ಬೆಂಗಳೂರು: ಇನ್ನು ಮುಂದೆ ನಗರದಲ್ಲಿ ಉಚಿತ ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ!

ರಾಜ್ಯ ರಾಜಧಾನಿಯಲ್ಲಿ ಪ್ರಸ್ತುತ ಇರುವ ಬಹುತೇಕ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ಪಾವತಿ ಪಾರ್ಕಿಂಗ್ ವ್ಯವಸ್ಥೆಗೆ ಬದಲಾಯಿಸುವುದು ಸೇರಿದಂತೆ ನಗರ ಭೂ ಸಾರಿಗೆ ನಿರ್ದೇಶನಾಲಯ ಸಿದ್ಧಪಡಿಸಿರುವ ಪರಿಷ್ಕೃತ ಪಾರ್ಕಿಂಗ್ ನೀತಿ 2.0ರ ಅನುಷ್ಟಾನಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

Published: 11th February 2021 09:06 AM  |   Last Updated: 11th February 2021 01:22 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಪ್ರಸ್ತುತ ಇರುವ ಬಹುತೇಕ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ಪಾವತಿ ಪಾರ್ಕಿಂಗ್ ವ್ಯವಸ್ಥೆಗೆ ಬದಲಾಯಿಸುವುದು ಸೇರಿದಂತೆ ನಗರ ಭೂ ಸಾರಿಗೆ ನಿರ್ದೇಶನಾಲಯ ಸಿದ್ಧಪಡಿಸಿರುವ ಪರಿಷ್ಕೃತ ಪಾರ್ಕಿಂಗ್ ನೀತಿ 2.0ರ ಅನುಷ್ಟಾನಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಡಲ್ಟ್ ಹಾಗೂ ಬಿಬಿಎಂಪಿ ಈ ಪಾರ್ಕಿಂಗ್ ನೀತಿ ಅನುಷ್ಠಾನದ ಜವಾಬ್ದಾರಿ ವಹಿಸಿ ಸರ್ಕಾರ ಬುಧವಾರ ಆದೇಶ ನೀಡಿದೆ.

ನಗರದಲ್ಲಿ ಮೇ.2020ರ ವೇಳೆಗೆ ವಾಹನಗಳ ಸಂಖ್ಯೆ 94 ಲಕ್ಷ ದಾಟಿದೆ. ವಾಹನ ನೋಂದಣಿಯ ವಾರ್ಷಿಕ ಏರಿಕೆ ದರ ಶೇ.10ಕ್ಕಿಂತ ಹೆಚ್ಚಾಗಿದೆ. ಇದರ ನಿಯಂತ್ರಣಕ್ಕಾಗಿ ಹಂತ-1 ಮಟ್ರೋ ರೈಲು ಪರಿಚಯ, ಫ್ಲೈ ಓವರ್ ಗಳ ನಿರ್ಮಾಣ ಮಾಡಿದರೂ ಸಂಚಾರ ನಿಯಂತ್ರಣ ತಡೆಗಟ್ಟಲು ಸಾಧ್ಯವಾಗಿಲ್ಲ.

ಇದರ ನಿಯಂತ್ರಣಕ್ಕೆ ಮುಖ್ಯವಾಗಿ ಕಡ್ಡಾಯ ಪಾರ್ಕಿಂಗ್ ನೀತಿ ಅವವಡಿಸುವ ಮೂಲಕ ವಾಹನ ದಟ್ಟಣ ಕಡಿಮೆ ಮಾಡಲು ಉದ್ದೇಶಿಸಲಾಗಿದೆ. ಜೊತೆಗೆ ಮೋಟಾರ್ ರಹಿತ ಸಂಚಾರಕ್ಕೆ ಹೆಚ್ಚಿನ ಹೂಡಿಕೆಗಳ ಅಗತ್ಯವಿದ್ದು, ಸ್ವಂತ ವಾಹನ ಬಳಕೆದಾರರನ್ನು ಸಮೂಹ ಸಾರಿಗೆಯಲ್ಲಿ ಸಂಚರಿಸಲು ಪ್ರೋತ್ಸಾಹಿಸಬೇಕಾಗಿದೆ.

ವಾಹನ ಮಾಲೀಕರು ತಮ್ಮ ಮನೆಯ ಸಮೀಪದ ರಸ್ತೆಗಳಲ್ಲಿ ಪಾವತಿ ಆಧಾರದಲ್ಲಿ ವಾಹನಗಳ ನಿಲುಗಡೆ ಮಾಡಲು ಪರವಾನಗಿ ವಿತರಣೆ, ರಸ್ತೆ ಬದಿ ಪಾರ್ಕಿಂಗ್‌ಗೆ ಶುಲ್ಕ ವಿಧಿಸುವುದು, ಪ್ರಮುಖ ಪ್ರದೇಶಗಳಲ್ಲಿ ರಸ್ತೆ ಬದಿ ವಾಹನ ನಿಲುಗಡೆಗೆ ದುಬಾರಿ ಶುಲ್ಕ ವಿಧಿಸುವುದು, ಹೆಚ್ಚು ಸಮಯ ನಿಲುಗಡೆ ಮಾಡುವವರಿಗೆ ಹೆಚ್ಚಿನ ಶುಲ್ಕ, ಶಾಲೆಗಳು ವಾಹನ ನಿಲುಗಡೆಗೆ ಸ್ವಂತ ಸ್ಥಳಾವಕಾಶ ಹೊಂದುವುದನ್ನು ಕಡ್ಡಾಯಗೊಳಿಸುವ ಅಂಶಗಳು ಹೊಸ ಪಾರ್ಕಿಂಗ್‌ ನೀತಿಯಲ್ಲಿವೆ.

ನಗರದಾದ್ಯಂತ ಅಸ್ತವ್ಯಸ್ತವಾದ ವಾಹನ ನಿಲುಗಡೆಗೆ ಕಡಿವಾಣ ಹಾಕಿ, ಸಮರ್ಪಕ ರೀತಿಯ ನಿಲುಗಡೆಗೆ ಅವಕಾಶ ಕಲ್ಪಿಸುವುದು, ಉಚಿತ ವಾಹನ ನಿಲುಗಡೆಯಿಂದ ಪಾವತಿ ನಿಲುಗಡೆ ವ್ಯವಸ್ಥೆಗೆ ಬದಲಾಗುವುದು, ಸರ್ಕಾರವೇ ವಾಹನ ನಿಲುಗಡೆ ಸ್ಥಳಾವಕಾಶ ಕಲ್ಪಿಸುವ ಬದಲಿಗೆ ಖಾಸಗಿ– ಸರ್ಕಾರಿ ಸಹಭಾಗಿತ್ವ ಅಥವಾ ಮಾರುಕಟ್ಟೆ ಚಾಲಿತ ಪಾರ್ಕಿಂಗ್‌ ಸ್ಥಳಾವಕಾಶ ಒದಗಿಸುವುದು ಮತ್ತು ಪಾರ್ಕಿಂಗ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು, ವಲಯವಾರು ಪಾರ್ಕಿಂಗ್‌ ಕಾರ್ಯತಂತ್ರ ರೂಪಿಸುವುದು,

ಖಾಸಗಿ ಸಹಭಾಗಿತ್ವದಲ್ಲಿ ಬಹುಮಹಡಿ ವಾಹನ ನಿಲುಗಡೆ ಕಟ್ಟಡಗಳ ನಿರ್ಮಾಣ, ಹೊರ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಗೆ ಸಂಚರಿಸುವ ಬಸ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ಸ್ಥಳ ನಿಗದಿ, ಟ್ರಕ್‌ಗಳಿಗೆ ವರ್ತುಲ ರಸ್ತೆಗಳ ಸಮೀಪದಲ್ಲೇ ಟರ್ಮಿನಲ್‌ ನಿರ್ಮಾಣ, ಸಗಟು ಮಾರುಕಟ್ಟೆಗಳ ಸ್ಥಳಾಂತರ, ಪಾರ್ಕಿಂಗ್‌ ನಿರ್ವಹಣೆಗೆ ಹೊಸ ತಂತ್ರಜ್ಞಾನಗಳ ಅಳವಡಿಕೆಯ ಪ್ರಸ್ತಾವಗಳೂ ನೀತಿಯಲ್ಲಿವೆ ಎಂದು ತಿಳಿದುಬಂದಿದೆ.

Stay up to date on all the latest ರಾಜ್ಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp