ಏರೋ ಇಂಡಿಯಾ 2021: ಭೌತಿಕವಾಗಿ 16 ಸಾವಿರ, ವರ್ಚುಯಲ್ ನಲ್ಲಿ ಸುಮಾರು 4.5 ಲಕ್ಷ ಜನರು ಭಾಗಿ- ರಾಜನಾಥ್ ಸಿಂಗ್

ಯಲಹಂಕದ ವಾಯುನೆಲೆಯಲ್ಲಿ ನಡೆದ ಮೂರು ದಿನಗಳ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಭೌತಿಕವಾಗಿ 16 ಸಾವಿರ ಹಾಗೂ ವರ್ಚುಯಲ್ ನಲ್ಲಿ ಸುಮಾರು 4.5 ಲಕ್ಷ ಜನರು ಪ್ರದರ್ಶನವನ್ನು ವೀಕ್ಷಿಸಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

Published: 05th February 2021 06:05 PM  |   Last Updated: 05th February 2021 07:09 PM   |  A+A-


Rajanathsingh_air_show_photo1

ರಕ್ಷಮಾ ಸಚಿವ ರಾಜನಾಥ್ ಸಿಂಗ್

Posted By : Nagaraja AB
Source : ANI

ಬೆಂಗಳೂರು:ಯಲಹಂಕದ ವಾಯುನೆಲೆಯಲ್ಲಿ ನಡೆದ ಮೂರು ದಿನಗಳ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಭೌತಿಕವಾಗಿ 16 ಸಾವಿರ ಹಾಗೂ ವರ್ಚುಯಲ್ ನಲ್ಲಿ ಸುಮಾರು 4.5 ಲಕ್ಷ ಜನರು ಪ್ರದರ್ಶನವನ್ನು ವೀಕ್ಷಿಸಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಏರೋ ಇಂಡಿಯಾ 2021 ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವದಾದ್ಯಂತ ಕೋವಿಡ್-19 ಸಾಂಕ್ರಾಮಿಕ ತಡೆಯ ಹೊರತಾಗಿಯೂ ಬೆಂಗಳೂರು ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಯಶಸ್ವಿಯಾಗಿದೆ. 55 ರಾಷ್ಟ್ರಗಳಿಂದ 84 ವಿದೇಶಿ ಕಂಪನಿಗಳು ಸೇರಿದಂತೆ 540 ದೇಶಿಯ ಕಂಪನಿಗಳು ಪಾಲ್ಗೊಂಡಿದ್ದಾಗಿ ಹೇಳಿದರು.

ತಂತ್ರಜ್ಞಾನ ವರ್ಗಾವಣೆಗೆ 19, ನಾಲ್ಕು ಹಸ್ತಾಂತರ ಒಪ್ಪಂದಗಳು ಸೇರಿದಂತೆ ಒಟ್ಟಾರೇ 121 ಪರಸ್ಪರ ತಿಳುವಳಿಕೆ ಒಪ್ಪಂದಗಳಾಗಿದ್ದು, ಮುಂದಿನ ಏಳೆಂಟು ವರ್ಷಗಳಲ್ಲಿ ಸೇನೆಯನ್ನು ಅಧುನಿಕರಿಸುವ ಮೂಲಕ ಭದ್ರತೆಯನ್ನು ಹೆಚ್ಚಿಸಲು 130 ಬಿಲಿಯನ್ ಡಾಲರ್ ಹೂಡಿಕೆಯನ್ನು ಸರ್ಕಾರ ಮಾಡುತ್ತಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.

ವಿಶ್ವದ ಮೊದಲ ಹೈಬ್ರೀಡ್ ಏರೋ ಮತ್ತು ರಕ್ಷಣಾ ಪ್ರದರ್ಶನ ಎಂದೇ ಬಣ್ಣಿಸಲಾದ 13ನೇ ಆವೃತ್ತಿಯ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನವನ್ನು  ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಆಯೋಜಿಸಿತ್ತು. ಜಾಗತಿಕ ಮಟ್ಟದ ಉದ್ಯಮಿಗಳು, ನಿಯೋಗದೊಂದಿಗೆ ಸಂವಾದ, ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳು ನಡೆದವು.

Stay up to date on all the latest ರಾಜ್ಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp