ವಿದ್ಯುತ್ ಬಸ್ ಖರೀದಿ ಇಲ್ಲ, ಗುತ್ತಿಗೆ ಆಧಾರದಲ್ಲಿ ಪ್ರಾಯೋಗಿಕ ಸಂಚಾರ ಮಾತ್ರ ; ಡಿಸಿಎಂ ಲಕ್ಷ್ಮಣ ಸವದಿ

ವಿದ್ಯುತ್ ಬಸ್ ಖರೀದಿ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ,ಕೇವಲ ಗುತ್ತಿಗೆ ಆಧಾರದಲ್ಲಿ ವಿದ್ಯಿತ್ ಬಸ್ ಗಳ ಪ್ರಾಯೋಗಿಕ ಸಂಚಾರಕ್ಕೆ ಮುಂದಾಗಿದ್ದು ಅದರ ಫಲಿತಾಂಶ ನೋಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

Published: 05th February 2021 08:46 PM  |   Last Updated: 05th February 2021 10:31 PM   |  A+A-


ಲಕ್ಷ್ಮಣ ಸವದಿ

Posted By : Raghavendra Adiga
Source : UNI

ಬೆಂಗಳೂರು: ವಿದ್ಯುತ್ ಬಸ್ ಖರೀದಿ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ,ಕೇವಲ ಗುತ್ತಿಗೆ ಆಧಾರದಲ್ಲಿ ವಿದ್ಯಿತ್ ಬಸ್ ಗಳ ಪ್ರಾಯೋಗಿಕ ಸಂಚಾರಕ್ಕೆ ಮುಂದಾಗಿದ್ದು ಅದರ ಫಲಿತಾಂಶ ನೋಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಮಹಾಂತೇಶ್ ಕವಠಗಿಮಠ್ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ,ವಿದ್ಯುತ್ ಬಸ್ ಖರೀದಿ ಮಾಡುವ ಪ್ರಸ್ತಾಪ ನಮ್ಮ ಮುಂದೆ ಇಲ್ಲ.ಈ ಬಗ್ಗೆ ಮುಂದಿನ ದಿನದಲ್ಲಿ ಚಿಂತನೆ ಮಾಡಲಿದ್ದೇವೆ.ಆದರೆ ಮಾಲಿನ್ಯ ವಿಪರೀತವಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಕೂಡ ಇದೆ,‌ಹಾಗಾಗಿ ಕೇಂದ್ರ ಸರ್ಕಾರ ಒಂದು ಬಸ್ಸಿಗೆ 55 ಲಕ್ಷ ಸಬ್ಸಿಡಿ ಕೊಡುತ್ತಿದೆ.ಪ್ರಾಯೋಗಿಕವಾಗಿ 300 ಬಸ್ ಓಡಿಸಲು ಅನುಮತಿ ಕೊಡಲಾಗಿದೆ.ಆದರೆ ನಾವು ಬಸ್ ಖರೀದಿ ಮಾಡುತ್ತಿಲ್ಲ,ಕಿಲೋಮೀಟರ್ ಆಧಾರದಲ್ಲಿ ನಾವು ಬಸ್ ಗುತ್ತಿಗೆ ಪಡೆಯಲಿದ್ದೇವೆ.ಇದಕ್ಕಾಗಿ ಟೆಂಟರ್ ಕರೆದಿದ್ದು,ಹೆಚ್ಚು ದರ ನಮೂದು ಮಾಡಿದ ಕಾರಣ ನಾಲ್ಕು ಬಾರಿ ತಿರಸ್ಕಾರ ಮಾಡಿದ್ದೇವೆ ,ಈಗ ಐದನೇ ಬಾರಿ ಕರೆದಿದ್ದೇವೆ, ಮುಂದಿನ ತಿಂಗಳಿನಲ್ಲಿ 300 ಬಸ್ ಗುತ್ತಿಗೆ ಪಡೆಯಲಿದ್ದೇವೆ.ಟಾಟಾ, ಲೈಲ್ಯಾಂಡ್,ಜೈ ಭಾರತ್ ಸೇರಿ ಐದಾರು ಕಂಪನಿ ಮುಂದೆ ಬಂದಿವೆ.48-50 ರೂ.ಕಿಮೀ‌ಗೆ ಬಂದಲ್ಲಿ ಟೆಂಡರ್ ಕೊಡಲಿದ್ದೇವೆ ಎಂದರು.

ಖಾಸಗಿಯವರು ವಿದ್ಯುತ್ ಕಾರು,ಬಸ್ಸು, ಖರೀದಿ ಮಾಡಿದಲ್ಲಿ ರಸ್ತೆ ತೆರಿಗೆ ಸಂಪೂರ್ಣ ಮನ್ನಾ ಮಾಡ ಲಾಗುತ್ತದೆ.ಚಾರ್ಚಿಂಗ್ ಪಾಯಿಂಟ್ ಮಾಡಿದವರಿಗೆ 10 ಲಕ್ಷ ಸಬ್ಸಿಡಿ ನೀಡಲಿದ್ದೇವೆ.ಪೆಟ್ರೋಲ್ ಬಂಗ್ ನಲ್ಲಿ ಸ್ಥಳ ಇದ್ದಲ್ಲಿ ಅವರೂ ಹಾಕಿಕೊಳ್ಳಬಹುದು ಅವರಿಗೂ ಸಬ್ಸಡಿ ಕೊಡಲಾಗುತ್ತದೆ.ಪ್ರಾಯೋಗಿಕವಾಗಿ ಇದನ್ನು ಕೈಗೆತ್ತಿ ಕೊಳ್ಳುತ್ತಿದ್ದು,ಸಫಲವಾದಲ್ಲಿ ನಾಲ್ಕೂ ನಿಗಮದ ಬೇರೆ ನಗರದಲ್ಲೂ ಅನುಷ್ಠಾನಕ್ಕೆ ತರಲಿದ್ದೇವೆ ಎಂದರು.

ರಾಜ್ಯದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ವಿದ್ಯುತ್ ವಾಹನ ಖರೀದಿಗೆ ಒತ್ತು ನೀಡಲಿದ್ದೇವೆ.ಟೆಸ್ಲಾ ಎನ್ನುವ ಕಾರು ಕಂಪನಿ ಬೆಂಗಳೂರಿನಲ್ಲಿ ಜಾಗ ಅಯ್ಕೆ ಮಾಡಿಕೊಂ ಡಿದೆ.ಬ್ಯಾಟರಿ ಇಲ್ಲೇ ಉತ್ಪಾದನೆ ಮಾಡುವ ಘೋಷಣೆ ಮಾಡಿದ್ದಾರೆ ಇದರಿಂದ ಭವಿಷ್ಯದಲ್ಲಿ ರಾಜ್ಯಕ್ಕೆ ಒಳ್ಳೆಯದಾಗಲಿದೆ ಎಂದರು.

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp