ಧೂಮಪಾನ ಆರೋಗ್ಯಕ್ಕೆ ಹಾನಿಕರ: ಕಠಿಣ ಕಾನೂನು ಜಾರಿಗೆ 88% ಭಾರತೀಯರ ಬೆಂಬಲ
ಕರ್ನಾಟಕ ಸೇರಿದಂತೆ 10 ರಾಜ್ಯಗಳ ವಯಸ್ಕ ನಾಗರಿಕರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, 80% ಕ್ಕೂ ಹೆಚ್ಚು ಭಾರತೀಯರು ಸಿಗರೇಟ್, ಬೀಡಿ ಮತ್ತು ಧೂಮಪಾನವಲ್ಲದ ತಂಬಾಕು ಬಳಕೆಯನ್ನು ಬಹಳ ಗಂಭೀರ ಸಮಸ್ಯೆ ಎಂದು ನಂಬಿದ್ದಾರೆ.
Published: 15th February 2021 08:54 AM | Last Updated: 15th February 2021 01:00 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕರ್ನಾಟಕ ಸೇರಿದಂತೆ 10 ರಾಜ್ಯಗಳ ವಯಸ್ಕ ನಾಗರಿಕರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, 80% ಕ್ಕೂ ಹೆಚ್ಚು ಭಾರತೀಯರು ಸಿಗರೇಟ್, ಬೀಡಿ ಮತ್ತು ಧೂಮಪಾನವಲ್ಲದ ತಂಬಾಕು ಬಳಕೆಯನ್ನು ಬಹಳ ಗಂಭೀರ ಸಮಸ್ಯೆ ಎಂದು ನಂಬಿದ್ದಾರೆ ಮತ್ತು ಇದಕ್ಕೆ ಪರಿಹಾರವಾಗಿ ಪ್ರಸ್ತುತ ತಂಬಾಕು ನಿಯಂತ್ರಣ ಕಾನೂನುಗಳನ್ನು ಬಲಪಡಿಸಲು ಶೇ.88 ಮಂದಿ ಒಪ್ಪಿಗೆ ಸೂಚಿಸುತ್ತಾರೆ.
ನವದೆಹಲಿ ಮೂಲದ ಸ್ವಯಂಸೇವಾ ಸಂಸ್ಥೆ ಕಸ್ಟಮರ್ ವಾಯ್ಸ್)18 ವರ್ಷಕ್ಕಿಂತ ಮೇಲ್ಪಟ್ಟ 1,476 ಜನರನ್ನು ಸಮೀಕ್ಷೆಗೆ ಒಳಪಡಿಸಿದೆ.ಇವರಲ್ಲಿ ಬಹಳಷ್ಟು ಮಂದಿ “ತಂಬಾಕಿನ ಬಳಕೆಯನ್ನು ಗಂಭೀರ ಸಮಸ್ಯೆಯೆಂದು ಪರಿಗಣಿಸಿದ್ದಾರೆ. ಕನಿಷ್ಠ 82% ರಷ್ಟು ಜನರು ಧೂಮಪಾನ ರಹಿತ ತಂಬಾಕಿನ ಬಳಕೆಯನ್ನು ತೀವ್ರವಾಗಿ ಗಂಭೀರ ಸಮಸ್ಯೆಯೆಂದು ನಂಬುತ್ತಾರೆ, ಆದರೆ 80% ಜನರು ಸಿಗರೇಟು ಸೇದುವ ಬಗ್ಗೆ ಅದೇ ರೀತಿ ಹೇಳುತ್ತಾರೆ ಮತ್ತು 77% ಜನರು ಬೀಡಿ ಸೇದುವಿಕೆ ಬಗ್ಗೆ ಹೇಳಿದರೆ 72% ಮಂದಿ 10 ಭಾರತೀಯರಲ್ಲಿ ಏಳು ಮಂದಿ ಪರೋಕ್ಷವಾಗಿ ಧೂಮಪಾನಕ್ಕೆ ಒಡ್ಡಿಕೊಳ್ಲುತ್ತಾರೆ ಎಂದಿದ್ದಾರೆ. ಪ್ರಸ್ತುತ ತಂಬಾಕು ನಿಯಂತ್ರಣ ಕಾನೂನನ್ನು ಬಲಪಡಿಸಲು ಅಗಾಧ ಪ್ರಮಾಣದ ಬೆಂಬಲ ವ್ಯಕ್ತವಾಗುತ್ತಿದೆ.
ಹತ್ತು ಭಾರತೀಯರಲ್ಲಿ ಸುಮಾರು ಒಂಬತ್ತು ಮಂದಿ ಇದರ ಪರವಾಗಿದ್ದಾರೆ, 88% ಜನರು ಇದನ್ನು ಬಲವಾಗಿ ಬೆಂಬಲಿಸುತ್ತಿದ್ದಾರೆ. ವಯಸ್ಸು ಮತ್ತು ಲಿಂಗದಂತಹ ಎಲ್ಲಾ ಜನಸಂಖ್ಯಾ ಮತ್ತು ಭೌಗೋಳಿಕ ವಿಭಾಗಗಳಲ್ಲಿ ಬೆಂಬಲ ಹೆಚ್ಚಿದೆ.. ತಂಬಾಕು ಬಳಕೆದಾರರು ಸಹ ಈ ವಿಚಾರವನ್ನು ಬೆಂಬಲಿಸುತ್ತಾರೆ ”ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ, ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸುವುದು, ವಿಮಾನ ನಿಲ್ದಾಣಗಳು, ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳಲ್ಲಿ ವಿಶೇಷ ಧೂಮಪಾನ ಪ್ರದೇಶಗಳ ಮುಚ್ಚುವುದು. ಸರಾಗವಾಗಿರುವ ಸಿಗರೇಟ್ ಮತ್ತು ಬೀಡಿಗಳ ಮಾರಾಟವನ್ನು ನಿಷೇಧಿಸುವುದು ಮತ್ತು ತಂಬಾಕು ಉತ್ಪನ್ನಗಳ ಮಾರಾಟದ ಸ್ಥಳಗಳಲ್ಲಿ ಜಾಹೀರಾತು ನೀಡುವುದು ಇದಕ್ಕೆ ಪರಿಹಾರವಾಗಿದೆ.
“ತಂಬಾಕು ನಿಯಂತ್ರಣ ಕಾನೂನನ್ನು ಬಲಪಡಿಸುವುದಕ್ಕಾಗಿ ಬೆಂಬಲ ವ್ಯಕ್ತವಾಗುವುದು ಒಳ್ಳೆಯ ಬೆಳವಣಿಗೆ . ತಂಬಾಕು ನಿಯಂತ್ರಣ ಕಾನೂನು COTPA 2003 ರ ತಿದ್ದುಪಡಿ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿದೆ - ಇದು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ ಪ್ರಮುಖ ಹೆಜ್ಜೆಯಾಗಿದೆ ”ಎಂದು ಕಸ್ಟಮರ್ ವಾಯ್ಸ್ ಸಿಒಒ ಆಶಿಮ್ ಸನ್ಯಾಲ್ ಹೇಳಿದರು.