ಸರಿಯಾದ ವೇತನ ಇಲ್ಲದೆ ಸಂಕಷ್ಟ: ಕಿಡ್ನಿ ಮಾರಾಟಕ್ಕಿಟ್ಟ ಕರ್ನಾಟಕ ಸಾರಿಗೆ ಕಂಡಕ್ಟರ್!

ವೇತನ ಕಡಿತ ಹಿನ್ನೆಲೆಯಲ್ಲಿ ದಿನ ನಿತ್ಯದ ಅಗತ್ಯತೆಗಳನ್ನು ಪೂರೈಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 38ವರ್ಷದ ಬಸ್ ಕಂಡಕ್ಟರ್ ತನ್ನ ಕಿಡ್ನಿಯನ್ನೇ ಮಾರಾಟಕ್ಕಿಟ್ಟಿರುವ ಘಟನೆ ನಡೆದಿದೆ.

Published: 12th February 2021 02:03 PM  |   Last Updated: 12th February 2021 03:04 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಕೊಪ್ಪಳ: ವೇತನ ಕಡಿತ ಹಿನ್ನೆಲೆಯಲ್ಲಿ ದಿನ ನಿತ್ಯದ ಅಗತ್ಯತೆಗಳನ್ನು ಪೂರೈಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 38ವರ್ಷದ ಬಸ್ ಕಂಡಕ್ಟರ್ ತನ್ನ ಕಿಡ್ನಿಯನ್ನೇ ಮಾರಾಟಕ್ಕಿಟ್ಟಿರುವ ಘಟನೆ ನಡೆದಿದೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕ ಕಮ್ ನಿರ್ವಾಹಕ ಸೇವೆಯಲ್ಲಿರುವ ಜಿಲ್ಲೆಯ ಹನುಮಂತ ಕಾಲೇಗಾರ ಅವರು, ವೇತನ ಇಲ್ಲದೆ ಕಿಡ್ನಿ ಮಾರಾಟಕ್ಕಿಟ್ಟಿದ್ದಾರೆ.

ಈ ಕುರಿತಾದ  ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಕುಷ್ಟಗಿ ನಿವಾಸಿಯಾಗಿರುವ ಹನುಮಂತ ಕಾಲೇಗಾರ ಗಂಗಾವತಿ ಬಸ್ ಡಿಪೋದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಪೂರ್ಣ ವೇತನ ಪಾವತಿಸದೇ ಎಲ್ಲವೂ ಕಡಿತಗೊಂಡು ಕಡಿಮೆ ವೇತನ ಪಾವತಿಯಾಗಿದೆ.

ಇದರಿಂದ ಮನನೊಂದಿರುವ ಹನಮಂತ ಕಾಲೇಗಾರ ಅವರು ಸಾಮಾಜಿಕ ಜಾಲತಾಣದಲ್ಲಿ ಈ ವೇತನದಲ್ಲಿ ಬಾಡಿಗೆ ಮನೆ, ರೇಷನ್ ಗೆ ಹಣ ಸಾಕಾಗುವುದಿಲ್ಲ. ನನ್ನ  ಕಿಡ್ನಿ ಮಾರಾಟಕ್ಕಿದೆ ಎಂದು ಸ್ಟೇಟಸ್ ಹಾಕಿದ್ದಾರೆ.

ಮನೆ ಬಾಡಿಗೆ ಪಾವತಿಸಬೇಕು, ದಿನಸಿ ವಸ್ತುಗಳನ್ನು ಖರೀದಿಸಬೇಕು, ತನ್ನ ಮಕ್ಕಳ ಶಿಕ್ಷಣವನ್ನು ನೋಡಿಕೊಳ್ಳಬೇಕು ಹಾಗೂ ಪೋಷಕರ  ವೈದ್ಯಕೀಯ ಖರ್ಚುಗಳನ್ನು ಭರಿಸಬೇಕು. ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ತನ್ನ ಮಗನನ್ನು ತನ್ನ ಶಿಕ್ಷಣ ಕೊಡಿಸಲು ಸಾಧ್ಯವಾಗದೇ ಅಜ್ಜಿಯ ಮನೆಗೆ ಕಳುಹಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಮೊದಲು ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಈಗ ಎನ್‌ಇಕೆಆರ್‌ಟಿಸಿಯಲ್ಲಿ ಕೆಲಸ ಮಾಡಿದ ನಂತರವೂ  ಆರ್ಥಿಕ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಎನ್ ಕೆ ಅಸ್ ಆರ್ ಟಿಸಿ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಕ ಎಂಎ ಮುಳ್ಳ, ಹನುಮಂತ ನಿಯಮಿತವಾಗಿ ಕೆಲಸಕ್ಕೆ ಬರುತ್ತಿರಲಿಲ್ಲ, ಹೀಗಾಗಿ ಅವರ ವೇತನ ಕಡಿತ ಮಾಡಿದ್ದಾಗಿ ತಿಳಿಸಿದ್ದಾರೆ.  ಸರಿಯಾಗಿಕೆಲಸಕ್ಕೆ ಹೋಗುವಂತೆ ಹೇಳಲು ಅವರ ಕುಟುಂಬಕ್ಕೂ ಸಹ ತಿಳಿಸಿದ್ದೆ, ಆದರೆ ಅದರಿಂದ ಯಾವುದೇ ಸುಧಾರಣೆಯಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.


Stay up to date on all the latest ರಾಜ್ಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp