ವಸತಿ ಫಲಾನುಭವಿಗಳಿಗೆ ಸಕಾಲದಲ್ಲಿ ಕಂತಿನ ಸಾಲ ನೀಡಲು ಬ್ಯಾಂಕ್ ಗೆ ಸೂಚನೆ: ಸಚಿವ ವಿ.ಸೋಮಣ್ಣ

ವಸತಿ ಫಲಾನುಭವಿಗಳಿಗೆ ಸಕಾಲದಲ್ಲಿ ಸಾಲ ನೀಡುವಂತೆ ಬ್ಯಾಂಕ್ ನವರಿಗೆ ಸೂಚನೆ ನೀಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

Published: 12th February 2021 08:24 AM  |   Last Updated: 12th February 2021 08:51 AM   |  A+A-


somanna

ಸೋಮಣ್ಣ

Posted By : Manjula VN
Source : UNI

ಬೆಂಗಳೂರು: ವಸತಿ ಫಲಾನುಭವಿಗಳಿಗೆ ಸಕಾಲದಲ್ಲಿ ಸಾಲ ನೀಡುವಂತೆ ಬ್ಯಾಂಕ್ ನವರಿಗೆ ಸೂಚನೆ ನೀಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಮುಖ್ಯಮಂತ್ರಿ ನೇತೃತ್ವದಲ್ಲಿ ಪಿಎಂ ಸ್ವನಿಧಿ ಮತ್ತು ಪಿಎಂ ಅವಾಜ್ ಯೋಜನೆ ಹಾಗೂ ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಅವರು, 2023ರೊಳಗೆ ಯಾರಿಗೆ ಸೂರಿಲ್ಲ ಅವರಿಗೆ ಸೂರು ಕಲ್ಪಿಸಲಾಗುತ್ತದೆ. ಇಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಿದ್ದೇವೆ. ಇದೊಂದು ಐತಿಹಾಸಿಕ‌ ತೀರ್ಮಾನ 3.40 ಲಕ್ಷ ಮನೆಗಳನ್ನ ಕಟ್ಟಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಇದಕ್ಕೆ ಗ್ರಾಂಟ್ ಸಿಗಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಾಯಧನ ನೀಡುತ್ತಿದ್ದು, ಉಳಿಕೆ ಹಣವನ್ನು ಬ್ಯಾಂಕ್ ನಿಂದ ಪಡೆಯಬೇಕು. ಆದರೆ ಬ್ಯಾಂಕುಗಳು ಹಣವನ್ನು ಸರಿಯಾಗಿ ನೀಡುತ್ತಿರಲಿಲ್ಲ.

ಮನೆ ಕಟ್ಟಲು ಹಣ ಸಮಯಕ್ಕೆ ಬಿಡುಗಡೆ ಮಾಡ್ತಿರಲಿಲ್ಲ. ದಾಖಲೆ ಕೇಳಿ ಫಲಾನುಭವಿಗಳನ್ನು ಅಲೆಸುತ್ತಿದ್ರು. ಮೂರು ತಿಂಗಳಲ್ಲಿ ಬ್ಯಾಂಕ್ ನವರು ಕಂತಿನ ಸಾಲವನ್ನು ವಿಲೇವಾರಿ ಮಾಡಬೇಕು. ಅದಕ್ಕೆ ಬ್ಯಾಂಕ್ ನವರನ್ನು ಕರೆದು ಸಭೆ ನಡೆಸಿದ್ದೇವೆ. ಮೂರು ತಿಂಗಳ ಬಳಿಕ ಮತ್ತೆ ಸಭೆ ನಡೆಸುತ್ತೇವೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಸಂಬಂಧ ಫಲಾನುಭವಿಗಳಿಗೆ 12ಲಕ್ಷ ಸಾಲ ಕೊಡಲು ನಿರ್ಧರಿಸಲಾಗಿದೆ. ಮನೆ ಕಟ್ಟಿಕೊಳ್ಳಲು ಪರಿಶಿಷ್ಟಜಾತಿ, ಪಂಗಡಕ್ಕೆ 3.5 ಲಕ್ಷ ರೂ.ಹಣ ಸರ್ಕಾರ ನೀಡಲಿದೆ. ಬೇರೆ ವರ್ಗದವರಿಗೆ 1.5 ಲಕ್ಷ ರೂ. ಹಣ ಸರ್ಕಾರ ಕೊಡುತ್ತಿದೆ. ಇನ್ನು ಬಡಬೀದಿ ವ್ಯಾಪಾರಿಗಳಿಗೆ 10ಸಾವಿರ ಹಣ ನೀಡಬೇಕಿದೆ. ಇದು ಪ್ರಧಾನಿಯವರ ಸೂಚನೆಯಾಗಿದೆ. ಹೀಗಾಗಿ ಬಡವರ ಪರ ಯೋಜನೆ ತರುತ್ತಿದ್ದೇವೆ ಎಂದು ತಿಳಿಸಿದರು.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp