ಕಾರ್ಯಕ್ಷಮತೆ ಕೊರತೆ: ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ಸ್ ಜೊತೆ 500 ಕೋಟಿ ರೂ.ಗಳ ಗುತ್ತಿಗೆ ರದ್ದುಪಡಿಸಿದ ಬೆಂಗಳೂರು ಮೆಟ್ರೊ
ನಿಧಾನಗತಿಯಲ್ಲಿ ಸಾಗುತ್ತಿರುವ ಕೆಲಸದಿಂದಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ(ಬಿಎಂಆರ್ ಸಿಎಲ್) ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಗೆ ನೀಡಿದ್ದ 500 ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆಯನ್ನು ರದ್ದುಗೊಳಿಸಿದೆ.
Published: 06th February 2021 11:00 AM | Last Updated: 06th February 2021 11:00 AM | A+A A-

ಮೆಟ್ರೊ
ಬೆಂಗಳೂರು: ನಿಧಾನಗತಿಯಲ್ಲಿ ಸಾಗುತ್ತಿರುವ ಕೆಲಸದಿಂದಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ(ಬಿಎಂಆರ್ ಸಿಎಲ್) ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಗೆ ನೀಡಿದ್ದ 500 ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆಯನ್ನು ರದ್ದುಗೊಳಿಸಿದೆ.
ಸಿಂಪ್ಲೆಕ್ಸ್ ಸಂಸ್ಥೆ ಕಲೆನ ಅಗ್ರಹಾರದಿಂದ ನಾಗವಾರ ಮಾರ್ಗದಲ್ಲಿ ಎರಡನೇ ಹಂತದ ಎಲೆವೇಟೆಡ್ ಕಾಮಗಾರಿಯನ್ನು ನಡೆಸುತ್ತಿತ್ತು. ಈ ಮಾರ್ಗ 7.5 ಕಿಲೋ ಮೀಟರ್ ಉದ್ದದ ಕಲೆನ ಅಗ್ರಹಾರದಿಂದ ತಾವರೆಕೆರೆಯವರೆಗೆ ಹೊಂದಿದ್ದು ಕಳೆದ ಜನವರಿ 29ಕ್ಕೆ ರದ್ದುಪಡಿಸಲಾಗಿದೆ.
ಕಾರ್ಯನಿರ್ವಹಿಸದಿರುವಿಕೆ ಮತ್ತು ಅನುಷ್ಠಾನ ದಿನಾಂಕವು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ರೀಚ್ -6 ಎಲಿವೇಟೆಡ್ ಲೈನ್ ಒಪ್ಪಂದವನ್ನು ಕೊನೆಗೊಳಿಸಲಾಗಿದೆ. 18 ತಿಂಗಳ ಹಿಂದೆ ಇಡೀ ಭೂಮಿಯನ್ನು ಲಭ್ಯಗೊಳಿಸಲಾಗಿದ್ದರೂ, ಇದುವರೆಗಿನ ಕೆಲಸದ ಪ್ರಗತಿಯು ಕೇವಲ 35 ಪ್ರತಿಶತದಷ್ಟಿದೆ. 500 ಕೋಟಿ ರೂ.ಗಳ ಯೋಜನೆಯಲ್ಲಿ ಇದುವರೆಗೆ ಮಾಡಿದ ಕೆಲಸವು ಕೇವಲ 175 ಕೋಟಿ ರೂಗಳದ್ದಾಗಿದೆ ಎಂದು ಬಿಎಂಆರ್ ಸಿಎಲ್ ನಿರ್ದೇಶಕ ಅಜಯ್ ಸೇತಿ ತಿಳಿಸಿದ್ದಾರೆ.
ಆದರೆ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ಸ್ ಜೊತೆಗೆ ಮೂರನೇ ಹಂತದ ರೀಚ್ -3 ವಿಸ್ತರಣೆ ಮಾರ್ಗದ ಕಾಮಗಾರಿ ಮುಂದುವರಿಯಲಿದೆ. ಈ ಮಾರ್ಗದಲ್ಲಿ 75 ಕೋಟಿ ರೂಪಾಯಿಗಳ ಕೆಲಸ ಮುಗಿದಿದೆ ಎಂದರು.
ಹೆಸರಘಟ್ಟ ಕ್ರಾಸ್ ಮತ್ತು ಮಾದಾವರ ಮಧ್ಯೆ 3 ಕಿಲೋ ಮೀಟರ್ ಗಳ ಹಸಿರು ಮಾರ್ಗದ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಈ ಮಾರ್ಗದಲ್ಲಿ ಮಂಜುನಾಥನಗರ, ಚಿಕ್ಕಬಿದಿರಕಲ್ಲು ಮತ್ತು ಮಾದಾವರಗಳಲ್ಲಿ ನಿಲ್ದಾಣಗಳಿರುತ್ತವೆ.