ಬಿಡಿಎ ನಿವೇಶನ ಹಂಚಿಕೆಯಲ್ಲಿ ಅಕ್ರಮ: ನಾಲ್ವರು ಎಂಜಿನಿಯರ್ ಗಳ ಬಂಧನ
ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಶೇಷಾದ್ರಿಪುರಂ ಪೊಲೀಸರು ಮಂಗಳವಾರ ರಾತ್ರಿ ಈ ತಿಂಗಳು ನಿವೃತ್ತರಾಗಲಿದ್ದ ಸಹಾಯಕ ಎಂಜಿನಿಯರ್ ಸೇರಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಿದ ನಾಲ್ವರು ಎಂಜಿನಿಯರ್ ಗಳನ್ನು ಬಂಧಿಸಿದ್ದಾರೆ.
Published: 11th February 2021 01:13 PM | Last Updated: 11th February 2021 01:28 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಶೇಷಾದ್ರಿಪುರಂ ಪೊಲೀಸರು ಮಂಗಳವಾರ ರಾತ್ರಿ ಈ ತಿಂಗಳು ನಿವೃತ್ತರಾಗಲಿದ್ದ ಸಹಾಯಕ ಎಂಜಿನಿಯರ್ ಸೇರಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಿದ ನಾಲ್ವರು ಎಂಜಿನಿಯರ್ ಗಳನ್ನು ಬಂಧಿಸಿದ್ದಾರೆ.
ನಿವೇಶನಗಳ ಹಂಚಿಕೆಗೆ ಸುಳ್ಳು ದಾಖಲಾತಿ ಸೃಷ್ಟಿಸಲು ಬಿಡಿಎ ಕಂದಾಯ ಇಲಾಖೆ ಮತ್ತು ಏಜೆಂಟರೊಂದಿಗೆ ಅವರು ಸಂಪರ್ಕ ಹೊಂದಿದ್ದರು ಎಂಬುದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಇನ್ನೂ 10 ಮಂದಿ ಬಿಡಿಎ ನೌಕರರು ಶೀಘ್ರದಲ್ಲಿಯೇ ಬಂಧನಕ್ಕೊಳಗಾಗುವ ಸಾಧ್ಯತೆಯಿರುವುದಾಗಿ ಮೂಲಗಳು ಹೇಳಿವೆ.
ಬಂಧಿತರೆಲ್ಲರೂ ಆರ್ ಟಿ ನಗರ ಬಿಡಿಎ ಉತ್ತರ ಕಚೇರಿಯಲ್ಲಿ ನಕಲಿ ಸಿಡಿ (ಖಚಿತ ಅಳತೆ) ವರದಿ ಸೃಷ್ಟಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಬಂಧನಕ್ಕೊಗಾದ ಮೂವರು ಸಹಾಯಕ ಎಂಜಿನಿಯರ್ ಆಗಿದ್ದಾರೆ. ಎಂ.ಎಸ್. ಶಂಕರ್ ಮೂರ್ತಿ ( ಎರಡು ತಿಂಗಳ ಹಿಂದಷ್ಟೇ ಬಿಬಿಎಂಪಿಗೆ ವರ್ಗಾವಣೆಯಾಗಿದ್ದಾರೆ) ಕೆ.ಎನ್. ರವಿಕುಮಾರ್ ಮತ್ತು ಶಬೀರ್ ಅಹ್ಮದ್ ಮತ್ತು ಡಿ. ಶ್ರೀರಾಮ್ ಸಹಾಯಕ ಕಾರ್ಯಕಾರಿ ಅಭಿಯಂತರರು ಆಗಿದ್ದಾರೆ. ಅಹ್ಮದ್ ಈ ತಿಂಗಳೊಳಗೆ ನಿವೃತ್ತರಾಗಲಿದ್ದಾರೆ.
ಸಿಡಿ ವರದಿ ನಿವೇಶನದ ಅಳತೆ, ಅದರ ಸುತ್ತಮುತ್ತಲಿನ ಎಲ್ಲ ವಿವರಗಳನ್ನು ನೀಡುತ್ತದೆ. ನಿವೇಶನ ಹಂಚಿಕೆಯಲ್ಲಿ ಇದೇ ಪ್ರಮುಖ ದಾಖಲೆಯಾಗಿರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಂಧಿತರು 20x30 ಮತ್ತು 20x40 ಚ. ಕಿ. ಮೀ ಅಳತೆಯ ನಿವೇಶನಗಳಿಗಾಗಿ ನಕಲಿ ಸಿಡಿ ತಯಾರಿಸುತ್ತಿದ್ದರು. ಶ್ರೀರಾಮ್ ಮತ್ತು ಅಹ್ಮದ್ ಇಂತಹ 14 ವರದಿಗಳನ್ನು ತಯಾರಿಸಿದ್ದರೆ, ಮೂರ್ತಿ ಏಳು ಮತ್ತು ರವಿಕುಮಾರ್ ಐದು ವರದಿಗಳನ್ನು ಸೃಷ್ಟಿಸಿದ್ದರು.