ಬೆಂಗಳೂರು: ಹನಿಟ್ರ್ಯಾಪ್ ಮಾಡಿ ಉದ್ಯಮಿಗಳನ್ನು ಸುಲಿಗೆ ಮಾಡುತ್ತಿದ್ದ ದಂಪತಿ ಬಂಧನ
ವೇಶ್ಯಾವಾಟಿಕೆ ಸೋಗಿನಲ್ಲಿ ಹನಿಟ್ರ್ಯಾಪ್ ಮಾಡಿ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ ಸುಲಿಗೆ ಮಾಡುತ್ತಿದ್ದ ಆರೋಪದಡಿ ದಂಪತಿಯನ್ನು ವೈಟ್ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.
Published: 05th February 2021 10:24 AM | Last Updated: 05th February 2021 01:10 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ವೇಶ್ಯಾವಾಟಿಕೆ ಸೋಗಿನಲ್ಲಿ ಹನಿಟ್ರ್ಯಾಪ್ ಮಾಡಿ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ ಸುಲಿಗೆ ಮಾಡುತ್ತಿದ್ದ ಆರೋಪದಡಿ ದಂಪತಿಯನ್ನು ವೈಟ್ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.
ಭಾಸ್ವತಿ ದತ್ತಾ (29) ಹಾಗೂ ಆಕೆಯ ಪತಿ ಕಿರಣ್ ರಾಜ್ (33) ಬಂಧಿತರು. ಅವರ ಮೊಬೈಲ್ ಹಾಗೂ ಡೈರಿಯೊಂದನ್ನು ಜಪ್ತಿ ಮಾಡಲಾಗಿದೆ. ಜಾಲದ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು. ಉದ್ಯಮಿಗಳು ಮತ್ತು ಖಾಸಗಿ ಕಂಪನಿ ಉದ್ಯೋಗಿಗಳನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು ಅವರಿಂದ ಹಣ ಚಿನ್ನಾಭರಣಕ್ಕೆ ಬ್ಲಾಕ್ ಮೇಲ್ ಮಾಡುತ್ತಿದ್ದರು.
ಗ್ರಾಹಕರನ್ನು ತನ್ನ ಮನೆಯಲ್ಲಿಯೇ ಭೇಟಿ ಮಾಡುತ್ತಿದ್ದ ಆರೋಪಿ ಜೊತೆ ಖಾಸಗಿ ಕ್ಷಣಗಳನ್ನು ಹಿಡನ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದಳು. ಕೊನೆಗೆ ವಿಡಿಯೋ ಕ್ಲಿಪ್ ಬಳಸಿಕೊಂಡು ಅವರನ್ನು ಬೆದರಿಸಿ ಹಣ ಚಿನ್ನ ವಸೂಲಿ ಮಾಡುತ್ತಿದ್ದಳು. ಪೊಲೀಸರಿಗೆ ದೂರು ಕೊಡುವುದಾಗಿ ಬ್ಲ್ಯಾಕ್ಮೇಲ್ ಮಾಡಿ ಹಣ ಹಾಗೂ ಚಿನ್ನ ಸುಲಿಗೆ ಮಾಡುತ್ತಿದ್ದಳು.