ತಂತ್ರಜ್ಞಾನದಿಂದ ರೈತರಿಗೆ ಸಂಪತ್ತು, ಸ್ವಾತಂತ್ರ್ಯ ಸಿಗಲಿದೆ: ಎಸ್.ಆರ್. ವಿಶ್ವನಾಥ್
ಮಧ್ಯವರ್ತಿಗಳ ಕಾರಣದಿಂದಾಗಿ ರೈತರಿಗೆ ಸರಿಯಾದ ಲಾಭ ಸಿಗುತ್ತಿಲ್ಲ, ರೈತರು ಸಂಪತ್ತು ಗಳಿಸಲು ಮತ್ತು ಸ್ವತಂತ್ರ್ಯವಾಗಿರಲು ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿದ್ದಾರೆ.
Published: 13th February 2021 09:08 AM | Last Updated: 13th February 2021 12:54 PM | A+A A-

ರಾಷ್ಟ್ರೀಯ ತೋಟಗಾರಿಕಾ ಮೇಳ
ಬೆಂಗಳೂರು: ಮಧ್ಯವರ್ತಿಗಳ ಕಾರಣದಿಂದಾಗಿ ರೈತರಿಗೆ ಸರಿಯಾದ ಲಾಭ ಸಿಗುತ್ತಿಲ್ಲ, ರೈತರು ಸಂಪತ್ತು ಗಳಿಸಲು ಮತ್ತು ಸ್ವತಂತ್ರ್ಯವಾಗಿರಲು ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿದ್ದಾರೆ.
ಐದು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳದ ಸಮಾರೋಪದಲ್ಲಿ ಭಾಗವಹಿಸಿದ್ದ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಮಾತನಾಡಿ, ರೈತರಿಗೆ ತಾವು ಬೆಳೆದ ಬೆಳೆಗಳಿಗೆ ನಿಗದಿತ ಬೆಲೆ ಸಿಗುವಂತಾಗಬೇಕು. ರೈತನಿಗೆ ನ್ಯಾಯವಾದ ಬೆಲೆ ಸಿಗದೆ ಮದ್ಯವರ್ತಿಗಳ ಪಾಲಾಗುತ್ತಿದೆ ಎಂದರು. ಪ್ರಧಾನ ಮಂತ್ರಿಗಳು 2022 ರ ವೇಳೆಗೆ ರೈತರ ಆದಾಯ ದ್ವಿಗುಣಕ್ಕೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ, ಇದು ಸಾದ್ಯವಾಗಬೇಕಾದರೆ, ಎಲ್ಲ ಬೆಳೆಗಳಿಗೆ ಅಗತ್ಯ ಬೆಂಬಲ ಬೆಲೆ ಅಗತ್ಯ ನಿಗದಿ ಮಾಡಬೇಕು ಎಂದು ವಿಶ್ವನಾಥ ಆಗ್ರಹಿಸಿದರು.
ಐಐಹೆಚ್ ಆರ್ ಉತ್ತಮ ತಂತ್ರಜ್ಞಾನ ಮತ್ತು ಹೊಸ ತೋಟಗಾರಿಕೆ ಬೆಳೆಗಳನ್ನು ಅಭಿವೃದ್ದಿ ಪಡಿಸಿದ್ದು, ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ, ರೋಗ ನಿರೋಧಕ ತಂತ್ರಜ್ಞಾನಗಳು ಮತ್ತು ಹೊಸ ತಳಿಗಳ ಸಂಶೋಧನೆಯಿಂದ ರೈತರು ಕಡಿಮೆ ಉತ್ಪಾದನ ವೆಚ್ಚದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾದ್ಯವಾಗಿದೆ ಎಂದು ವಿಶ್ವನಾಥ್ ಶ್ಲಾಘಿಸಿದರು.
ಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ರೈತರು ಸ್ಥಳೀಯ ರೈತರ ಮನವಲಿಸಬೇಕು, ಇದಕ್ಕಾಗಿ ಅವರು ಗುಂಪುಗಳನ್ನು ರಚಿಸಿಕೊಳ್ಳಬೇಕು. ಮೇಳದಲ್ಲಿ ಪಾಲ್ಗೊಂಡ ರೈತರು ಮತ್ತು ಪ್ರತಿನಿದಿಗಳು, ಇದರ ಪ್ರಯೋಜನವನ್ನು ಜನರಿಗೆ ಮತ್ತು ರೈತರಿಗೆ ತಿಳಿಸುವ ಪ್ರಯತ್ನ ಮಾಡಬೇಕು ಅದರಲ್ಲೂ ಮುಖ್ಯವಾಗಿ ಐಐಹೆಚ್ಆರ್ ಅಭಿವೃದ್ದಿ ಪಡಿಸಿರುವ ತಂತ್ರಜ್ಞಾನಗಳು, ರೋಗ ನಿರೋಧಕ, ಕಟ್ಟಕಡೆಯ ರೈತರಿಗೆ ತಲುಪಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
:ರೈತರು ಬೆಳಯುವ ಬೆಳೆಗೆ ಸೂಕ್ತ ಬೆಲೆ ಸಿಗದಿರುವುದು ನಮ್ಮ ದೇಶದಲ್ಲಿ ಸಾಮಾನ್ಯ ಸಂಗತಿ. ಜೊತೆಗೆ ಮಾರುಕಟ್ಟೆ ಮಾಹಿತಿಯ ಕೊರತೆಯೂ ಕೂಡ ರೈತರನ್ನು ಕಾಡುವ ಸಮಸ್ಯೆ. ಇದೀಗ ಈ ಸಮಸ್ಯೆಗೆ ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಪರಿಹಾರ ಕಂಡು ಹಿಡಿದಿದ್ದು, ರೈತರು ತಮ್ಮ ಬೆಳೆಯನ್ನು ಸೂಕ್ತ ಬೆಲೆಗೆ ದೇಶಾದ್ಯಂತ ಮಾರಾಟ ಮಾಡಲು ಅನುಕೂಲ ವಾಗಲಿದೆ. ಈ ಬಗ್ಗೆ ಐಐಹೆಚ್ಆರ್ ನಿರ್ದೇಶಕ ಡಾ. ಎಂ.ಆರ್. ದಿನೇಶ್ ಅವರು ಸಮಾರೋಪ ಸಮಾರಂಭದಲ್ಲಿ ತಿಳಿಸಿದ್ದಾರೆ.
ದೇಶದ ನಾನಾ ಭಾಗಗಳ ಕೃಷಿ ಮಾರುಕಟ್ಟೆಗಳ ರೈತರ ಉತ್ಪನ್ನಗಳ ಬೆಲೆ ಕುರಿತು ಉತ್ಪಾದಕರಿಗೆ ನಿಖರ ಮಾಹಿತಿ ಒದಗಿಸುವ ಅರ್ಕಾ ಯುನೋ ಸೀಡ್ ಪೋರ್ಟಲ್ನಲ್ಲಿ ಈಗಾಗಲೇ 2.63 ಲಕ್ಷ ರೈತರು ನೋಂದಾಯಿಸಿಕೊಂಡಿದ್ದಾರೆ ಎಂದು ಭಾರತೀಯ ತೋಟಗಾರಿಕೆ ಸಂಶೋಧನ ಸಂಸ್ಥೆ (ಐಐಹೆಚ್ಆರ್) ನಿರ್ದೇಶಕ ಡಾ. ಎಂ.ಆರ್. ದಿನೇಶ್ ವಿವರಿಸಿದರು.
ಐದು ದಿನಗಳ ರಾಷ್ಟ್ರೀಯ ತೋಟಗಾರಿಕೆ ಮೇಳದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪೋರ್ಟಲ್ ಜೊತೆಗೆ ಈ ತಿಂಗಳ ಅಂತ್ಯದಲ್ಲಿ ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಅರ್ಕಾ ವ್ಯಾಪಾರ್ ಆ್ಯಪ್ ಫೆಬ್ರುವರಿ ತಿಂಗಳ ಅಂತ್ಯದೊಳಗೆ ಲಭ್ಯವಾಗಲಿದೆ.
ರೈತರ ಉತ್ಪನ್ನಗಳ ಬೆಲೆ ಕುರಿತು ಉತ್ಪಾದಕರಿಗೆ ನಿಖರ ಮಾಹಿತಿ ಒದಗಿಸಲು ಅರ್ಕಾ ವ್ಯಾಪರ್ ಆ್ಯಪ್ನ್ನು ಐಐಹೆಚ್ಆರ್ ಅಭಿವೃದ್ದಿಪಡಿಸಿದ್ದು, ಇದು ಗ್ರಾಹಕರು ಮತ್ತು ಉತ್ಪಾದಕರ ಸಂಪರ್ಕಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಉತ್ಪದಾಕರಿಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸುವ ಸಲುವಾಗಿ ಈ ಆ್ಯಪ್ ರೂಪಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆಯ ಬಹುದಾಗಿದೆ ಎಂದು ದಿನೇಶ್ ತಿಳಿಸಿದರು.