ಕೆಲವು ಪ್ರಯತ್ನಗಳು ವಿಫಲಗೊಂಡರೂ ನಿರಾಶರಾಗಬೇಡಿ: ಇಸ್ರೋ ಅಧ್ಯಕ್ಷ ಕೆ.ಶಿವನ್
ಮನುಷ್ಯನದಲ್ಲಿ ನಿತ್ಯ ಹೊಸ ರೀತಿಯ ಆಲೋಚನೆಗಳು, ಹುಚ್ಚು ಕಲ್ಪನೆಗಳು ಬಂದು ಹೋಗುತ್ತಿರುತ್ತವೆ. ಇಂತಹ ಆಲೋಚನೆಗಳ ಅನುಷ್ಠಾನಕ್ಕೆ ಪ್ರಯತ್ನಪಟ್ಟಾಗ ಹೊಸ ಮತ್ತು ಮಹತ್ವದ ಅನ್ವೇಷಣೆಗಳು ಸಾಧ್ಯವಾಗುತ್ತಿವೆ. ಈ ಹಂತದಲ್ಲಿ ಕೆಲ ಪ್ರಯತ್ನಗಳು ವಿಫಲಗೊಂಡರೂ ನಿರಾಶರಾಗಬೇಡಿ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರು ಹೇಳಿದ್ದಾರೆ.
Published: 01st February 2021 10:19 AM | Last Updated: 01st February 2021 03:10 PM | A+A A-

ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಇಸ್ರೋ ಮುಖ್ಯಸ್ಥ ಶಿವನ್
ಬೆಂಗಳೂರು: ಮನುಷ್ಯನದಲ್ಲಿ ನಿತ್ಯ ಹೊಸ ರೀತಿಯ ಆಲೋಚನೆಗಳು, ಹುಚ್ಚು ಕಲ್ಪನೆಗಳು ಬಂದು ಹೋಗುತ್ತಿರುತ್ತವೆ. ಇಂತಹ ಆಲೋಚನೆಗಳ ಅನುಷ್ಠಾನಕ್ಕೆ ಪ್ರಯತ್ನಪಟ್ಟಾಗ ಹೊಸ ಮತ್ತು ಮಹತ್ವದ ಅನ್ವೇಷಣೆಗಳು ಸಾಧ್ಯವಾಗುತ್ತಿವೆ. ಈ ಹಂತದಲ್ಲಿ ಕೆಲ ಪ್ರಯತ್ನಗಳು ವಿಫಲಗೊಂಡರೂ ನಿರಾಶರಾಗಬೇಡಿ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರು ಹೇಳಿದ್ದಾರೆ.
ಶನಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 55ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿಯ ವಿವಿಧ ವಿಭಾಗ-ವಿಷಯಗಳಲ್ಲಿ 2019-20ನೇ ಸಾಲಿನಲ್ಲಿ ಪ್ರಥಮ ರ್ಯಾಂಕ್ ಪಡೆದಿರುವ 196 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಪಿಹೆಚ್'ಡಿ ಪದವೀಧರರಿಗೆ ಪದವಿ ಪ್ರದಾನ ಮಾಡಿದರು.
ಈ ವೇಳೆ ಮಾತನಾಡಿದ ಅವರು. ವಿದ್ಯಾರ್ಥಿಗಳು ತಮಗೆ ಹೊಳೆಯುವ ವಿಚಿತ್ರ, ವಿಭಿನ್ನ ಆಲೋಚನೆಗಳ ಅನುಷ್ಠಾನಕ್ಕೆ ಶ್ರಮ ನಿರಂತರ ಪ್ರಯತ್ನಗಳು ಪಟ್ಟಾಗ ಹೊಸ ಅನ್ವೇಷಣೆಗಳು ಹೊರಬರುತ್ತವೆ. ಕೆಲವೊಮ್ಮೆ ಈ ಪ್ರಯತ್ನಗಳು ವಿಫಲಗೊಳ್ಳಬಹುದು. ಟೀಕೆಗಳು ಬರಬಹುದು. ಆದರೆ, ಯಾವುದಕ್ಕೂ ನಿರಾಶರಾಗಬಾರದು. ನಿರಂತರ ಪ್ರಯತ್ನದಿಂದ ನಿರೀಕ್ಷೆಗೂ ಮೀರಿದ ಪ್ರತಿಫಲ ಸಾಧ್ಯವಿದೆ ಎಂದು ಹೇಳಿದ್ದಾರೆ
ವಿಫಲವಾದರೂ ಪ್ರಯತ್ನ ಮುಂದುವರೆಸಿದರೆ ಬಯಸಿದ್ದಕ್ಕಿಂತಲೂ ದೊಡ್ಡದು ಸಿಗುತ್ತದೆ ಎಂಬುದಕ್ಕೆ ನಾನೇ ಸಾಕ್ಷಿ. ಪ್ರೌಢಶಿಕ್ಷಣದ ನಂತರ ಎಂಜಿನಿಯರಿಂಗ್ ಓದುವ ಆಸೆ ಇತ್ತು. ಆದರೆ, ಬಿ.ಎಸ್ಸಿ ಗಣಿತ ಅಭ್ಯಾಸ ಮಾಡಿದೆ. ನಂತರ, ಇಸ್ರೋ ಸೇರುವ ಹಂಬಲವಿತ್ತು. ಆದರೆ, ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಕೆಲಸ ಮಾಡಬೇಕಾಯಿತು. ಜೀವನದ ಎಲ್ಲಾ ಹಂತದಲ್ಲಿ ಮೌಲ್ಯಯುತ ಪಾಠ ಕಲಿತಿದ್ದೇನೆ. ಈಗ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದೇನೆಂದು ತಿಳಿಸಿದರು.
ಎಲಾನ್ ಮಸ್ಕ್ ಅಷ್ಟೊಂದು ಖ್ಯಾತಿ ಗಳಿಸಲು ಹೇಗೆ ಸಾಧ್ಯವಾಯಿತು? ಏಕೆಂದರೆ ಅವರ ಕ್ರೇಜಿ ಐಡಿಯಾ (ಹುಚ್ಚು ಆಲೋಚನೆಗಳು)ಗಳಿಂದ. ನಿಮ್ಮ ಪ್ರಯತ್ನಗಳು ವಿಫಲಗೊಂಡಾಗ ನಿರಾಶೆಯಾಗದಿರಿ. ನಿಮ್ಮ ಹುಚ್ಚು ಆಲೋಚನೆಗಳನ್ನು ಮುಂದುವರೆಸಿ ಎಂದಿದ್ದಾರೆ.
ಇಸ್ರೋ ತಂತ್ರಜ್ಞಾನದಲ್ಲಿ ಮಹತ್ತರವಾದ ಬದಲಾವಣೆ ತಂದುಕೊಂಡಿದೆ. ಲಿಥಿಯಂ-ಐಯಾನ್ ಬ್ಯಾಟರಿಗಳು ವಿದ್ಯುತ್ ವಾಹನಕ್ಕೆ ಹೆಚ್ಚು ಉಪಯೋಗವಾಗುವ ಜೊತೆಗೆ ನಾವು ವಿದೇಶದ ಮೇಲೆ ಅವಲಂಬಿತವಾಗುವುದೂ ತಪ್ಪುತ್ತದೆ. ಇಸ್ರೋ ಕೂಡ ಭವಿಷ್ಯದಲ್ಲಿ ರಾಕೆಟ್ ಹಾಗೂ ಮಾನವ ಸಹಿತ ಬಾಹ್ಯಾಕಾಶ ಹಾರಾಟ ಕಾರ್ಯಾಚರಣೆಯಲ್ಲಿ ಹಸಿರು ಇಂಧನ ಬಳಸಲು ಕ್ರಮವಹಿಸುತ್ತಿದೆ ಎಂದು ಹೇಳಿದ್ದಾರೆ.