ಗ್ರೆಟಾ ಥನ್ಬರ್ಗ್ ಗೆ ಟೂಲ್ ಕಿಟ್ ಕಳುಹಿಸಿದ್ದ ದಿಶಾ ರವಿಗೆ ಐಎಸ್ಐ ಕೆ2 ಜೊತೆ ಸಂಪರ್ಕವಿದೆಯೇ?: ದೆಹಲಿ ಪೊಲೀಸರಿಗೆ ಅನುಮಾನ 

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಕಾಶ್ಮೀರ ಖಲಿಸ್ತಾನ್ (ಕೆ 2)ನ ಪ್ರಮುಖ ಪ್ರತಿಪಾದಕ ಬಜನ್ ಸಿಂಗ್ ಬಿಂದರ್ ಅಲಿಯಾಸ್ ಇಕ್ಬಾಲ್ ಚೌಧರಿಗೆ ನಿಕಟವರ್ತಿ ಪೀಟರ್ ಫ್ರೈಡ್ ರಿಚ್ ಪರಿಚಯ ಟೂಲ್ ಕಿಟ್ ವಿವಾದದಲ್ಲಿ ಬಂಧನಕ್ಕೀಡಾಗಿರುವ ಪರಿಸರ ಕಾರ್ಯಕರ್ತೆ ದಿಶಾ ರವಿಗೆ ಇದೆಯೇ?

Published: 16th February 2021 08:33 AM  |   Last Updated: 16th February 2021 08:33 AM   |  A+A-


Disha Ravi

ದಿಶಾ ರವಿ

Posted By : Sumana Upadhyaya
Source : The New Indian Express

ಬೆಂಗಳೂರು: ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಕಾಶ್ಮೀರ ಖಲಿಸ್ತಾನ್ (ಕೆ 2)ನ ಪ್ರಮುಖ ಪ್ರತಿಪಾದಕ ಬಜನ್ ಸಿಂಗ್ ಬಿಂದರ್ ಅಲಿಯಾಸ್ ಇಕ್ಬಾಲ್ ಚೌಧರಿಗೆ ನಿಕಟವರ್ತಿ ಪೀಟರ್ ಫ್ರೈಡ್ ರಿಚ್ ಪರಿಚಯ ಟೂಲ್ ಕಿಟ್ ವಿವಾದದಲ್ಲಿ ಬಂಧನಕ್ಕೀಡಾಗಿರುವ ಪರಿಸರ ಕಾರ್ಯಕರ್ತೆ ದಿಶಾ ರವಿಗೆ ಇದೆಯೇ?

ಹೀಗೊಂದು ಮಾಹಿತಿ, ಅನುಮಾನ ದೆಹಲಿ ಪೊಲೀಸರಿಗೆ ಮೂಡಿದೆ. ದಿಶಾಳ ಬಂಧನವಾದ ನಂತರ ನಿನ್ನೆ ಸಿಕ್ಕಿರುವ ಮಹತ್ವದ ಸುಳಿವಿನಲ್ಲಿ ದಿಶಾ ಮತ್ತು ಆಕೆಯ ವಕೀಲೆ ಸ್ನೇಹಿತೆ ಕಾರ್ಯಕರ್ತೆ ನಿಕಿತಾ ಜಾಕೊಬ್ ಮೊದಲ ಟೂಲ್ ಕಿಟ್ ನ ಸಂಪಾದಕರು ಎಂದು ಹೇಳಲಾಗುತ್ತಿದೆ. ಈ ಟೂಲ್ ಕಿಟ್ ನ್ನು ಆಕಸ್ಮಿಕವಾಗಿ ಗ್ರೆಟಾ ಥನ್ಬರ್ಗ್ ಫೆಬ್ರವರಿ 3ರಂದು ಟ್ವೀಟ್ ಮಾಡಿ ವಿವಾದ ಸೃಷ್ಟಿಯಾಗಿತ್ತು. ಮೊದಲ ಟೂಲ್ ಕಿಟ್ ನ್ನು ಡಿಲೀಟ್ ಮಾಡಿದ ಗ್ರೆಟಾ ನಂತರ ಮತ್ತೊಂದು ಟೂಲ್ ಕಿಟ್ ನ್ನು ಟ್ವೀಟ್ ಮಾಡಿ ಹಿಂದಿನದ್ದು ಹಳೆಯದು ಎಂದು ಬರೆದುಕೊಂಡಿದ್ದರು.

ಇಮೇಲ್ ಅಕಾಂಟೌ ನ್ನು ಅಕ್ರಮವಾಗಿ ಮತ್ತೊಬ್ಬ ವಕೀಲ ಶಂತನು ಸೃಷ್ಟಿ ಮಾಡಿದ್ದು, ಈ ದಾಖಲೆಯ ಮಾಲೀಕ ಎಂದು ದೆಹಲಿ ಪೊಲೀಸರು ಹೇಳುತ್ತಾರೆ. ದೆಹಲಿ ಪೊಲೀಸರು ದಿಶಾರನ್ನು ಬೆಂಗಳೂರಿನಲ್ಲಿ ಮೊನ್ನೆ 13ರಂದು ಬಂಧಿಸಿದ್ದು ಇದೀಗ ನಿಕಿತಾ ಮತ್ತು ಶಂತನು ವಿರುದ್ಧ ಕೂಡ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ.

ಖಲಿಸ್ತಾನಿ ಪರ ಗುಂಪು ಪೊಯೆಟಿಕ್ ಜಸ್ಟೀಸ್ ಫೌಂಡೇಶನ್‌ನ ಸೂಚನೆ ಮೇರೆಗೆ ಈ ಮೂವರು ಒಟ್ಟಾಗಿ ಹೇಳಲಾದ ಟೂಲ್ ಕಿಟ್ ತಯಾರಿಸಿದ್ದರು. ಪೀಟರ್ ಫ್ರೈಡ್ ರಿಚ್ ಜೊತೆಗೆ ಎನ್ ಜಿಒಗಳನ್ನು ಫಾಲೋ ಮಾಡಲು ಸೂಚಿಸಲಾಗಿತ್ತು. ಈ ಮೂಲಕ ನಕಲಿ ಸುದ್ದಿ ಹಬ್ಬಿಸಿ ಸಾಮರಸ್ಯ ಕದಡುವುದು ಇವರ ಉದ್ದೇಶವಾಗಿತ್ತು ಎಂದು ದೆಹಲಿ ಪೊಲೀಸ್ ಸೈಬರ್ ಸೆಲ್ ವಿಭಾಗದ ಜಂಟಿ ಆಯುಕ್ತ ಪ್ರೇಮ್ ನಾಥ್ ತಿಳಿಸಿದ್ದಾರೆ. ಇದರ ಲಿಂಕ್ ಗಳಲ್ಲಿ ಮತ್ತು ದಾಖಲೆಗಳಲ್ಲಿ ಖಲಿಸ್ತಾನ ಪರ ವಿಷಯಗಳಿವೆ ಎಂದು ಹೇಳಿದರು.

ಪೀಟರ್ ಫ್ರೆಡ್ರಿಕ್ 2006 ರಿಂದ ಭಾರತೀಯ ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳ ಕಣ್ಗಾವಲಿನಲ್ಲಿದ್ದಾನೆ. ಐಎಸ್‌ಐನ ಕೆ 2 ಜೊತೆ ಸಹ ಸಂಪರ್ಕವಿದೆ. ಟೂಲ್‌ಕಿಟ್‌ನಲ್ಲಿ ‘ಯಾರನ್ನು ಅನುಸರಿಸಬೇಕು’ ವಿಭಾಗದಲ್ಲಿ ಅವರ ಹೆಸರನ್ನು ಏಕೆ ಉಲ್ಲೇಖಿಸಲಾಗಿದೆ? ಪೊಯೆಟಿಕ್ ಜಸ್ಟೀಸ್ ಫೌಂಡೇಶನ್‌ನ ಎಂ.ಒ.ಧಲಿವಾಲ್ ಕೆನಡಾದ ಖಲಿಸ್ತಾನ್ ಪರ ಮಹಿಳೆ ಪುನೀತ್ ಮೂಲಕ ದಿಶಾ, ನಿಕಿತಾ ಮತ್ತು ಶಾಂತನು ಅವರಿಗೆ ಫ್ರೆಡ್ರಿಕ್ ಅವರನ್ನು ಪರಿಚಯಿಸಿದ್ದಾರೆಯೇ ಅಥವಾ ಅವರು ನೇರವಾಗಿ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಇವೆಲ್ಲವನ್ನೂ ತನಿಖೆ ಮಾಡಲಾಗುತ್ತಿದೆ ಎಂದು ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಘಟಕ ಉಪ ಆಯುಕ್ತ ಮಿನಿಶಿ ಚಂದ್ರ ತಿಳಿಸಿದ್ದಾರೆ. 

Stay up to date on all the latest ರಾಜ್ಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp