ಕೊಪ್ಪಳ ಜಿಲ್ಲೆಯ ಆನೆಗುಂದಿ ಸುತ್ತಮುತ್ತ ಅಕ್ರಮ ರೆಸಾರ್ಟ್ ಗಳಿಗೆ ಬೀಗ!

ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿ ಸುತ್ತಮುತ್ತ ಇರುವ ಸುಮಾರು 50ಕ್ಕೂ ಹೆಚ್ಚು ಅಕ್ರಮ ರೆಸಾರ್ಟ್ ಗಳನ್ನು ಸಹಾಯಕ ಆಯುಕ್ತ ನಾರಾಯಣ ರೆಡ್ಡಿ ನೇತೃತ್ವದ ಅಧಿಕಾರಿಗಳ ತಂಡ ಮುಚ್ಚಿದೆ. ರೆಸಾರ್ಟ್ ಗಳ ಕಾರ್ಯಚಟುವಟಿಕೆಗಳನ್ನು ನಿಲ್ಲಿಸಲು 24 ಗಂಟೆಗಳ ಗಡುವನ್ನು ನೀಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿ ಸುತ್ತಮುತ್ತ ಇರುವ ಸುಮಾರು 50ಕ್ಕೂ ಹೆಚ್ಚು ಅಕ್ರಮ ರೆಸಾರ್ಟ್ ಗಳನ್ನು ಸಹಾಯಕ ಆಯುಕ್ತ ನಾರಾಯಣ ರೆಡ್ಡಿ ನೇತೃತ್ವದ ಅಧಿಕಾರಿಗಳ ತಂಡ ಮುಚ್ಚಿದೆ. ರೆಸಾರ್ಟ್ ಗಳ ಕಾರ್ಯಚಟುವಟಿಕೆಗಳನ್ನು ನಿಲ್ಲಿಸಲು 24 ಗಂಟೆಗಳ ಗಡುವನ್ನು ನೀಡಲಾಗಿದೆ.

ಅಕ್ರಮ ರೆಸಾರ್ಟ್ ಗಳ ವಿರುದ್ಧ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸಹಾಯಕ ಆಯುಕ್ತರು ಸೇರಿದಂತೆ ಅಧಿಕಾರಿಗಳಿಗೆ 48 ಗಂಟೆಗಳ ಗಡುವು ನೀಡಿ ಮೊನ್ನೆ ಮಂಗಳವಾರ ಕೊಪ್ಪಳ ಡಿಸಿ ಎಸ್ ವಿಕಾಸ್ ಕಿಶೋರ್ ಆದೇಶ ನೀಡಿದ್ದರು. ಅಕ್ರಮ ಚಟುವಟಿಕೆಗಳ ಕಾರಣದಿಂದ ಕಳೆದ ವರ್ಷ ಮಾರ್ಚ್ 3ರಂದು ವಿರುಪಾಪುರ ಗಡ್ಡಿಯಲ್ಲಿ (ಒಂದು ದ್ವೀಪ) ಅಕ್ರಮ ರೆಸಾರ್ಟ್‌ಗಳನ್ನು ನೆಲಸಮಗೊಳಿಸಿದ ನಂತರ ಈ ರೆಸಾರ್ಟ್‌ಗಳು ಕೃಷಿ ಭೂಮಿಯಲ್ಲಿ ಮತ್ತೆ ತಲೆಯೆತ್ತಿದ್ದವು.

ಗಂಗಾವತಿ ತಾಲೂಕಿನ ಆನೆಗುಂದಿ ಮತ್ತು 14 ಗ್ರಾಮಗಳು, ಪಕ್ಕದ ಮತ್ತು ಹೊಸದಾಗಿ ರಚಿಸಲಾಗಿರುವ ವಿಜಯನಗರ ಜಿಲ್ಲೆಯ 14 ಗ್ರಾಮಗಳು, ಹಂಪಿ ವಿಶ್ವ ಪರಂಪರೆ ಪ್ರದೇಶ ಮತ್ತು ನಿರ್ವಹಣಾ ಪ್ರಾಧಿಕಾರ (HWHAMA) ಅಡಿಯಲ್ಲಿ ಬರುತ್ತವೆ, ಅಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸುವುದನ್ನು ನಿಷೇಧಿಸಲಾಗಿದೆ.

ಹಂಪಿ, ಆನೆಗುಂದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡುವ ಅಂತರರಾಷ್ಟ್ರೀಯ ಪ್ರವಾಸಿಗರ ಹಿನ್ನೆಲೆಯಲ್ಲಿ ಇಲ್ಲಿ ರೆಸಾರ್ಟ್ ಗಳ ನಿರ್ಮಾಣ ಹೆಚ್ಚುತ್ತವೆ. ಅಕ್ರಮ ರೆಸಾರ್ಟ್‌ಗಳ ಮಾಲೀಕರು ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ರೆಸಾರ್ಟ್‌ಗಳನ್ನು ಕ್ರಮಬದ್ಧಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಹಂಪಿ ವಿಶ್ವ ಪರಂಪರೆ ಪ್ರದೇಶ ಮತ್ತು ನಿರ್ವಹಣಾ ಪ್ರಾಧಿಕಾರಕ್ಕೆ 'ಮಾಸ್ಟರ್ ಪ್ಲಾನ್' ನಿಯಮ ಪರಿಷ್ಕರಣೆ ನಡೆಯುತ್ತಿದ್ದರೂ, ಅದಕ್ಕೆ ರಾಜ್ಯ ಸರ್ಕಾರ ಮತ್ತು ಈಗಿರುವ ನಿಯಮಗಳಿಂದ ಅನುಮತಿ ಸಿಗಬೇಕು. ಕೃಷಿ ಭೂಮಿಯಲ್ಲಿ ರೆಸಾರ್ಟ್ ಗಳು, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಸಾಧ್ಯವಿಲ್ಲ. ಒಂದು ವೇಳೆ ರೆಸಾರ್ಟ್ ಗಳನ್ನು ಮುಚ್ಚದಿದ್ದರೆ ಸರ್ಕಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಹಂಪಿ ನಿರ್ವಹಣಾ ಪ್ರಾಧಿಕಾರ ಆಯುಕ್ತ ಮತ್ತು ಸಹಾಯಕ ಆಯುಕ್ತರು ಸೇರಿದಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಕ್ರಮ ರೆಸಾರ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಳೆದ ಸೆಪ್ಟೆಂಬರ್ ನಲ್ಲಿಯೇ ಪತ್ರ ಬರೆದಿದ್ದರು. ಆದರೆ ಇದುವರೆಗೆ ಯಾವುದೇ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ 48 ಗಂಟೆಗಳ ಗಡುವು ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com