
ಸಾಂದರ್ಭಿಕ ಚಿತ್ರ
ಮೈಸೂರು: ಜನಗಣತಿ ಕೇಳಿದ್ದೀರಿ, ಪಕ್ಷಿಗಳ ಗಣತಿ ಕೇಳಿದ್ದೀರಾ?, ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಅರಣ್ಯ ಇಲಾಖೆ ಮೂರು ದಿನಗಳ ಪಕ್ಷಿಗಳ ಗಣತಿ ಕಾರ್ಯ ಆರಂಭಿಸಿದೆ.
70 ಮಂದಿ ಕಾರ್ಯಕರ್ತರು ನಾಲ್ಕು ಸೆಷನ್ ಗಳಂತೆ ಅಭಯಾರಣ್ಯದ ಎಲ್ಲಾ ವಲಯಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸೇರಿ ಗಣತಿ ನಡೆಸಲಿದ್ದಾರೆ.
ಪಕ್ಷಿಗಳ ವಿವರ, ಅವುಗಳು ಇರುವ ಪ್ರದೇಶ ಮತ್ತು ಪ್ರಬೇಧಗಳ ಹೆಸರುಗಳನ್ನು ಗಣತಿ ವೇಳೆ ದಾಖಲಾತಿ ಮಾಡಿಕೊಳ್ಳಲಿದ್ದಾರೆ. ಪಕ್ಷಿಗಳ ಸಂಖ್ಯೆಯ ಬಗ್ಗೆ ಇದರಿಂದ ಮಾಹಿತಿ ಸಿಗಲಿದೆ. ಕಾರ್ಯಕರ್ತರಿಗೆ ಗಣತಿ ಸಂದರ್ಭದಲ್ಲಿ ಕೋವಿಡ್ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
ಮುದ್ದೂರು ವಲಯದಲ್ಲಿ ಚಲುವರಾಯನ ಕಟ್ಟೆಯಲ್ಲಿ 16 ಪಕ್ಷಿಗಳ ಪ್ರಬೇಧಗಳು ಸಿಕ್ಕಿವೆ ಎಂದು ಎಸಿಎಫ್ ಪರಮೇಶ್ ತಿಳಿಸಿದ್ದಾರೆ.