ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸುತ್ತಿದ್ದವರ ಮೇಲೆ ಹಲ್ಲೆ; 7 ಮಂದಿಯ ಬಂಧನ

ಆಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದ ಗುಂಪಿನ ಮೇಲೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ಮಾಡಿರುವ ಘಟನೆ ನಗರದ ಬಿಸ್ಮಿಲ್ಲಾನಗರದಲ್ಲಿ ನಡೆದಿದೆ.

Published: 02nd February 2021 08:35 AM  |   Last Updated: 02nd February 2021 08:35 AM   |  A+A-


Ram Temple

ರಾಮಮಂದಿರ (ಸಾಂದರ್ಭಿಕ ಚಿತ್ರ)

Posted By : Srinivasamurthy VN
Source : The New Indian Express

ಬೆಂಗಳೂರು: ಆಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದ ಗುಂಪಿನ ಮೇಲೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ಮಾಡಿರುವ ಘಟನೆ ನಗರದ ಬಿಸ್ಮಿಲ್ಲಾನಗರದಲ್ಲಿ ನಡೆದಿದೆ.

ದೇಗುಲ ನಿರ್ಮಾಣದ ನಿಧಿ ಸಂಗ್ರಹ ವೇಳೆ ಕಾರ್ಯಕರ್ತರ ವಾಹನದ ಮೇಲೆ ಕಲ್ಲುತೂರಾಟ ಮಾಡಲಾಗಿದ್ದು, ಈ ವೇಳೆ ನಿಧಿ ಸಂಗ್ರಹಣೆಯಲ್ಲಿ ತೊಡಗಿದ್ದ ಶೇಷಾಚಲ, ಯಶವಂತ್, ಸುರೇಶ್ ಎಂಬುವವರು  ಗಾಯಗೊಂಡಿದ್ದಾರೆ. ಅಲ್ಲದೆ ದುಷ್ಕರ್ಮಿಗಳು ಕಾರ್ಯಕರ್ತರ ಮೇಲೂ ಹಲ್ಲೆ ಮಾಡಿದ್ದಾರೆ. ನಿಧಿ ಸಂಗ್ರಹಕ್ಕಾಗಿ ತಂದಿದ್ದ ವಾಹನದ ಮೇಲೂ ದಾಳಿ ಮಾಡಲಾಗಿದ್ದು ವಾಹನ ಜಖಂಗೊಂಡಿದೆ.

ನಿಮಗೆ ಇಲ್ಲಿಗೆ ಬರಲು ಅವಕಾಶ ಕೊಟ್ಟವರು ಯಾರು? ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಹೇಳುತ್ತ ಬಂದ ಗುಂಪು ಕಲ್ಲಿನಿಂದ ದಾಳಿ ನಡೆಸಿತು ಎಂದು ಗಾಯಗೊಂಡವರು ಹೇಳಿದ್ದಾರೆ. ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಸುದ್ದಗುಂಟೆ ಠಾಣೆಗೆ ಆಗಮಿಸಿದ ಡಿಸಿಪಿ ಶ್ರೀನಾಥ್ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಘಟನೆ ನಡೆದ ಸ್ಥಳದ ಸಿಸಿಟಿವಿ ವಿಡಿಯೋ ತುಣುಕಗಳನ್ನು ಪರಿಶೀಲಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಹಲ್ಲೆ ನಡೆಸಿದ್ದ ಅಡ್ನಾನ್, ಅಹ್ಮದ್ ಪಾಷಾ, ಅಬ್ದುಲ್ ಗೌಸ್, ಮೊಹಮ್ಮದ್, ಶಬೀರ್, ಸೈಯದ್ ಸುಹೇಲ್, ಮತ್ತು ಸೈಯದ್ ಅಕ್ಮಲ್ ಎಂಬುವವರನ್ನು ಬಂಧಿಸಿದ್ದಾರೆ. 

ಘಟನೆ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಯೊಬ್ಬರು, ರಾಮಮಂದಿರ ನಿರ್ಮಾಣದ ನಿಮಿತ್ತ ಶೇಷಾಚಲ, ಯಶವಂತ್, ಸುರೇಶ್ ಅವರ ತಂಡ ತೆರೆದ ವಾಹನದಲ್ಲಿ ದೇಣಿಗೆ ಸಂಗ್ರಹಿಸುತ್ತಿತ್ತು. ಎರಡನೆಯ ರಥದ ಮೇಲೆ ಸ್ಪೀಕರ್‌ನಿಂದ ಜೋರಾಗಿ ಸಂಗೀತವನ್ನು ಹಾಕಲಾಗಿತ್ತು.  ಈ ವೇಳೆ ಅಲ್ಲಿಯೇ ಇದ್ದ ಆರೋಪಿಗಳು ಕಾರ್ಯಕರ್ತರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು ಕಲ್ಲು ತೂರಾಟವಾಗಿದೆ. ವಿಚಾರ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಆರೋಪಿಗಳೆಲ್ಲರೂ ಪೊಲೀಸರ ಆಗಮನವಾಗುತ್ತಿದ್ದಂತೆಯೇ ಪರಾರಿಯಾಗಿದ್ದರು. ಬಳಿಕ ಡಿಸಿಪಿ ಶ್ರೀನಾಥ್ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. 
 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp