ಶೀಘ್ರದಲ್ಲೇ, ರಾಜ್ಯದ ಶಾಲಾ ಪಠ್ಯದಲ್ಲಿ ಜಾನಪದ ಕಲೆ, 1ನೇ ತರಗತಿಯಿಂದಲೇ ಕಲಿಕೆ
ರಾಜ್ಯ ಸರ್ಕಾರ ಪ್ರಸ್ತಾಪಿಸಿದಂತೆ ಎಲ್ಲವೂ ನಡೆದರೆ, ಪ್ರತಿವರ್ಷ 1ನೇ ತರಗತಿಯಿಂದ ಪ್ರಾರಂಭವಾಗುವ ಪಠ್ಯಪುಸ್ತಕಗಳಲ್ಲಿ ಒಂದು ರೀತಿಯ ಜಾನಪದ ಕಲೆಗಳನ್ನು ಪರಿಚಯಿಸಲಾಗುವುದು.
Published: 10th February 2021 05:54 PM | Last Updated: 10th February 2021 05:54 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಸರ್ಕಾರ ಪ್ರಸ್ತಾಪಿಸಿದಂತೆ ಎಲ್ಲವೂ ನಡೆದರೆ, ಪ್ರತಿವರ್ಷ 1ನೇ ತರಗತಿಯಿಂದ ಪ್ರಾರಂಭವಾಗುವ ಪಠ್ಯಪುಸ್ತಕಗಳಲ್ಲಿ ಒಂದು ರೀತಿಯ ಜಾನಪದ ಕಲೆಗಳನ್ನು ಪರಿಚಯಿಸಲಾಗುವುದು. ಜಾನಪದ ಕಲಾ ಪ್ರಕಾರಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಾಲಾ ಪಠ್ಯದಲ್ಲಿ ಜಾನಪದ ಕಲೆ ಅಳವಡಿಸುತ್ತಿದೆ.
ವಿವಿಧ ಅಕಾಡೆಮಿ ಮತ್ತು ರಂಗಾಯಣ ಅಧ್ಯಕ್ಷರೊಂದಿಗೆ ನಡೆದ ಮೊದಲ ಸಭೆಯಲ್ಲಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ್ ಲಿಂಬಾವಳಿ ಅವರು ಜಾನಪದ ಕಲೆ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಲು ಅನೇಕ ವಿಷಯಗಳ ಬಗ್ಗೆ ಚರ್ಚಿಸಿದರು. ಕಲಾ ಪ್ರಕಾರಗಳ ಮೂಲಕ ಚಿಕ್ಕ ಮಕ್ಕಳನ್ನು ಹೇಗೆ ತಲುಪಬೇಕು ಎಂದು ಅವರು ಚರ್ಚಿಸಿದರು.
ಇದಲ್ಲದೆ, ಮನೆ, ಎತ್ತುಗಳು, ಹೊಲಗಳು, ರಸ್ತೆ, ದೇವಾಲಯ, ಪಂಚಾಯತ್ ಮತ್ತು ಇನ್ನೂ ಅನೇಕ ಮಾದರಿಗಳನ್ನು ಉಳಿಸಿಕೊಳ್ಳಲು ಮಾದರಿ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ಅವರು ಚರ್ಚಿಸಿದರು. ನಗರೀಕರಣದ ಈ ಯುಗದಲ್ಲಿ, ನಗರ ಸ್ಥಳಗಳಲ್ಲಿ ವಾಸಿಸುತ್ತಿರುವ ಪ್ರಸ್ತುತ ಪೀಳಿಗೆಗೆ ಹಳ್ಳಿಗಳ ಬಗ್ಗೆ ತಿಳಿಯುವಂತಾಗಬೇಕು ಎಂದರು.
ಇದೇ ವೇಳೆ ವಿವಿಧ ಅಕಾಡೆಮಿಗಳು ನೀಡುವ ಪ್ರಶಸ್ತಿಗಳ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಕಲಗ್ರಾಮದೊಳಗೆ ಆರ್ಟ್ ಗ್ಯಾಲರಿಯನ್ನು ಸ್ಥಾಪಿಸಲು ಮತ್ತು ಕೆಟ್ಟ ಸ್ಥಿತಿಯಲ್ಲಿರುವ ಕಲಾ ಪ್ರಕಾರಗಳನ್ನು ಸಂರಕ್ಷಿಸುವ ವಿಷಯ ಪ್ರಸ್ತಾಪಿಸಿದರು.