ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಗ್ಗೆ 2 ಬಾರಿ ಭೂಕಂಪನ: ಹಲವು ಗ್ರಾಮದಲ್ಲಿ ಭಾರೀ ಸ್ಪೋಟದ ಶಬ್ದ
ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಸ್ಫೋಟದ ಅನುಭವವಾಗಿದೆ. ಬೆಳಗ್ಗೆ 7 ಗಂಟೆಯಿಂದ 7.30ರೊಳಗೆ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.
Published: 22nd December 2021 10:12 AM | Last Updated: 22nd December 2021 01:47 PM | A+A A-

ಸಾಂದರ್ಭಿಕ ಚಿತ್ರ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಸ್ಫೋಟದ ಅನುಭವವಾಗಿದೆ. ಬೆಳಗ್ಗೆ 7 ಗಂಟೆಯಿಂದ 7.30ರೊಳಗೆ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.
'3.1 ತೀವ್ರತೆಯ ಭೂಕಂಪನ, ಡಿಸೆಂಬರ್ 12ರಂದು ಬೆಳಿಗ್ಗೆ 7.09ರ ವೇಳೆಗೆ ಸಂಭವಿಸಿದೆ. ಬೆಂಗಳೂರಿನ ಉತ್ತರ, ಈಶಾನ್ಯ ಭಾಗದ 70 ಕಿಮೀ ದೂರದಲ್ಲಿ 11 ಕಿಮೀ ಆಳದಲ್ಲಿ ಭೂಕಂಪನ ಉಂಟಾಗಿದೆ' ಎಂದು ಎನ್ ಎಸ್ ಸಿ ಟ್ವೀಟ್ ಮಾಡಿದೆ.
ಇದಾಗಿ ಐದು ನಿಮಿಷದಲ್ಲಿಯೇ ಮತ್ತೊಮ್ಮೆ ಭೂಕಂಪನ ಉಂಟಾಗಿದ್ದು, ಈ ಬಾರಿ ತೀವ್ರತೆ ಕೊಂಚ ಹೆಚ್ಚಿತ್ತು. ಬೆಂಗಳೂರು ಉತ್ತರ- ಈಶಾನ್ಯ ಭಾಗದ 66 ಕಿಮೀ ದೂರದಲ್ಲಿ 23 ಕಿಮೀ ಆಳದಲ್ಲಿ ಬೆಳಿಗ್ಗೆ 7.14ರ ಸುಮಾರಿಗೆ 3.3 ತೀವ್ರತೆಯಲ್ಲಿ ಭೂಮಿ ನಡುಗಿದೆ ಎಂದು ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.
Earthquake of Magnitude:3.3, Occurred today at 7.14 am at Chikkaballapura, some 60 kms away from Bengaluru reports @NCS_Earthquake
— Ashwini M Sripad/ಅಶ್ವಿನಿ ಎಂ ಶ್ರೀಪಾದ್
ಚಿಕ್ಕಬಳ್ಳಾಪುರ ತಾಲೂಕಿನ ಶೆಟ್ಟಿಗೆರೆ, ಪಿಲ್ಲಗುಂಡ್ಲಹಳ್ಳಿ, ಬೈಯಪ್ಪನಹಳ್ಳಿ, ಆದನ್ನಗಾರಹಳ್ಳಿ, ರೆಡ್ಡಿ ಗೊಲ್ಲವಾರಹಳ್ಳಿ, ಪೆರೇಸಂದ್ರ ಗ್ರಾಮದ ಸುತ್ತಮುತ್ತ ಸ್ಫೋಟದ ಸದ್ದು ಕೇಳಿ ಬಂದಿದೆ. 2 ಬಾರಿ ಭೂಮಿ ಕಂಪಿಸಿದ್ದು ಲಘು ಭೂಕಂಪವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಕೇಂದ್ರ (ಕೆ.ಎಸ್.ಎನ್.ಡಿ.ಎಂ.ಸಿ.) ಸ್ಪಷ್ಟ ಪಡಿಸಿದೆ.
Earthquake of Magnitude:3.1, Occurred on 22-12-2021, 07:09:36 IST, Lat: 13.59 & Long: 77.73, Depth: 11 Km ,Location: 70km NNE of Bengaluru, Karnataka, India for more information download the BhooKamp App https://t.co/QwfkjFOGRX pic.twitter.com/LQ87OjGcA7
— National Center for Seismology (@NCS_Earthquake) December 22, 2021