
ಸಾಂದರ್ಭಿಕ ಚಿತ್ರ
ಬೆಂಗಳೂರು: ಮನೆಯ ಚಿಲಕ ಮುರಿದು ಒಳಹೊಕ್ಕಿ ಚಿನ್ನಾಭರಣ ಕಳವು ಮಾಡಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿ, 17.20ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ನರಸಿಂಹ ರೆಡ್ಡಿ, ರಾಕೇಶ್ ರಾವ್ ಎಸ್. ಬಂಧಿತರು. ಇವರಿಂದ ರಾಜರಾಜೇಶ್ವರಿ ನಗರ ಪೊಲೀಸರು 17 .20 ಲಕ್ಷ ರೂ.ಮೌಲ್ಯದ 320 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ ಎರಡು ಪ್ರಕರಣಗಳು ಇತ್ಯಾರ್ಥವಾಗಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಕಳೆದ ಜ. 24ರಂದು ರಾತ್ರಿ ರಾಜರಾಜೇಶ್ವರಿ ನಗರದ ವಾಸಿಯೋರ್ವರ ಮನೆಯ ಹಿಂಬಾಗಿಲು ಪ್ರವೇಶಿಸಿ ಮನೆಯಲ್ಲಿದ್ದ 230 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರಾಜರಾಜೇಶ್ವರಿನಗರ ಪೊಲೀಸ್ ಇನ್ಸ್ ಪೆಕ್ಟರ್ ನವೀನ್ ಸುಪೇಕರ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.