
ರಮೇಶ್ ಬಾನೂತ್
ಬೆಂಗಳೂರು: ಐಪಿಎಸ್ ಅಧಿಕಾರಿ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆ ತೆರೆದಿರುವುದು ವರದಿ ಆಗಿದೆ.
ಸಿಐಡಿ ಎಸ್ಐಟಿಯ ಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ಬಾನೂತ್ ಅವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಲಾಗಿದೆ.
ಕಿಡಿಗೇಡಿಗಳು, ಐಪಿಎಸ್ ಅಧಿಕಾರಿ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರಿಯ ನಿಕಟವರ್ತಿಗಳ ಬಳಿ ಖಾಸಗಿ ವಿಚಾರಗಳ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.
ರಮೇಶ್ ಬಾನೂತ್ ತಮ್ಮ ಫೇಸ್ ಬುಕ್ ಖಾತೆ ಪರಿಶೀಲನೆ ವೇಳೆ ಈ ನಕಲಿ ಖಾತೆ ಪತ್ತೆ ಮಾಡಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಆವರು ಸಿಐಡಿ ಸೈಬರ್ ಗೆ ಈ ಸಂಬಂಧ ದೂರು ಸಲ್ಲಿಸಿದ್ದಾರೆ.
ತಮ್ಮ ವೈಯುಕ್ತಿಕ ಲಾಭಕ್ಕೆ ನಕಲಿ ಖಾತೆ ಸೃಷ್ಟಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.