ಕೋವಿಡ್ ವ್ಯಾಕ್ಸಿನ್ ವಿತರಣೆ: ಗದಗದಲ್ಲಿ ಶೇ.73ರಷ್ಟು ಕೊವಿಡ್ ವಾರಿಯರ್ಸ್ ಗೆ ಲಸಿಕೆ; ರಾಜ್ಯದಲ್ಲೇ ಅತಿಹೆಚ್ಚು!

ರಾಜ್ಯದಲ್ಲಿ ಕೊರೋನಾ ವಾರಿಯರ್ಸ್ ಗೆ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಭರದಿಂದ ಸಾಗಿದ್ದು, ಗದಗದಲ್ಲಿ ಶನಿವಾರ ಗರಿಷ್ಠ ಪ್ರಮಾಣದ ಅಂದರೆ ಶೇ,73ರಷ್ಟು ಕೊರೋನಾ ಸೇನಾನಿಗಳಿಗೆ ಲಸಿಕೆ ವಿತರಣೆ ಮಾಡಲಾಗಿದೆ.

Published: 15th February 2021 12:33 PM  |   Last Updated: 15th February 2021 01:11 PM   |  A+A-


COVID-19 vaccine

ಸಂಗ್ರಹ ಚಿತ್ರ

Posted By : Srinivasamurthy VN
Source : The New Indian Express

ಗದಗ: ರಾಜ್ಯದಲ್ಲಿ ಕೊರೋನಾ ವಾರಿಯರ್ಸ್ ಗೆ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಭರದಿಂದ ಸಾಗಿದ್ದು, ಗದಗದಲ್ಲಿ ಶನಿವಾರ ಗರಿಷ್ಠ ಪ್ರಮಾಣದ ಅಂದರೆ ಶೇ,73ರಷ್ಟು ಕೊರೋನಾ ಸೇನಾನಿಗಳಿಗೆ ಲಸಿಕೆ ವಿತರಣೆ ಮಾಡಲಾಗಿದೆ.

ಹೌದು.. ಗದಗದಲ್ಲಿ ಶನಿವಾರ ಅತಿ ಹೆಚ್ಚು ಪ್ರಮಾಣದಲ್ಲಿ ಕೋವಿಡ್ ಲಸಿಕೆ ವಿತರಣೆ ಮಾಡಲಾಗಿದ್ದು, ಶೇ.73ರಷ್ಟು ಕೊರೋನಾ ವಾರಿಯರ್ಸ್ ಗೆ ಲಸಿಕೆ ನೀಡಲಾಗಿದೆ. ತುಮಕೂರಿನಲ್ಲಿ ಶೇ. 71ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಆ ಮೂಲಕ ತುಮಕೂರು 2ನೇ ಸ್ಥಾನದಲ್ಲಿದೆ. ಲಸಿಕೆ ನೀಡಿಕೆ ಯಶಸ್ವಿಯಾಗಿ ಸಾಗಿದೆಯಾದರೂ ಅನೇಕ ಆರೋಗ್ಯ ಸಿಬ್ಬಂದಿಗಳು ಲಸಿಕೆ ಪಡೆಯಲು ಮುಂದಾಗಿಲ್ಲ. ಹೀಗಾಗಿ ಗದಗ ಜಿಲ್ಲಾಡಳಿತವು ಲಸಿಕೆ ಪಡೆಯಲು ಪ್ರೇರೇಪಿಸಲು ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ.

ವ್ಯಾಕ್ಸಿನೇಷನ್ ಅಗತ್ಯವನ್ನು ವಿವರಿಸಲು ಮತ್ತು ಲಸಿಕೆ ಸುರಕ್ಷತೆಯ ಬಗ್ಗೆ ವದಂತಿಗಳು ಹರಡುತ್ತಿರುವುದರಿಂದ ಜಿಲ್ಲಾಧಿಕಾರಿ ಸುಂದರೇಶ್ ಬಾಬು ಅವರು ತಾಲ್ಲೂಕು ಆರೋಗ್ಯ ಮತ್ತು ಇತರ ಇಲಾಖೆ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಈ ವಾರ ಲಸಿಕೆ ತೆಗೆದುಕೊಳ್ಳುವಂತೆ ಎಲ್ಲಾ ಮುಂಚೂಣಿ ಆರೋಗ್ಯ ಸಿಬ್ಬಂದಿಗೆ ವಿವರಿಸಲು ಮತ್ತು ಮನವರಿಕೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಗದಗ ಜಿಲ್ಲಾಧಿಕಾರಿ ಬಸರಿಗಿಡದ್ ಅವರು, ಎಲ್ಲ ಮುಂಚೂಣಿ ಆರೋಗ್ಯ ಕಾರ್ಯಕರ್ತರೂ ಲಸಿಕೆ ಪಡೆಯುವಂತೆ ನಾವು ಸೂಚಿಸಿದ್ದೇವೆ. ಪ್ರಸ್ತುತ ಶನಿವಾರ ಶೇ.73ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ. ನಿಜಕ್ಕೂ ಉತ್ತಮ ಸಂಗತಿ. ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಮತ್ತಷ್ಟು ಏರಿಕೆ ಮಾಡುವತ್ತ ಗಮನ ಕೇಂದ್ರೀಕರಿಸಿದ್ದೇವೆ ಮತ್ತು ಲಸಿಕೆಯಿಂದ ಯಾವುದೇ ರೀತಿಯ ಅಡ್ಡ ಪರಿಣಾಮವಾಗುವುದಿಲ್ಲ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಇನ್ನು ಅತ್ತ ಲಸಿಕೆ ವಿತರಣಾ ಕಾರ್ಯಕ್ರಮ ಮುಂದುವರೆದಿದ್ದು, ಇತ್ತ ಲಸಿಕೆ ವಿಚಾರವಾಗಿ ಮಾತನಾಡಿರುವ ರಾನ್ ಮೂಲದ ಆರೋಗ್ಯ ಕಾರ್ಯಕರ್ತರೊಬ್ಬರು, ಲಸಿಕೆಯಿಂದ ಜ್ವರ ಮತ್ತು ಇತರೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುವ ಭೀತಿ ನಮ್ಮಲ್ಲಿದೆ. ನಮ್ಮ ಕುಟುಂಬ ಸದಸ್ಯರಿಗೂ ಈ ಭಯವಿದ್ದು ನೀವು ಆರೋಗ್ಯವಾಗಿದ್ದೀರಿ.. ಹೀಗಾಗಿ ಲಸಿಕೆಯ ಅವಶ್ಯಕತೆ ಇಲ್ಲ. ನಿಮ್ಮಲ್ಲಿ ರೋಗ ಲಕ್ಷಣಗಳು ಕಂಡುಬಂದರೆ ಮಾತ್ರ ಲಸಿಕೆ ಪಡೆಯಿರಿ ಎಂದು ಹೇಳುತ್ತಿದ್ದಾರೆ.  ಆದ್ದರಿಂದ, ಹಲವರು ಲಸಿಕೆ ವಿತರಣಾ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಇದು ಲಸಿಕೆ ವಿತರಣೆಗೆ ಹಿನ್ನಡೆಯಾಗಿದೆ ಎನ್ನಲಾಗಿದೆ.  
 


Stay up to date on all the latest ರಾಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp