿಂತ ಇತರ ಪರ್ಯಾಯ ಸಸ್ಯಹಾರಿ ಆಹಾರವನ್ನು ಬಿಸಿಯೂಟದಲ್ಲಿ ಸೇರಿಸಲು ನಾವು ಚಿಂತಿಸುತ್ತೇವೆ.

ಕಲ್ಯಾಣ ಕರ್ನಾಟಕದಲ್ಲಿ ಬಿಸಿಯೂಟದಲ್ಲಿ ಮೊಟ್ಟೆ, ಬಾಳೆಹಣ್ಣು ಯೋಜನೆ ಎಷ್ಟು ಪರಿಣಾಮಕಾರಿಯಾಗಿದೆ?

ಈ ಯೋಜನೆಯನ್ನು ಪೈಲಟ್ ಯೋಜನೆಯಾಗಿ ಕಲ್ಯಾಣ ಕರ್ನಾಟಕ ವಲಯ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಮೊಟ್ಟೆಗೆ ಪರ್ಯಾಯವಾಗಿ ಬಾಳೆಹಣ್ಣು ವಿತರಿಸಲಾಗುತ್ತಿದೆ. ಆದಾಗ್ಯೂ, ಪೌಷ್ಠಿಕಾಂಶ ಹೆಚ್ಚುಸುವಲ್ಲಿ ಮೊಟ್ಟೆಗೆ ಹೋಲಿಸಿದರೆ ಬಾಳೆಹಣ್ಣು ಸಾಕಾಗುವುದಿಲ್ಲ ಎಂಬುದಾಗಿ ಚಿಂತಿಸಲಾಗಿದ್ದು, ಪೌಷ್ಠಿಕಾಂಶ ಮಟ್ಟ ಹೆಚ್ಚಿರುವ ಆಹಾರ ಪದಾರ್ಥವನ್ನು ನಾವು ಸೇರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಮಾರ್ಚ್ ವರೆಗೂ ಈ ಯೋಜನೆ ಜಾರಿಯಲ್ಲಿರುತ್ತದೆ. ಮಕ್ಕಳ ಆರೋಗ್ಯವನ್ನು ಅಧ್ಯಯನದ ನಂತರ ನಾಲ್ಕು ತಿಂಗಳ ಬಳಿಕ ಇದನ್ನು ಇತರ ಪ್ರದೇಶಗಳಿಗೂ ವಿಸ್ತರಿಸುವ ಬಗ್ಗೆ ಸರ್ಕಾರ ಯೋಚಿಸಲಿದೆ. ಇದರಲ್ಲಿ ದೊಡ್ಡ ಬದಲಾವಣೆಯಾದಲ್ಲಿ ಮಾತ್ರ ಮುಂದುವರೆಸಿಕೊಂಡು ಹೋಗಲಾಗುವುದು, ಕಲ್ಯಾಣ ಕರ್ನಾಟಕದಲ್ಲಿ ನಾಲ್ಕು ತಿಂಗಳವರೆಗಿನ ಈ ಯೋಜನೆಗೆ ಸರ್ಕಾರ 40 ಕೋಟಿ ರೂ.ವೆಚ್ಚ ಮಾಡುತ್ತಿದೆ. ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿದರೆ ಎಷ್ಟು ವೆಚ್ಚ ತಗುಲಲಿದೆ ಎಂಬುದನ್ನು ಸರ್ಕಾರ ಇನ್ನೂ ಲೆಕ್ಕ ಹಾಕಿಲ್ಲ.

ರಾಜ್ಯದಲ್ಲಿ ಅನೇಕ ಶಾಲೆಗಳು, ವಿಶೇಷವಾಗಿ ಗ್ರಾಮಾಂತರ ಪ್ರದೇಶದಲ್ಲಿ ಮೂಲಸೌಕರ್ಯಗಳ ಕೊರೆತೆ ಇದೆ.

ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ರಾಜ್ಯದಲ್ಲಿನ ಕನಿಷ್ಠ 28,000 ಶಾಲೆಗಳು ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದರೆ 7000 ರಿಂದ 8000 ಶಾಲೆಗಳಲ್ಲಿ ಶೇ.50ಕ್ಕಿಂತ ಕಡಿಮೆಯಾದ ಮೂಲಭೂತ ಸೌಕರ್ಯಗಳನ್ನು ಹೊಂದಿವೆ. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ರಾಷ್ಟ್ರೀಯ ಸರಾಸರಿ 1: 30 ಗೆ ಹೋಲಿಸಿದರೆ ರಾಜ್ಯದ ಸರಾಸರಿ 1: 23 ರಷ್ಟಿದ್ದು, ಉತ್ತಮವಾಗಿದೆ.

ಕೋವಿಡ್ ಬಿಕ್ಕಟ್ಟಿನ ನಂತರ ಶಾಲೆಗಳ ಸುಗಮ ಕಾರ್ಯನಿರ್ವಹಣೆ ಎಷ್ಟು ಸವಾಲಿನದ್ದಾಗಿದೆ?

ಶಾಲೆಗಳನ್ನು ಆರಂಭಿಸಿದ್ದೆ ನಮಗೆ ಮೊದಲ ಸವಾಲಾಗಿತ್ತು. ಇದು ಸ್ವಲ್ಪ ಮಟ್ಟಿಗೆ ಅಪಾಯಕಾರಿಯಾಗಿದ್ದರೂ, ಅದನ್ನು ಯಶಸ್ವಿಯಾಗಿ ಮಾಡಿದ್ದೇವೆ. ಶಿಕ್ಷಕರ ಕೊರತೆ ಮತ್ತೊಂದು ಸವಾಲು. ಆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ದೀರ್ಘಾವಧಿಯ ಸ್ಥಗಿತದ ನಂತರ ಶಾಲೆಗಳನ್ನು ಪುನರಾರಂಭಿಸುವ ಮೂಲಕ ಸಾಧ್ಯವಿರುವ ಎಲ್ಲ ಹೊಂದಾಣಿಕೆಗಳನ್ನು ಮಾಡುವ ಮೂಲಕ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಕೆಲಸ ಮಾಡಲಾಗುತ್ತಿದೆ. ನಮ್ಮ ಮುಂದಿರುವ ಎಲ್ಲಾ ಸವಾಲುಗಳನ್ನು ಎದುರಿಸಲು ನಾವು ಸಿದ್ಧರಿದ್ದೇವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com