ಗದಗದಲ್ಲಿ ರಾಜ್ಯದ ಮೊದಲ ಇವಿಎಂ ಗೋದಾಮು ಉದ್ಘಾಟನೆ

ರಾಜ್ಯದ ಮೊದಲ ಎಲೆಕ್ಟ್ರಾನಿಕ್ ಮತದಾನ ಯಂತ್ರ (ಇವಿಎಂ) ಗೋದಾಮನ್ನು ರೈಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್  ಗದಗದಲ್ಲಿ ಉದ್ಘಾಟಿಸಿದರು.

Published: 12th February 2021 11:51 AM  |   Last Updated: 12th February 2021 01:02 PM   |  A+A-


EVM warehouse

ಇವಿಎಂ ಗೋದಾಮು

Posted By : Shilpa D
Source : The New Indian Express

ಗದಗ: ರಾಜ್ಯದ ಮೊದಲ ಎಲೆಕ್ಟ್ರಾನಿಕ್ ಮತದಾನ ಯಂತ್ರ (ಇವಿಎಂ) ಗೋದಾಮನ್ನು ರೈಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್  ಗದಗದಲ್ಲಿ ಉದ್ಘಾಟಿಸಿದರು.

ಸುಮಾರು 2.65 ಕೋಟಿ ರು ವೆಚ್ಚದಲ್ಲಿ ಈ ಕಟ್ಟಡ ಜಿಲ್ಲಾಧಿಕಾರಿ ಕಚೇರಿ ಹಿಂದೆ ನಿರ್ಮಾಣವಾಗಿದೆ,  ಹೆಚ್ಚು ಸುರಕ್ಷಿತವಾದ ಕಟ್ಟಡವು ಪ್ರವೇಶದ್ವಾರದ ಬಳಿ ಮೊದಲ ಹಂತದ ಚೆಕ್‌ರೂಮ್ ಮತ್ತು ಜಿಲ್ಲೆಯ ನಾಲ್ಕು ಅಸೆಂಬ್ಲಿ ವಿಭಾಗಗಳಿಗೆ ಮೀಸಲಾಗಿರುವ ನಾಲ್ಕು ಇಂಟರ್ ಕನೆಕ್ಟೆಡ್ ಸಭಾಂಗಣಗಳನ್ನು ಹೊಂದಿದೆ.

ಎಲ್ಲಾ ಸಭಾಂಗಣಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಅಗ್ನಿ ಶಾಮಕ ಮತ್ತು ತುರ್ತು ಅಲಾರಂಗಳಿವೆ. ಮತದಾನದ ನಂತರ ಇವಿಎಂಗಳ ಮೊದಲ ಹಂತದ ಪರಿಶೀಲನೆಗೆ  ಪ್ರತ್ಯೇಕ ಕೋಣೆಯಿದೆ, ಮೊದಲ ಹಂತವಾಗಿ ಇವಿಎಂಗಳು ಮತ್ತು ವಿವಿಪಿಎಟಿಗಳನ್ನು ಸಂಗ್ರಹಿಸಲು ಗೋದಾಮಿಗೆ ಮೀಸಲಾದ ಸ್ಥಳ ಒದಗಿಸಲಾಗಿದೆ. ಚುನಾವಣೆಯ ಸಮಯದಲ್ಲಿ ಗೋದಾಮಿಗೆ ಉಪಕರಣಗಳನ್ನು ಪೂರೈಸುವ ಕೆಲಸವನ್ನು ವಹಿಸಿಕೊಟ್ಟಿರುವ ಸಂಸ್ಥೆ ಶೀಘ್ರದಲ್ಲೇ ಟ್ರಯಲ್ ರನ್ ನಡೆಸಲಿದೆ.

ರಾಜ್ಯ ಚುನಾವಣಾ ಆಯೋಗದ ಜಂಟಿ ಮುಖ್ಯ ಚುನಾವಣಾಧಿಕಾರಿ ವಿ.ರಾಘವೇಂದ್ರ, ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಮತ್ತು ಡಿಸಿ ಸುಂದರೇಶ್ ಬಾಬು ಎನ್ ಈ ವೇಳೆ ಉಪಸ್ಥಿತರಿದ್ದರು.

ಇವಿಎಂ ಮತ್ತು ವಿವಿಪಿಎಟಿಗಳನ್ನು ರಕ್ಷಿಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಈ ಸೌಲಭ್ಯವನ್ನು ನಿರ್ಮಿಸಲಾಗಿದೆ. ಮತ ಎಣಿಕೆಯ ಸಮಯದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Stay up to date on all the latest ರಾಜ್ಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp