ಮಡಿಕೇರಿಯಲ್ಲಿ ದಾರುಣ ಘಟನೆ: ಆಟದ ಮೈದಾನದಲ್ಲೇ ಕುಸಿದು ಬಿದ್ದು ಯುವ ಹಾಕಿ ಆಟಗಾರ ಸಾವು
ಮೂರ್ನಾಡು ಎಂಬಲ್ಲಿ ಚೌರಿರ ಹಾಕಿ ಪಂದ್ಯಾವಳಿಗೆ ಇಂದು ಚಾಲನೆ ನೀಡಲಾಗಿತ್ತು. ಒಟ್ಟು 90 ಕೊಡವ ಕುಟುಂಬಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು.
Published: 25th December 2021 06:08 PM | Last Updated: 28th December 2021 01:52 PM | A+A A-

ತೊಟ್ಟಿಯಂಡ ಸೋಮಣ್ಣ
ಮಡಿಕೇರಿ: ಯುವ ಹಾಕಿ ಆಟಗಾರನೊಬ್ಬ ಆಟವಾಡುತ್ತಲೇ ಮೈದಾನದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಡಿಕೇರಿಯಲ್ಲಿ ಜರುಗಿದೆ. ಮೃತ ಆಟಗಾರನ ಹೆಸರು ತೊಟ್ಟಿಯಂಡ ಸೋಮಣ್ಣ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹೃದಯಾಘಾತವಾದ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ವೈದ್ಯನಿಗೂ ಹೃದಯಾಘಾತ, ಇಬ್ಬರೂ ಸಾವು
ಮೂರ್ನಾಡು ಎಂಬಲ್ಲಿ ಚೌರಿರ ಹಾಕಿ ಪಂದ್ಯಾವಳಿಗೆ ಇಂದು ಚಾಲನೆ ನೀಡಲಾಗಿತ್ತು. ಒಟ್ಟು 90 ಕೊಡವ ಕುಟುಂಬಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು.
ಇದನ್ನೂ ಓದಿ: ಪ್ರವಚನ ನೀಡುತ್ತಿರುವಾಗಲೇ ಹೃದಯಾಘಾತದಿಂದ ಸ್ವಾಮೀಜಿ ಸಾವು!
ಬತ್ತಿರ ಕುಟುಂಬ ಹಾಗೂ ತೊಟ್ಟಿಯಂಡ ಕುಟುಂಬಗಳ ನಡುವೆ ಹಾಕಿ ಪಂದ್ಯ ಏರ್ಪಟ್ಟಿತ್ತು. ಈ ಪಂದ್ಯ ನಡೆಯುತ್ತಿರುವ ವೇಳೆ 23 ವರ್ಷದ ತೊಟ್ಟಿಯಂಡ ತಂಡದ ಆಟಗಾರ ಸೋಮಣ್ಣ ಮೂರ್ಛೆ ತಪ್ಪಿದ್ದರು.
ಇದನ್ನೂ ಓದಿ: ಹೃದಯ ಸ್ತಂಭನದಿಂದ ಹಠಾತ್ ಸಾವು: ಏಕೆ, ಹೇಗೆ? (ಕುಶಲವೇ ಕ್ಷೇಮವೇ)
ಕೂಡಲೆ ಸೋಮಣ್ಣ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಅವರನ್ನು ಮಡಿಕೇರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಬದುಕುಳಿಯಲಿಲ್ಲ. ಸಾವಿಗೆ ಹೃದಯಾಘಾತ ಕಾರಣ ಎನ್ನಲಾಗುತ್ತಿದೆ.
ಇದನ್ನೂ ಓದಿ: ಯುವಜನತೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ಕಾರಣವೇನು, ತಪ್ಪಿಸಲು ಏನು ಮಾಡಬಹುದು?