ರೈಲು ಪ್ರಯಾಣಿಕರ ಸುರಕ್ಷತೆ ಸುಧಾರಣೆಗೆ ದೇಶೀಯ ನಿರ್ಮಿತ ಸ್ವಯಂಚಾಲಿತ ವ್ಯವಸ್ಥೆ
ರೈಲು ಪ್ರಯಾಣಿಕರ ಸುರಕ್ಷತೆಯ ಸುಧಾರಣೆಗಾಗಿ ದೇಶೀಯವಾಗಿ ಸ್ವಯಂಚಾಲಿತ ರೈಲು ಸುರಕ್ಷತಾ ವ್ಯವಸ್ಥೆ 2021 ನೇ ಸಾಲಿನ ಬಜೆಟ್ ನಲ್ಲಿ ರೈಲ್ವೆ ಕ್ಷೇತ್ರದ ಪ್ರಮುಖ ಅಂಶವಾಗಿದೆ.
Published: 02nd February 2021 05:18 PM | Last Updated: 02nd February 2021 06:17 PM | A+A A-

ಭಾರತೀಯ ರೈಲ್ವೆ (ಸಂಗ್ರಹ ಚಿತ್ರ)
ಬೆಂಗಳೂರು: ರೈಲು ಪ್ರಯಾಣಿಕರ ಸುರಕ್ಷತೆಯ ಸುಧಾರಣೆಗಾಗಿ ದೇಶೀಯ ಸ್ವಯಂಚಾಲಿತ ರೈಲು ಸುರಕ್ಷತಾ ವ್ಯವಸ್ಥೆ 2021 ನೇ ಸಾಲಿನ ಬಜೆಟ್ ನಲ್ಲಿ ರೈಲ್ವೆ ಕ್ಷೇತ್ರದ ಪ್ರಮುಖ ಅಂಶವಾಗಿದೆ.
ಈ ಬಗ್ಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, " ಪಿಂಕ್ ಪುಸ್ತಕ (ಯೋಜನೆ ಹಾಗೂ ಅವುಗಳಿಗೆ ಮಂಜೂರಾಗಿರುವ ಹಣದ ವಿವರ) ಬಿಡುಗಡೆಯಾಗುವವರೆಗೂ ನಾವು ಏನನ್ನೂ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಯಾವೆಲ್ಲಾ ಯೋಜನೆಗಳಿಗೆ ಎಷ್ಟು ಮಂಜೂರಾಗಿದೆ ಎಂಬುದನ್ನು ಕಾದು ನೋಡೋಣ ಎಂದಷ್ಟೇ ಹೇಳಿದ್ದಾರೆ.
2023 ರ ವೇಳೆಗೆ ಭಾರತೀಯ ರೈಲ್ವೆ ಜಾಲದ ವಿದ್ಯುದೀಕರಣ ಬಜೆಟ್ ನ ಮತ್ತೊಂದು ಪ್ರಮುಖ ಅಂಶ ಈ ಬಗ್ಗೆ ಟಿಎನ್ಐಇ ಜೊತೆ ಡೆಪ್ಯೂಟಿ ಜನರಲ್ ಮ್ಯಾನೇಜರ್ ಇ. ವಿಜಯ ಮಾತನಾಡಿದ್ದು, ರಾಷ್ಟ್ರೀಯ ರೈಲು ಯೋಜನೆ ಮುಂದಿನ ಅಭಿವೃದ್ಧಿ ಯೋಜನೆಗಳಿಗೆ ಟೆಂಪ್ಲೇಟ್ ಆಗಲಿದೆ. 2030 ರ ವೇಳೆಗೆ ಬೇಡಿಗೂ ಹೆಚ್ಚಿನದ್ದನ್ನು ಸೃಷ್ಟಿಸುವ ಸಾಮರ್ಥ್ಯ 2050 ರಲ್ಲಿ ಅಗತ್ಯವಿರುವ, ಬೇಡಿಕೆಯ ಬೆಳವಣಿಗೆಯನ್ನು ಪೂರೈಸುತ್ತದೆ ಎಂದು ಹೇಳಿದ್ದಾರೆ.
2024 ರ ವಿಷನ್ ನ ಪ್ರಕಾರ ಯೋಜನೆಗಳು ಹಾಗೂ ಡೆಡ್ ಲೈನ್ ಗಳು ಹೀಗಿವೆ
- ಮಾರ್ಚ್ 2021 ರ ವೇಳೆಗೆ ದೌಂಡ್-ಗುಲ್ಬರ್ಗಾ ಮಾರ್ಗದ ಡಬ್ಲಿಂಗ್- ವಿದ್ಯುದೀಕರಣ
- 2024 ರ ಅಕ್ಟೋಬರ್ ವೇಳೆಗೆ ಪೆನುಕೊಂಡ-ಧರ್ಮಾವರಂ ಮಾರ್ಗದ ಡಬ್ಲಿಂಗ್ ಯೋಜನೆ
- ಮಾ.2022 ರ ವೇಳೆಗೆ ಗೂಟಿ-ಧರ್ಮಾವರಂ ನಡುವೆ ಡಬ್ಲಿಂಗ್ ಯೋಜನೆ
- ಹೊಸ್ಪೇಟೆ-ವಾಸ್ಕೋ ಮಾರ್ಗದ ಡಬ್ಲಿಂಗ್ ಯೋಜನೆ ಮಾ.2023 ರ ವೇಳೆಗೆ ಪೂರ್ಣ
- ಜೂ.2021 ರ ವೇಳೆಗೆ ಯಲಹಂಕ-ಪೆನುಕೊಂಡ ಮಾರ್ಗದ ಡಬ್ಲಿಂಗ್
ಹೊಸ ಯೋಜನೆಗಳು ಹಾಗೂ ಡೆಡ್ ಲೈನ್ ವಿವರ ಹೀಗಿದೆ:
- ಜೂ.2025 ರ ವೇಳೆಗೆ ಗದಗ್ ವಾಡಿ
- ಡಿ.2025 ರ ವೇಳೆಗೆ ರಾಯದುರ್ಗ-ತುಮಕೂರು ರೈಲು ಮಾರ್ಗ
- ಸೆ.2024 ರ ವೇಳೆಗೆ ಮುನಿರಾಬಾದ್ (ಗಿಣಿಗೇರ)-ರಾಯಚೂರು-ಮೆಹ್ಬೂಬ್ ನಗರ
ಇನ್ನು ಸಬರ್ಬನ್ ರೈಲಿನ ದರ 2013 ರಲ್ಲಿ ಪರಿಷ್ಕರಣೆಯಾಗಿದ್ದನ್ನು ಹೊರತುಪಡಿಸಿದರೆ ಈ ಬಜೆಟ್ ನಲ್ಲೂ ಪರಿಷ್ಕರಣೆಯಾಗಿಲ್ಲ ಇದರಿಂದ ಆದಾಯಕ್ಕೆ ತೀವ್ರ ಹೊಡೆತ ಬೀಳುತ್ತಿದೆ ಎಂದು ನಗರ ಸಾರಿಗೆ ತಜ್ಞ ಸಂಜೀವ್ ದ್ಯಾಮಣ್ಣವರ್ ಹೇಳಿದ್ದಾರೆ.