ರಾಜ್ಯಾದ್ಯಂತ ಇಂದಿನಿಂದ ಟ್ಯಾಕ್ಸಿ ಪ್ರಯಾಣ ದರ ಏರಿಕೆ

ರಾಜ್ಯಾದ್ಯಂತ ಇಂದಿನಿಂದ ಟ್ಯಾಕ್ಸಿ, ಸಿಟಿ ಟ್ಯಾಕ್ಸಿ ಹಾಗೂ ಇನ್ನಿತರೆ ಟ್ಯಾಕ್ಸಿಗಳ ದರವನ್ನು ಏರಿಕೆ ಮಾಡಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ.

Published: 02nd February 2021 07:53 AM  |   Last Updated: 02nd February 2021 12:45 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಟ್ಯಾಕ್ಸಿ, ಸಿಟಿ ಟ್ಯಾಕ್ಸಿ ಹಾಗೂ ಇನ್ನಿತರೆ ಟ್ಯಾಕ್ಸಿಗಳ ದರವನ್ನು ಏರಿಕೆ ಮಾಡಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ.

ನೂತನ ದರ ಪರಿಷ್ಕರಣೆ ಅನ್ವಯ ಹವಾನಿಯಂತ್ರಣ ರಹಿತ ಟ್ಯಾಕ್ಸಿ ಪ್ರಯಾಣ ದರವನ್ನು ಪ್ರತಿ ಕಿ.ಮೀಗೆ ರೂ.18 ಮತ್ತು ಕನಿಷ್ಟ 4 ಕಿಮೀ ವರೆಗೆ ರೂ.75 ನಿಗದಿ ಮಾಡಲಾಗಿದೆ. ಅಂತೆಯೇ ಹವಾನಿಯಂತ್ರಿತ ಟ್ಯಾಕ್ಸಿಗಳಿಗೆ ಪ್ರತಿ ಕಿ.ಮೀಗೆ ರೂ.24 ಮತ್ತು ಕನಿಷ್ಠ 4 ಕಿಮೀ ವರೆಗೆ ರೂ.100 ನಿಗದಿ ಮಾಡಲಾಗಿದೆ. ಈ ಪರಿಷ್ಕೃತ ದರವು ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಸಂಚರಿಸುವ ಎಲ್ಲಾ ಟ್ಯಾಕ್ಸಿಗಳಿಗೆ ಅನ್ವಯವಾಗಲಿದೆ.

ಪ್ರಯಾಣ ದರ ಏರಿಕೆ ಜೊತೆಗೆ ಟ್ಯಾಕ್ಸಿ ಕಾಯುವಿಕೆ ಹಾಗೂ ಲಗೇಜ್ ದರವನ್ನೂ ಪರಿಷ್ಕರಿಸಲಾಗಿದೆ. ಅದರಂತೆ ಮೊದಲ 5 ನಿಮಿಷಗಳವರೆಗೆ ಕಾಯುವುದು ಉಚಿತವಾಗಿದ್ದು, ನಂತರದ ಪ್ರತಿ 1 ನಿಮಿಷಕ್ಕೆ ರೂ.1 ನಿಗದಿಗೊಳಿಸಲಾಗಿದೆ. ಅಂತೆಯೇ ಲಗೇಜ್ ದರ ಮೊದಲ 120 ಕೆಜಿ ವರೆಗೆ ಉಚಿತವಾಗಿದ್ದು, ನಂತರದ ಪ್ರತಿ 20 ಕೆಜಿಗೆ ರೂ.7 ಹಾಗೂ ಮಧ್ಯರಾತ್ರಿ 12 ರಿಂದ ಬೆಳಗಿನ 6ರವರೆಗೆ ಪ್ರಯಾಣ ದರದ ಮೇಲಿನ ಶೇ.10ರಷ್ಟು ಹೆಚ್ಚುವರಿ ದರ ನಿಗದಿಗೊಳಿಸಲಾಗಿದೆ.

ಪರಿಷ್ಕೃತ ಟ್ಯಾಕ್ಸಿ ಪ್ರಯಾಣ ದರ ಸಿಟಿ ಟ್ಯಾಕ್ಸಿ ಸೇರಿದಂತೆ ಇನ್ನಿತರೆ ಟ್ಯಾಕ್ಸಿಗಳಿಗೂ ಅನ್ವಯವಾಗಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.


Stay up to date on all the latest ರಾಜ್ಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp