1- 8ನೇ ತರಗತಿವರೆಗೆ ತರಗತಿ ಆರಂಭ ಬಗ್ಗೆ ಮುಂದಿನ ವಾರ ನಿರ್ಧಾರ- ಸುರೇಶ್ ಕುಮಾರ್
ಒಂಬತ್ತು, ಹತ್ತು ಮತ್ತು ಪ್ರಥಮ, ದ್ವಿತೀಯ ಪಿಯುಸಿ ತರಗತಿಗಳನ್ನು ಪುನರಾರಂಭಿಸಿದ ನಂತರ ಒಂದರಿಂದ 8ನೇ ತರಗತಿವರೆಗಿನ ಶಾಲಾ ಮಕ್ಕಳ ತರಗತಿ ಪುನರಾರಂಭಕ್ಕೆ ಸರ್ಕಾರ ಕಾಯುತ್ತಿದೆ.
Published: 12th February 2021 08:45 PM | Last Updated: 12th February 2021 08:45 PM | A+A A-

ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್
ಬೆಂಗಳೂರು: ಒಂಬತ್ತು, ಹತ್ತು ಮತ್ತು ಪ್ರಥಮ, ದ್ವಿತೀಯ ಪಿಯುಸಿ ತರಗತಿಗಳನ್ನು ಪುನರಾರಂಭಿಸಿದ ನಂತರ ಒಂದರಿಂದ 8ನೇ ತರಗತಿವರೆಗಿನ ಶಾಲಾ ಮಕ್ಕಳ ತರಗತಿ ಪುನರಾರಂಭಕ್ಕೆ ಸರ್ಕಾರ ಕಾಯುತ್ತಿದೆ.
ಉಳಿದ ತರಗತಿಗತಿ ಆರಂಭದ ಬಗ್ಗೆ ಚರ್ಚಿಸಲು ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಮತ್ತು ತಾಂತ್ರಿಕ ಸಲಹಾ ಸಮಿತಿ ಸಭೆ ಫೆಬ್ರವರಿ 16 ರಂದು ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಾಲೆಗಳನ್ನು ಪುನರ್ ಆರಂಭಿಸುವ ಬಗ್ಗೆ ಅನೇಕ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
9 ಮತ್ತು 10ನೇ ತರಗತಿವರೆ ಬೆಳಗ್ಗೆ 10ರಿಂದ ಸಂಜೆ 4-30ರವರೆಗೂ ಫೆಬ್ರವರಿ 1ರಿಂದ ತರಗತಿಗಳು ಆರಂಭಗೊಂಡಿವೆ. ಆದಾಗ್ಯೂ, 6 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿಗಳನ್ನು ಪರ್ಯಾಯ ದಿನಗಳಲ್ಲಿ ಮುಂದುವರಿಸಲು ಸರ್ಕಾರ ನಿರ್ಧರಿಸಿತ್ತು.
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ತರಗತಿಗಳು ಈಗಾಗಲೇ ನಡೆಯುತ್ತಿದ್ದು, ಭೌತಿಕ ತರಗತಿಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕೂಡಾ ಹೆಚ್ಚಾಗಿದೆ. ತಾತ್ಕಾಲಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾದಾಗಿನಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯ ಪ್ರಕ್ರಿಯೆ, ಮೌಲ್ಯಮಾಪನ, ಮತ್ತು ಫಲಿತಾಂಶದ ಬಗ್ಗೆ ಜೂನ್ ಅಂತ್ಯದಲ್ಲಿ ಘೋಷಿಸಲಾಗುವುದು, ಇದೇ ರೀತಿಯಲ್ಲಿ 1ರಿಂದ 9ನೇ ತರಗತಿವರೆಗಿನ ಪರೀಕ್ಷೆ, ಫಲಿತಾಂಶವನ್ನು ಜೂನ್ 10ರೊಳಗೆ ಘೋಷಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.