ಮೈಸೂರು: ರಸ್ತೆಯಲ್ಲಿ ಉಗುಳುವುದು, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮಕ್ಕೆ ಮಾರ್ಷಲ್ ಗಳ ನೇಮಕ

ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಮತ್ತು ಕಸ ಹಾಕುವವರಿಗೆ ದಂಡ ವಿಧಿಸಲು ಮೈಸೂರು ಮಹಾನಗರ ಪಾಲಿಕೆ ಮಾರ್ಷಲ್ ಗಳನ್ನು ನಿಯೋಜಿಸಲು ಚಿಂತಿಸಿದೆ.

Published: 03rd February 2021 01:10 PM  |   Last Updated: 03rd February 2021 01:10 PM   |  A+A-


mysore city

ಮೈಸೂರು ನಗರ

Posted By : Shilpa D
Source : The New Indian Express

ಮೈಸೂರು: ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಮತ್ತು ಕಸ ಹಾಕುವವರಿಗೆ ದಂಡ ವಿಧಿಸಲು ಮೈಸೂರು ಮಹಾನಗರ ಪಾಲಿಕೆ ಮಾರ್ಷಲ್ ಗಳನ್ನು ನಿಯೋಜಿಸಲು ಚಿಂತಿಸಿದೆ.

ಈ ಹಿಂದೆ ಬಿಬಿಎಂಪಿ ಕೂಡ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವವರಿಗೆ ದಂಡ ವಿಧಿಸಲು ಮಾರ್ಷಲ್ ಗಳನ್ನು ನಿಯೋಜಿಸಿತ್ತು, ಈಗ ಮೈಸೂರು ಪಾಲಿಕೆ ಕೂಡ ಅದೇ ದಾರಿ ಅನುಸರಿಸಲು ಮುಂದಾಗಿದೆ.

ನಗರದ ಎಲ್ಲಾ 65 ವಾರ್ಡ್ ಗಳಲ್ಲಿ  ಇದೇ ಪ್ಲಾನ್  ಜಾರಿಗೆ ತರಲು ನಿರ್ಧರಿಸಿದ್ದು, ಸ್ವಚ್ಛಮಾರ್ಷಲ್ ಗಳು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ಮತ್ತು ಕಸ ಹಾಕುವವರಿಗೆ ಭಾರೀ ದಂಡ ವಿಧಿಸಲಿದ್ದಾರೆ.

ತ್ಯಾಜ್ಯವನ್ನು ಬೇರ್ಪಡಿಸದಿರುವುದು, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯವನ್ನು ಎಸೆಯಲು ಮತ್ತು ಬೇಜವಾಬ್ದಾರಿಯಿಂದ ವರ್ತಿಸುವವರಿಗೆ ದಂಡ ವಿಧಿಸಲು ನೈರ್ಮಲ್ಯ ಮೇಲ್ವಿಚಾರಕರಿಗೆ ಅಧಿಕಾರ ನೀಡಲು ನಾವು ಯೋಜಿಸುತ್ತಿದ್ದೇವೆ ಎಂದು ಮೈಸೂರು ಪಾಲಿಕೆ ಆಯುಕ್ತ ಗುರುದತ್ತ ಹೆಗ್ಡೆ ಹೇಳಿದ್ದಾರೆ. ನಾವು ಮಾರ್ಷಲ್‌ಗಳಿಗೆ ಇಡಿಸಿ ಯಂತ್ರವನ್ನು ನೀಡಲು ಯೋಜಿಸುತ್ತಿದ್ದೇವೆ ಮತ್ತು ಅವರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಸಹ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ನಾವು ಶೀಘ್ರದಲ್ಲೇ ಆದೇಶ ಹೊರಡಿಸುತ್ತೇವೆ ಎಂದು ತಿಳಿಸಿದ್ದಾರೆ.

ನಗರದ ಸಾರ್ವಜನಿಕ ಸ್ಥಳಗಳು ಮತ್ತು ಪ್ರಮುಖ ಸಂರಕ್ಷಣಾ ಕೇಂದ್ರಗಳಿಗೆ ತ್ಯಾಜ್ಯವನ್ನು ಎಸೆಯುವ ಬಗ್ಗೆ ದೂರು ನೀಡುತ್ತಿದ್ದ ಹಲವಾರು ಪರಿಸರವಾದಿಗಳು ಮತ್ತು ನಿವಾಸಿಗಳಿಗೆ ಇದರಿಂದ ನಿಟ್ಟುಸಿರುವ ಬಿಡುವಂತಾಗಿದೆ.  ನಗರದ ಸ್ವಚ್ಛತೆಯ ಗುಣಮಟ್ಟವನ್ನು ಸುಧಾರಿಸುವುದಲ್ಲದೆ, ಸ್ವಚ್ಛ ಸರ್ವೇಕ್ಷಣಾ ಶ್ರೇಯಾಂಕದಲ್ಲಿ ಮೈಸೂರು ಅಗ್ರ ಸ್ಥಾನವನ್ನು ಗಳಿಸಲು ಮುಂದಾಗಿದ್ದಾರೆ.

ಈ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದ್ದು,  ಒಂದು ವಾರದೊಳಗೆ ಅನುಷ್ಠಾನ ಮಾಡಲಾಗುವುದು ಎಂದು  ಮೈಸೂರು ಪಾಲಿಕೆ ಆರೋಗ್ಯ ಅದಿಕಾರಿ ಡಾ. ನಾಗರಾಜ್ ಹೇಳಿದ್ದಾರೆ.

ಇವರನ್ನು ಸ್ವಚ್ಛತಾ ರಾಯಬಾರಿಗಳು ಅಥವಾ ಸ್ವಚ್ಛತಾ ಮಾರ್ಷಲ್ ಗಳು ಎಂದು ಕರೆಯಲಾಗುತ್ತದೆ, ಘನತ್ಯಾಜ್ಯ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡವಿಧಿಸುತ್ತಾರೆ. ಇವರು ಮೈಸೂರು ಪಾಲಿಕೆಯ ಪ್ರತಿನಿಧಿಗಳು ಎಂದು ಗುರುತಿಸಲು ಇವರಿಗೆ ಸಮವಸ್ತ್ರ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.


Stay up to date on all the latest ರಾಜ್ಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp