ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಸೆಸ್ ಕಡಿತ ಅಸಾಧ್ಯ: ಸಚಿವ ಸೋಮಶೇಖರ್

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿರುವ ಈ ದಿನಗಳಲ್ಲಿ ಅಸ್ಸಾಂ ಮಾದರಿಯಂತೆ ಸೆಸ್ ಕಡಿತಗೊಳಿಸುವ ಮೂಲಕ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. 

Published: 14th February 2021 07:46 AM  |   Last Updated: 14th February 2021 07:46 AM   |  A+A-


Posted By : Raghavendra Adiga
Source : The New Indian Express

ಮೈಸೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿರುವ ಈ ದಿನಗಳಲ್ಲಿ ಅಸ್ಸಾಂ ಮಾದರಿಯಂತೆ ಸೆಸ್ ಕಡಿತಗೊಳಿಸುವ ಮೂಲಕ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಹಾಗಾಗಿ ಸೆಸ್ ಕಡಿತ ಅಸಾಧ್ಯ ಎಂದು ಅವರು ಹೇಳಿದರು.  ಕಳೆದ ಏಳು-ಎಂಟು ತಿಂಗಳುಗಳಲ್ಲಿ, (ಸಾಂಕ್ರಾಮಿಕದ ಕಾರಣ) ಸರಿಯಾದ ಸೆಸ್ ಸಂಗ್ರಹ ಆಗಿಲ್ಲ, ಮತ್ತು ರಾಜ್ಯದ ಹಣಕಾಸು ಸ್ಥಿತಿ  ಇನ್ನೂ ಚೇತರಿಕೆ ಆಗಿಲ್ಲ ಎಂದರು. 

ಶನಿವಾರ ಮೈಸೂರಿನಲ್ಲಿ ಬಜೆಟ್ ಪೂರ್ವಭಾವಿ ಕಾರ್ಯಕ್ರಮದ ಅಂಗವಾಗಿ ಸುದ್ದಿಗಾರರೊಂದಿಗಿನ ಸಂವಾದದಲ್ಲಿ ಮಾತನಾಡಿದ ಸೋಮಶೇಖರ್, ಕೇಂದ್ರದ ಬಜೆಟ್‌ನಲ್ಲಿ ಘೋಷಿಸಿದ ಆತ್ಮ ನಿರ್ಭರ್ ಯೋಜನೆಯಡಿ ರಾಜ್ಯದ ಎಪಿಎಂಸಿಗಳನ್ನು ಆಧುನೀಕರಿಸುವುದಕ್ಕೆ ರಾಜ್ಯ162 ಆಯ್ದ ಎಪಿಎಂಸಿಗಳಿಗೆ 361 ಕೋಟಿ ರೂ. .ನಿಗದಿ ಮಾಡಿದೆ. ಎಪಿಎಂಸಿಗಳಿಂದ ತೆರಿಗೆ ಸಂಗ್ರಹದ ಕುಸಿತದ ಬಗ್ಗೆ, ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತುಮಾರುಕಟ್ಟೆಗಳಿಗೆ ಸಮಿತಿಗಳನ್ನು ನಡೆಸಲು ಸಾಧ್ಯವಾಗದಿದ್ದರೆ, ಕಠಿಣ ಪರಿಸ್ಥಿತಿ ಎದುರಾದರೆ ಸರ್ಕಾರವು ಬೆಂಬಲವನ್ನು ನೀಡುತ್ತದೆ ಎಂದು ಅವರು ಹೇಳಿದರು. 

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಹಿಂದ ಪುನರುಜ್ಜೀವನಗೊಳಿಸುವ ಕುರಿತು ಪ್ರತಿಕ್ರಿಯಿಸಿದ ಅವರು ಅಹಿಂದ ಸೂತ್ರ ಈಗ ಪ್ರಸ್ತುತವಲ್ಲ."ಇದನ್ನು ಪುನರುಜ್ಜೀವನಗೊಳಿಸಲು ನಾಯಕತ್ವದ ಸ್ಥಾನವನ್ನು ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಮೂಲಕ ಬೆದರಿಸಲಾಗುತ್ತದೆ." ಅವರು ಹೇಳಿದರು. ಆದಾಗ್ಯೂ, ಸಿದ್ದರಾಮಯ್ಯ ಅವರ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ ಎಂದು ಹೇಳಿದರು.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp