ಐಎಂಎ ಹಗರಣ: ಹೂಡಿಕೆ ವಾಪಸ್ ಕೋರಿ 65,258 ಅರ್ಜಿ, ಹೈಕೋರ್ಟ್ ಗೆ ಹರ್ಷ ಗುಪ್ತ ಮಾಹಿತಿ

ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣ ಪ್ರಕರಣದಲ್ಲಿ ಠೇವಣಿದಾರರ 69,099 ಖಾತೆಗಳಿದ್ದು, ಈ ಪೈಕಿ ಹೂಡಿಕೆ ವಾಪಸ್ ಕೋರಿ 65,258 ಅರ್ಜಿಗಳು ಬಂದಿವೆ’ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. 

Published: 11th February 2021 08:13 AM  |   Last Updated: 11th February 2021 08:13 AM   |  A+A-


File image

ಸಂಗ್ರಹ ಚಿತ್ರ

Posted By : Shilpa D
Source : The New Indian Express

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣ ಪ್ರಕರಣದಲ್ಲಿ ಠೇವಣಿದಾರರ 69,099 ಖಾತೆಗಳಿದ್ದು, ಈ ಪೈಕಿ ಹೂಡಿಕೆ ವಾಪಸ್ ಕೋರಿ 65,258 ಅರ್ಜಿಗಳು ಬಂದಿವೆ’ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. 

ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ(ಕೆಪಿಐಡಿ) ಕಾಯ್ದೆ 2004ರ ಅಡಿಯಲ್ಲಿ ನೇಮಕಗೊಂಡಿರುವ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥ ಐಎಎಸ್ ಅಧಿಕಾರಿ ಹರ್ಷ ಗುಪ್ತ  ಹೈಕೋರ್ಟ್ ವಿವರಣೆ ಸಲ್ಲಿಸಿದ್ದು, ‘2021ರ ಜನವರಿ 3ರವರೆಗೆ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಒಟ್ಟು 2,695 ಕೋಟಿ ರು.ಹಣ ವಾಪಸ್ ಕೋರಿ ಅರ್ಜಿಗಳು ಬಂದಿವೆ’ ಎಂದು
ವಿವರಿಸಿದ್ದಾರೆ.

ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಆದಾಯ ತೆರಿಗೆ ಇಲಾಖೆಗೆ ಬರೆದಿರುವ ಪತ್ರವನ್ನು ಹಾಜರುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಈ ಹಗರಣದ ತನಿಖೆಯ ಪ್ರಗತಿ ಬಗ್ಗೆ ವರದಿ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಿತು.

ಬಂದಿರುವ ಅರ್ಜಿಗಳಲ್ಲಿ 45 ಸಾವಿರ ಅರ್ಜಿಗಳ ಪರಿಶೀಲನೆ ಮುಗಿದಿದೆ. ಉಳಿದ ಅರ್ಜಿಗಳ ಪರಿಶೀಲನೆ ಕಾರ್ಯ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಹಕ್ಕುಗಳ ಇತ್ಯರ್ಥದ ವಿಧಾನ ಅಂತಿಮಗೊಳಿಸಲು ವಿಶೇಷ ನ್ಯಾಯಾಲಯಕ್ಕೆ ಅರ್ಜಿಸಲಾಗಿದೆ’ ಎಂದು ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಎಲ್ಲಾ ಹೂಡಿಕೆದಾರರ ಬ್ಯಾಂಕ್ ಖಾತೆ ಪರಿಶೀಲನೆಯನ್ನು ಆನ್‌ಲೈನ್ ಮೂಲಕ ತಮ್ಮ ಬ್ಯಾಂಕ್ ಖಾತೆಗೆ ಒಂದು ರೂಪಾಯಿ ಪರೀಕ್ಷಾ ವರ್ಗಾವಣೆಯೊಂದಿಗೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.ಠೇವಣಿ ಮೊತ್ತಕ್ಕಿಂತ ಹೆಚ್ಚಿನ ಹಣ ಪಡೆದ ಠೇವಣಿದಾರರಿಂದ ಹಣವನ್ನು ಮರುಪಡೆಯುವ ಪ್ರಸ್ತಾವನೆಯನ್ನು ಮುಂದುವರಿಸಲು ಕಾನೂನು ಇಲಾಖೆ ಸಲಹೆ ನೀಡಿದೆ ಎಂದು ಅವರು ಹೇಳಿದರು. ಪ್ರತಿ ಹಕ್ಕುದಾರನಿಗೆ ಆರಂಭದಲ್ಲಿ 50,000 ರೂ.ಗಳವರೆಗೆ ಹಣ ಇತ್ಯರ್ಥಕ್ಕೆ ಅನುಮತಿ ನೀಡಲಾಗಿದೆ ಎಂದು ವಿವರಿಸಿದ್ದಾರೆ.

Stay up to date on all the latest ರಾಜ್ಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp