ಭಾಷೆಯೊಂದು ಸತ್ತರೆ, ಅದರಲ್ಲಿನ ಶ್ರೀಮಂತ ಸಂಸ್ಕೃತಿಯೂ ನಶಿಸುತ್ತದೆ: ಬಿ.ಕೆ ಹರಿಪ್ರಸಾದ್

ಭಾಷೆಯೊಂದು ಸತ್ತರೆ, ಅದರಲ್ಲಿ ಅಡಗಿರುವ ಶ್ರೀಮಂತ ಸಂಸ್ಕೃತಿಯೂ ನಶಿಸುತ್ತದೆ, ನೆಲದ ಭಾಷೆಗಳ ಉಳಿವಿಗಾಗಿ ರಾಷ್ಟ್ರೀಯ ಭಾಷಾ ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
ಬಿ.ಕೆ ಹರಿಪ್ರಸಾದ್
ಬಿ.ಕೆ ಹರಿಪ್ರಸಾದ್

ಬೆಂಗಳೂರು: ಭಾಷೆಯೊಂದು ಸತ್ತರೆ, ಅದರಲ್ಲಿ ಅಡಗಿರುವ ಶ್ರೀಮಂತ ಸಂಸ್ಕೃತಿಯೂ ನಶಿಸುತ್ತದೆ, ನೆಲದ ಭಾಷೆಗಳ ಉಳಿವಿಗಾಗಿ ರಾಷ್ಟ್ರೀಯ ಭಾಷಾ ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

ಪ್ರಜಾ ಪ್ರಕಾಶನವು ನಗರದಲ್ಲಿರುವ ಆಯೋಜಿಸಿದ್ದ ತುಳು-ಕೊಡವ ಭಾಷೆಗಳ ಅಳಿವು-ಉಳಿವು ಪುಸ್ತಕ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಮೇಲೆ ಆಕ್ರಮಣವಾಗುತ್ತಿದೆ.

ಆದುದರಿಂದ ನಾವು ಅಂಬೇಡ್ಕರ್ ನೀಡಿದ ಸಂವಿಧಾನವನ್ನು ರಕ್ಷಿಸಬೇಕಾಗಿದೆ. ಸಂವಿಧಾನ ನಾಶವಾದರೆ ಪಟೇಲರು, ಜಮೀನುದಾರರು ಹಾಗೂ ಶಾನುಭೋಗರು ಪುನಃ ನಮ್ಮನ್ನು ಕೂಲಿ ಆಳುಗಳಂತೆ ಆಳ್ವಿಕೆ ಮಾಡುತ್ತಾರೆ. ಹಾಗಾಗಿ ನಾವು ಸಂವಿಧಾನವನ್ನು ರಕ್ಷಿಸಬೇಕೆ ಹೊರತು ಆರ್‍ಎಸ್‍ಎಸ್ ರಕ್ಷಿಸುವುದಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಕೊಡವ ಭಾಷೆ ಮಾತನಾಡುವವರ ಸಂಖ್ಯೆ ಕ್ಷೀಣಿಸಿರುವುದಾಗಿ 2011ರ ಜನಗಣತಿ ಹೇಳುತ್ತದೆ. ಇದೇ ರೀತಿ ಮುಂದುವರಿದರೆ ಕೊಡವ ಭಾಷೆ ಮಾತನಾಡುವವರೇ ಇಲ್ಲವಾಗುತ್ತಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಬಹುತ್ವ ಭಾರತದಲ್ಲಿ ಹಲವಾರು ಭಾಷೆ ಮತ್ತು ಸಂಸ್ಕೃತಿಗಳು ಸೇರಿಕೊಂಡಿವೆ. ದೇಶದಲ್ಲಿರುವ 19,569 ಭಾಷೆಗಳನ್ನೂ ಜೋಪಾನವಾಗಿ ಕಾಪಾಡಲು ನೆರವಾಗುವ ಸಮಗ್ರ ಭಾಷಾ ನೀತಿಯನ್ನು ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ಸರಕಾರವು ದೇಶದಲ್ಲಿ ಕೇವಲ 28 ಸಾವಿರ ಮಂದಿ ಮಾತನಾಡುವ ಸಂಸ್ಕೃತಕ್ಕೆ 640 ಕೋಟಿ ರೂ. ಕೊಟ್ಟರೆ, 6 ಕೋಟಿ ಕನ್ನಡ ಮಾತನಾಡುವವರಿಗೆ 3 ಕೋಟಿ ಮೀಸಲಿಡುತ್ತಿದೆ. ಆದರೆ ಸಂವಿಧಾನದಲ್ಲಿ ಎಲ್ಲಾ ಭಾಷೆಗಳ ರಕ್ಷಣೆಯ ಖಾತ್ರಿ ನೀಡಿದ್ದರೂ, ತುಳು ಹಾಗೂ ಕೊಡವ ಭಾಷೆಗೆ ಅನುಧಾನವನ್ನು ಮೀಸಲಿಡುವುದಿಲ್ಲ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com