ಕೋವಿಡ್-19 ಲಸಿಕೆ ತಪ್ಪಿಸಿಕೊಂಡವರಿಗೆ 2ನೇ ಸುತ್ತಿನಲ್ಲಿ ಅವಕಾಶ; ಧಾರವಾಡದಲ್ಲಿ ಕೊರೋನಾ ಪ್ರಕರಣಗಳು ಶೂನ್ಯ! 

ಕೋವಿಡ್-19 ಲಸಿಕೆ ನೀಡುವ ಅಭಿಯಾನ ಪ್ರಗತಿಯಲ್ಲಿದ್ದು, ಹಲವರು ಕಾರಣಾಂತರಗಳಿಂದ  ಮೊದಲ ಸುತ್ತಿನಲ್ಲಿ ಲಸಿಕೆ ತಪ್ಪಿಸಿಕೊಂಡಿದ್ದಾರೆ. ಈ ರೀತಿ ಲಸಿಕೆ ತಪ್ಪಿಸಿಕೊಂಡವರಿಗಾಗಿಯೇ 2 ನೇ ಸುತ್ತಿನಲ್ಲಿ ಲಸಿಕೆ ನೀಡುವ ಕ್ರಮ ಕೈಗೊಳ್ಳಲಾಗಿದೆ. 

Published: 03rd February 2021 01:20 PM  |   Last Updated: 03rd February 2021 01:20 PM   |  A+A-


COVID-19 vaccine

ಕೋವಿಡ್-19 ಲಸಿಕೆ

Posted By : Srinivas Rao BV
Source : The New Indian Express

ಬೆಂಗಳೂರು/ಧಾರವಾಡ: ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್-19 ಲಸಿಕೆ ನೀಡುವ ಅಭಿಯಾನ ಪ್ರಗತಿಯಲ್ಲಿದ್ದು, ಹಲವರು ಕಾರಣಾಂತರಗಳಿಂದ  ಮೊದಲ ಸುತ್ತಿನಲ್ಲಿ ಲಸಿಕೆ ತಪ್ಪಿಸಿಕೊಂಡಿದ್ದಾರೆ. ಚಿಂತೆ ಇಲ್ಲ, ಈ ರೀತಿ ಲಸಿಕೆ ತಪ್ಪಿಸಿಕೊಂಡವರಿಗಾಗಿಯೇ 2 ನೇ ಸುತ್ತಿನಲ್ಲಿ ಲಸಿಕೆ ನೀಡುವ ಕ್ರಮ ಕೈಗೊಳ್ಳಲಾಗಿದೆ. 

ಇತ್ತ ರಾಜ್ಯದಲ್ಲಿ ಆಡಳಿತಾತ್ಮಕ ಕೆಲಸಗಳು ಹಾಗೂ ಪಲ್ಸ್ ಪೋಲಿಯೋ ಅಭಿಯಾನ ಜ.31 ರಿಂದ ಫೆ.3 ವರೆಗೆ ಇದ್ದಿದ್ದರಿಂದ ಕೋವಿಡ್-19 ಲಸಿಕೆ ಅಭಿಯಾನ ನಿಧಾನಗತಿಯಲ್ಲಿ ಸಾಗಿತ್ತು. 

ಆದರೆ ನಗರದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಎರಡನೇ ಸುತ್ತಿನಲ್ಲಿ ಕೋವಿಡ್-19 ಲಸಿಕೆ ನೀಡುವುದನ್ನು ಪ್ರಾರಂಭಿಸಲಾಗಿದೆ. ಇನ್ನೂ ಕೆಲವು ಆಸ್ಪತ್ರೆಗಳು ಮೊದಲ ಹಂತದಲ್ಲಿ ಲಸಿಕೆ ತಪ್ಪಿಸಿಕೊಂಡವರಿಗೆ ಎರಡನೇ ಹಂತದಲ್ಲಿ ನೀಡುವುದನ್ನು ಪ್ರಾರಂಭಿಸುವುದಕ್ಕಾಗಿ ಬಿಬಿಎಂಪಿ ಅನುಮತಿಗಾಗಿ ನಿರೀಕ್ಷಿಸಲಾಗುತ್ತಿದೆ. ಇನ್ನೂ ಕೆಲವು ಆಸ್ಪತ್ರೆಗಳು ಪಲ್ಸ್ ಪೋಲಿಯೋ ಅಭಿಯಾನ ಪೂರ್ಣಗೊಳ್ಳುವುದಕ್ಕಾಗಿ ನಿರೀಕ್ಷಿಸಲಾಗುತ್ತಿದೆ. 

ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ 700 ಮಂದಿ ಈಗಾಗಲೇ ಲಸಿಕೆಯನ್ನು ಪಡೆದಿದ್ದು, ಎರಡನೇ ಹಂತವನ್ನೂ ಪ್ರಾರಂಭಿಸಲಾಗಿದೆ. "ನಾವು ಮೊದಲ ಹಂತದಲ್ಲಿ ಲಸಿಕೆ ತಪ್ಪಿಸಿಕೊಂಡವರಿಗೆ ಎರಡನೇ ಹಂತದಲ್ಲಿ ಲಸಿಕೆ ನೀಡಲು ಪ್ರಾರಂಭಿಸಿದ್ದೇವೆ, ಬಿಬಿಎಂಪಿ ಸಹಕಾರ, ಆರೋಗ್ಯ ವೃತ್ತಿಪರರ ಸಹಕಾರದಿಂದ ಪ್ರತಿಕ್ರಿಯೆ ಈಗ ಉತ್ತಮವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯುವುದಕ್ಕೆ ಮುಂದಾಗುತ್ತಿದ್ದು, ಹೆಚ್ಚು ಆತ್ಮವಿಶ್ವಾಸ ಹೊಂದಿದ್ದಾರೆ ಎಂದು ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಸಲಹೆಗಾರರಾದ ಡಾ.ಸ್ವಾತಿ ರಾಜಗೋಪಾಲ್ ತಿಳಿಸಿದ್ದಾರೆ. 

ಈ ಬಗ್ಗೆ ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ಹಲವು ಆಸ್ಪತ್ರೆಗಳಲ್ಲಿ ಈಗಾಗಲೇ ಲಸಿಕೆ ತಪ್ಪಿಸಿಕೊಂಡವರಿಗೆ ಎರಡನೇ ಹಂತದಲ್ಲಿ ಲಸಿಕೆ ನೀಡಲು ಪ್ರಾರಂಭಿಸಿದ್ದಾರೆ. ಇನ್ನೂ ಕೆಲವು ಆಸ್ಪತ್ರೆಗಳು ಶೀಘ್ರವೇ 2 ನೇ ಹಂತವನ್ನು ಪ್ರಾರಂಭಿಸಲಿವೆ, ಭಯದಿಂದ ಅಥವಾ ವೈಯಕ್ತಿಕ ಕಾರಣಗಳಿಂದಾಗಿ ಮೊದಲ ಹಂತದಲ್ಲಿ ಲಸಿಕೆ ಪಡೆಯಲು ಸಾಧ್ಯವಾಗದೇ ಇದ್ದ ಆರೋಗ್ಯ ಕಾರ್ಯಕರ್ತರು ಎರಡನೇ ಹಂತದಲ್ಲಿ ಲಸಿಕೆ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ. 

ಸಿವಿ ರಾಮನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಹೆಚ್ ಡಿ ಆರ್ ರಾಧಾಕೃಷ್ಣ ಈ ಬಗ್ಗೆ ಮಾತನಾಡಿದ್ದು, ನಾವು ಇನ್ನೂ ಎರಡನೇ ಹಂತದಲ್ಲಿ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿಲ್ಲ. ಹಲವು ಸಿಬ್ಬಂದಿಗಳು ಪೋಲಿಯೋ ಅಭಿಯಾನದಲ್ಲಿ ತೊಡಗಿರುವುದರಿಂದ ಅದು ಪೂರ್ಣಗೊಂಡ ಬಳಿಕ ಲಸಿಕೆ ಪ್ರಾರಂಭಿಸಬಹುದೆಂಬ ಮಾಹಿತಿ ಲಭ್ಯವಾಗಿದೆ ಎಂದಿದ್ದಾರೆ. 

 ಆಸ್ಟರ್ ಆರ್ ವಿ ಆಸ್ಪತ್ರೆಯ ಆಂತರಿಕ ವೈದ್ಯಕೀಯ ವಿಭಾಗದ ಸಲಹೆಗಾರರಾದ ಡಾ. ಎಸ್ ಎನ್ ಅರವಿಂದ ಈ ಬಗ್ಗೆ ಮಾಹಿತಿ ನೀಡಿದ್ದು, ಮೊದಲ ಹಂತದಲ್ಲಿ ಲಸಿಕೆ ನೀಡುವುದು ಪ್ರಗತಿಯಲ್ಲಿದೆ. ಈ ಹಂತದಲ್ಲಿ ಲಸಿಕೆ ತಪ್ಪಿಸಿಕೊಂಡವರ ಹೆಸರನ್ನು ಫೆ.4 ರಿಂದ ಹೊಸ ಪಟ್ಟಿಗೆ ಸೇರಿಸಲಾಗುವುದು, ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿದ ಬಳಿಕ ಎರಡನೇ ಹಂತದಲ್ಲಿ ಲಸಿಕೆ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ. 

ಇದೇ ಮೊದಲ ಬಾರಿಗೆ ಧಾರವಾಡದಲ್ಲಿ ಕೊರೋನಾ ಪ್ರಕರಣಗಳು ಶೂನ್ಯ!

ಧಾರವಾಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಫೆ.2 ರಂದು ಕೊರೋನಾ ಪ್ರಕರಣಗಳು ಶೂನ್ಯವಾಗಿದೆ. ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಜಿಲ್ಲೆಯಿಂದ ಪ್ರತಿ ದಿನಕ್ಕೆ 300 ಕೊರೋನಾ ಪ್ರಕರಣಗಳು ವರದಿಯಾಗುತ್ತಿದ್ದವು. ಫೆ.1 ರವರೆಗೆ ಜಿಲ್ಲೆಯಲ್ಲಿ 49 ಸಕ್ರಿಯ ಪ್ರಕರಣಗಳು ಇವೆ. ಈ ಪೈಕಿ 20 ಮಂದಿ ರೋಗಲಕ್ಷಣ ರಹಿತರಾಗಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶ್ವಂತ್ ಮಂಡಿನ್ಕರ್ ಈ ಬಗ್ಗೆ ಮಾತನಾಡಿದ್ದು, ಪ್ರತಿ ದಿನ 2,500 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. 


Stay up to date on all the latest ರಾಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp