ರಾಜ್ಯದಲ್ಲಿ ಹಿರಿಯ ನಾಗರಿಕರ ಡೇ ಕೇರ್ ಸೆಂಟರ್ ಶೀಘ್ರ ಪುನರಾರಂಭ: ಕೊರೊನಾ ಮಾರ್ಗಸೂಚಿ ಪಾಲನೆ ಕಡ್ಡಾಯ

ಕೆಲ ಮನೆಗಳಲ್ಲಿ ಮನೆಯವರು ಅವರನ್ನು ಚೆನ್ನಾಗಿ ನೋಡಿಕೊಂಡರೆ, ಇನ್ನು ಕೆಲ ಮನೆಗಳಲ್ಲಿ ಹಿರಿಯರಿಗೆ ಬೇಕಾದ ಆಹಾರ ಮತ್ತು ನಿರ್ವಹಣಾ ಸೌಲಭ್ಯ ಸಿಕ್ಕಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಿರಿಯ ನಾಗರಿಕರ ಡೇ ಕೇರ್ ಕೇಂದ್ರಗಳು ಕೊರೊನಾ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದವು. ಇದೀಗ ಅವುಗಳನ್ನು ಮತ್ತೆ ತೆರೆಯುವ ಕುರಿತು ಸರ್ಕಾರ ಕ್ರಮಕ್ಕೆ ಮುಂದಾಗಿದೆ. 

ಈ ಬಗ್ಗೆ ಕಾರ್ಯಪ್ರವೃತ್ತವಾಗಿರುವ ಆರೋಗ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಅನೇಕ ಜಿಲ್ಲೆಗಳಲ್ಲಿ ವಯೋವೃದ್ಧರ ಡೇ ಕೇರ್ ಸೆಂಟರುಗಳನ್ನು ಪುನರಾರಂಭಿಸುವಂತೆ ಹಿರಿಯ ನಾಗರಿಕರು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ಹಿರಿಯ ನಾಗರಿಕರ ಡೇ ಕೇರ್ ಸೆಂಟರುಗಳು ಮುಚ್ಚಲ್ಪಟ್ಟಿದ್ದರಿಂದ ಅನೇಕ ಹಿರಿಯರು ಅವರವರ ಮನೆಗಳಿಗೆ ತೆರಳಿದ್ದರು. ಕೆಲ ಮನೆಗಳಲ್ಲಿ ಮನೆಯವರು ಅವರನ್ನು ಚೆನ್ನಾಗಿ ನೋಡಿಕೊಂಡರೆ, ಇನ್ನು ಕೆಲ ಮನೆಗಳಲ್ಲಿ ಹಿರಿಯರಿಗೆ ಬೇಕಾದ ಆಹಾರ ಮತ್ತು ನಿರ್ವಹಣಾ ಸೌಲಭ್ಯ ಸಿಕ್ಕಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com