ಏರೋ ಇಂಡಿಯಾ 2021: ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ

ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ-2021ಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಚಾಲನೆ ನೀಡಿದ್ದಾರೆ.

Published: 03rd February 2021 10:25 AM  |   Last Updated: 03rd February 2021 10:25 AM   |  A+A-


Defence Minister Rajnath Singh at Aero India show in Bengaluru

ಏರೋ ಇಂಡಿಯಾ-2021 ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್

Posted By : Manjula VN
Source : Online Desk

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ-2021ಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಚಾಲನೆ ನೀಡಿದ್ದಾರೆ.

ಏರೋ‌ ಇಂಡಿಯಾ 2021 ಚಾಲನೆ ವೇಳೆ ರಾಷ್ಟ್ರಧ್ವಜ, ಭಾರತೀಯ ವಾಯು ಸೇನೆ ಹಾಗೂ ಏರೋ ಇಂಡಿಯಾ 2021 ರ ಧ್ವಜ ಹೊತ್ತ ಎಲ್'ಯುಹೆಚ್ ಹೆಲಿಕಾಪ್ಟರ್ ಗಳು ಮೊದಲು ಪ್ರದರ್ಶನ ನೀಡಿದವು.

ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಉಪಸ್ಥಿತರಿದ್ದರು.

ವೈಮಾನಿಕ ಪ್ರದರ್ಶನದಲ್ಲಿ  ಈ ಬಾರಿ ಒಟ್ಟು 63 ವಿಮಾನಗಳಿಂದ ಪ್ರದರ್ಶನ ನಡೆಯಲಿದ್ದು, ದಿನಕ್ಕೆ ಎರಡು ಬಾರಿ 42 ವಿಮಾನಗಳು ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ ನೀಡಲಿವೆ.

ಡಕೋಟಾ, ಸುಖೋಯ್, ರಫೇಲ್, ಎಲ್​ಸಿಹೆಚ್, ಎಲ್​ಯುಎಚ್, ಜಾಗ್ವಾರ್, ಹಾಕ್ ಸೇರಿ ಇನ್ನಿತರ ಫೈಟರ್ ಜೆಟ್ ಏರ್ ಕ್ರಾಫ್ಟ್, ಹೆಲಿಕಾಫ್ಟರ್​ಗಳಿಂದ ಪ್ರದರ್ಶನ ನಡೆಯಲಿದೆ. ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಈ ಬಾರಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಕೇವಲ ಬ್ಯುಸಿನೆಸ್ ವಿಸಿಟರ್ ಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ.

ಶೋ ಹಿನ್ನೆಲೆಯಲ್ಲಿ ಹುಣಸಮಾರನಹಳ್ಳಿಯಿಂದ ಯಲಹಂಕವರೆಗೂ ಸರಕಿ ಸೇರಿದಂತೆ ಭಾರಾ ವಾಹನಗಳ ಪ್ರವೇಶಗಳನ್ನು ನಿಷೇಧಿಸಲಾಗಿದೆ. ಏರ್ ಶೋ ಪಾಸ್ ಹೊಂದಿರುವ ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.

ಏರ್ ಶೋ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ ಹಿಂದೆ ರಸ್ತೆಯ ಇಕ್ಕಲುಗಳಲ್ಲಿ ನಿಂತು ಜನ ಏರ್ ಶೋ ನೋಡುತ್ತಿದ್ದರು. ಆದರೆ, ಈ ಬಾರಿ ರಸ್ತೆಯಲ್ಲಿ ನಿಂತು ಏರ್ ಶೋ ನೋಡುವವರಿಗೂ ಬ್ರೇಕ್ ಹಾಕಲಾಗಿದೆ.

Stay up to date on all the latest ರಾಜ್ಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp