ಕರ್ನಾಟಕದ ಅನಾಥಾಶ್ರಮಗಳಿಗೆ ತೆಲಂಗಾಣದ ಮಾದರಿ ಅಳವಡಿಕೆ

ರಾಜ್ಯದ ಅನಾಥಾಶ್ರಮಗಳಲ್ಲಿ ಆಗಬೇಕಿರುವ ಬದಲಾವಣೆಗಳಿಗಾಗಿ ಉತ್ತಮ ಮಾದರಿಗಳ ಅಧ್ಯಯನದಲ್ಲಿ ತೊಡಗಿದ್ದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಶೀಘ್ರವೇ ತಮ್ಮ ಅಧ್ಯಯನದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ದಾವಣಗೆರೆ: ರಾಜ್ಯದ ಅನಾಥಾಶ್ರಮಗಳಲ್ಲಿ ಆಗಬೇಕಿರುವ ಬದಲಾವಣೆಗಳಿಗಾಗಿ ಉತ್ತಮ ಮಾದರಿಗಳ ಅಧ್ಯಯನದಲ್ಲಿ ತೊಡಗಿದ್ದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಶೀಘ್ರವೇ ತಮ್ಮ ಅಧ್ಯಯನದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. 

ಅಧ್ಯಕ್ಷರಾದ ಕೆ.ಜಯಪ್ರಕಾಶ್ ಹೆಗ್ಡೆ ಸ್ವತಃ ಈ ಬಗ್ಗೆ ಮಾಹಿತಿ ನೀಡಿದ್ದು, ತಾವು ಹಾಗೂ ತಮ್ಮ ತಂಡದ ಸದಸ್ಯರು ಅಧ್ಯಯನದ ಭಾಗವಾಗಿ ತೆಲಂಗಾಣಕ್ಕೆ ತೆರಳಿದ್ದಾಗಿ ಮಾಹಿತಿ ನೀಡಿದ್ದು ಅಲ್ಲಿನ ಉತ್ತಮ ವ್ಯವಸ್ಥೆಗಳನ್ನು ಇಲ್ಲಿಯೂ ಅಳವಡಿಸಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ. 

ಅನಾಥಾಶ್ರಮಗಳಲ್ಲಿ ಅಲ್ಲಿ ನೀಡಲಾಗುತ್ತಿರುವ ಸೌಲಭ್ಯಗಳ ಅಧ್ಯಯನ ನಡೆಸಲಾಗಿದ್ದು, ಕರ್ನಾಟಕದ ಅನಾಥಾಶ್ರಮಗಳಲ್ಲಿಯೂ ಇದೇ ಮಾದರಿಯ ಸೌಲಭ್ಯ ನೀಡಬೇಕೆಂಬ ಅಂಶವನ್ನೊಳಗೊಂಡ ವರದಿಯನ್ನು ಸರ್ಕಾರಕ್ಕೆ ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ ಎಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಹೆಗ್ಡೆ ತಿಳಿಸಿದ್ದಾರೆ. 

ಅನಾಥರಿಗೆ ಜಾತಿ ಪ್ರಮಾಣಪತ್ರ ಸಿಗುತ್ತಿಲ್ಲ ಈ ಕಾರಣದಿಂದಾಗಿ ಹಲವು ಪ್ರಯೋಜನಗಳಿಂದ ವಂಚಿತರಾಗಿದ್ದಾರೆ. 

ಅನಾಥರ ಸಮೀಕ್ಷೆ ನಡೆಸುವುದು ಹಾಗೂ ಅವರಿಗೆ ನೀಡಲಾಗುವ ಸೌಲಭ್ಯಗಳ ಬಗ್ಗೆ ತೆಲಂಗಾಣಕ್ಕೆ ತೆರಳಿ ಅಧ್ಯಯನ ಮಾಡಿದ್ದೇವೆ. ಅನಾಥರನ್ನು ಅವರ ಸಾಮಾಜಿಕ-ಆರ್ಥಿಕ ವಿಭಾಗಕ್ಕೆ ತಕ್ಕಂತೆ ನಿರ್ದಿಷ್ಟ ವಿಭಾಗಕ್ಕೆ ಸೇರಿಸಬೇಕು. 16 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನೂ ಸಮೀಕ್ಷೆಯಲ್ಲಿ ಸೇರಿಸಿಕೊಳ್ಳಲಾಗುತ್ತದೆ ಎಂದು ಹೆಗ್ಡೆ ವಿವರಿಸಿದ್ದಾರೆ. ಆಯೋಗದ ಸದಸ್ಯರಾದ ಕಲ್ಯಾಣ್ ಕುಮಾರ್, ರಾಜಶೇಖರ್, ಅರುಣ್ ಕುಮಾರ್, ಸುವರ್ಣ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಗಂಗಪ್ಪ ಸೇರಿದಂತೆ ಹಲವರು ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com