ಟ್ವಿಟರ್'ನಲ್ಲಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ಬರಹ: ನಕಲಿ ಖಾತೆ ಎಂದ ಯದುವೀರ್ ಒಡೆಯರ್
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಯದು ವಂಶಸ್ಥರಾದ ಯದುವೀರ್ ಶ್ರೀ ಕೃಷ್ಣದತ್ತ ನರಸಿಂಹ ರಾಜ ಒಡೆಯರ್ ಅವರ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆಯೊಂದು ಸೃಷ್ಟಿಯಾಗಿದ್ದು, ಈ ಬಗ್ಗೆ ಸ್ವತ: ಯದುವೀರ್ ಒಡೆಯರ್ ಅವರೇ ಸ್ಪಷ್ಟನೆ ನೀಡಿದ್ದಾರೆ.
Published: 05th February 2021 11:00 AM | Last Updated: 05th February 2021 12:01 PM | A+A A-

ಯದುವೀರ್ ಒಡೆಯರ್
ಮೈಸೂರು: ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಯದು ವಂಶಸ್ಥರಾದ ಯದುವೀರ್ ಶ್ರೀ ಕೃಷ್ಣದತ್ತ ನರಸಿಂಹ ರಾಜ ಒಡೆಯರ್ ಅವರ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆಯೊಂದು ಸೃಷ್ಟಿಯಾಗಿದ್ದು, ಈ ಬಗ್ಗೆ ಸ್ವತ: ಯದುವೀರ್ ಒಡೆಯರ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಯದುವೀರ್ ಒಡೆಯರ್ ಅವರ ಹೆಸರಿನಲ್ಲಿ ಟ್ವಿಟರ್ ನಲ್ಲಿ ನಕಲಿ ಖಾತೆಯೊಂದು ಸೃಷ್ಟಿಯಾಗಿದ್ದು, ಈ ನಕಲಿ ಖಾತೆ ಮೂಲಕ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಟ್ವೀಟ್ ಗಳನ್ನು ಮಾಡಲಾಗಿದೆ.
ರೈತರನ್ನು ಬೆಂಬಲಿಸುವುದು ನಮ್ಮ ಆದ್ಯತೆಯಾಗಿದೆ. ನರೇಂದ್ರ ಮೋದಿಯವರೇ ಕೃಷಿ ಸಮಸ್ಯೆಗಳನ್ನ ಬಗೆಹರಿಸಿ ಎಂದು ಟ್ವೀಟ್ ಮಾಡಿರುವುದು ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿ ಬರೆದು ಸ್ಪಷ್ಟನೆ ನೀಡಿರುವ ಯದುವೀರ್ ಅವರು, ಇದು ನಕಲಿ ಖಾತೆಯಾಗಿದ್ದು, ಇದು ನನ್ನ ಅಥವಾ ಮೈಸೂರು ಅರಮನೆಯ ಅಭಿಪ್ರಾಯವಲ್ಲ ಎಂದು ತಿಳಿಸಿದ್ದಾರೆ.