ಕರ್ನಾಟಕದಲ್ಲಿ 2ನೇ ಸುತ್ತಿನ ಕೋವಿಡ್ ಲಸಿಕೆ ವಿತರಣೆ ಆರಂಭ

ಮಾರಕ ಕೊರೋನಾ ವೈರಸ್ ಸೋಂಕು ನಿಯಂತ್ರಣಕ್ಕೆ ಆರಂಭಿಸಲಾಗಿರುವ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮದ 2ನೇ ಸುತ್ತು ಸೋಮವಾರ ಆರಂಭವಾಗಿದೆ.

Published: 16th February 2021 10:08 AM  |   Last Updated: 16th February 2021 10:08 AM   |  A+A-


Covid-19 Vaccination drive

ಕೊರೋನಾ ಲಸಿಕೆ ವಿತರಣೆ

Posted By : Srinivasamurthy VN
Source : The New Indian Express

ಬೆಂಗಳೂರು: ಮಾರಕ ಕೊರೋನಾ ವೈರಸ್ ಸೋಂಕು ನಿಯಂತ್ರಣಕ್ಕೆ ಆರಂಭಿಸಲಾಗಿರುವ ಕೋವಿಡ್ ಲಸಿಕೆ ವಿತರಣಾ ಕಾರ್ಯಕ್ರಮದ 2ನೇ ಸುತ್ತು ಸೋಮವಾರ ಆರಂಭವಾಗಿದೆ.

ಕೋವಿಡ್ ಲಸಿಕೆ ಮೊದಲ ಡೋಸ್ ನೀಡಿದ 8 ರಿಂದ 12 ವಾರಗಳ ನಡುವೆ 2ನೇ ಡೋಸ್ ನೀಡಬೇಕು. ಆಗ ಮಾತ್ರ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬ ಆರೋಗ್ಯ ತಜ್ಞರ ಸಲಹೆಗಳ ನಡುವೆಯೇ ರಾಜ್ಯ ಸರ್ಕಾರ ಕೇಂದ್ರಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ 2ನೇ ಸುತ್ತಿನ ಕೋವಿಡ್ ಲಸಿಕೆ ವಿತರಣೆ ಆರಂಭಿಸಿದೆ.

ಮೊದಲ ಡೋಸ್ ನೀಡಿದ 28 ದಿನಗಳ ಬಳಿಕ ಸರ್ಕಾರದ ಇದೀಗ 2ನೇ ಡೋಸ್ ನ ಲಸಿಕೆಗಳನ್ನು ನೀಡುತ್ತಿದ್ದು, ಸೋಮವಾರ ರಾಜ್ಯದ ಸುಮಾರು 11,985 ಆರೋಗ್ಯ ಕಾರ್ಯಕರ್ತರು ತಮ್ಮ 2ನೇ ಡೋಸ್ ನ ಲಸಿಕೆ ಪಡೆದಿದ್ದಾರೆ.  2ನೇ ಡೋಸ್ ಲಸಿಕೆ ಪಡೆದ ಜಿಲ್ಲೆಗಳ ಪಟ್ಟಿಯಲ್ಲಿ ವಿಜಯಪುರ ಅಗ್ರ ಸ್ಥಾನದಲ್ಲಿದ್ದು, ಇಲ್ಲಿ 2,277 ಮಂದಿ ಆರೋಗ್ಯ ಕಾರ್ಯಕರ್ತರು ತಮ್ಮ 2ನೇ ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ.

ನಂತರದ ಸ್ಥಾನದಲ್ಲಿ  ಕೊಡಗು (1,145), ಬೆಂಗಳೂರು ನಗರ (1,162) ಮತ್ತು ಮಂಡ್ಯ (1,179) ಜಿಲ್ಲೆಗಳಿವೆ. 

ಇನ್ನು 2ನೇ ಡೋಸ್ ನೀಡಿಕೆಯಲ್ಲಿ ಅತ್ಯಂತ ಕಡಿಮೆ ಆರೋಗ್ಯ ಕಾರ್ಯಕರ್ತರು ಪಾಲ್ಗೊಂಡಿದ್ದ ಜಿಲ್ಲೆಗಳ ಪಟ್ಟಿಯಲ್ಲಿ ಶಿವಮೊಗ್ಗ ಇದ್ದು ಇಲ್ಲಿ ಕೇವಲ 77 ಮಂದಿಗೆ ಮಾತ್ರ 2ನೇ ಡೋಸ್ ಲಸಿಕೆ ನೀಡಲಾಗಿದೆ. ಬೀದರ್ ನಲ್ಲಿ 26 ಮಂದಿಗೆ ಮಾತ್ರ 2ನೇ ಡೋಸ್ ಲಸಿಕೆ ನೀಡಲಾಗಿದೆ.  ಕೊಪ್ಪಳದಲ್ಲಿ 70 ಮಂದಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ.

ಉಳಿದಂತೆ ಬೆಳಗಾವಿಯಲ್ಲಿ ಇನ್ನೂ 2ನೇ ಹಂತದ ಲಸಿಕೆ ನೀಡಿಕೆ ಆರಂಭವಾಗಿಲ್ಲ. 

ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಂತೆ ಸೋಮವಾರ ಮೊದಲ ಮತ್ತು 2ನೇ ಡೋಸ್ ಲಸಿಕೆಗಳನ್ನು ಒಟ್ಟು 8,21,939 ಮಂದಿಗೆ ನೀಡುವ ಗುರಿ ಹೊಂದಲಾಗಿತ್ತು. ಆದರೆ ಶೇ.51ರಷ್ಟು ಮಂದಿಗೆ ಅಂದರೆ 4,22,938 ಮಂದಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂದು ಹೇಳಲಾಗಿದೆ.

Stay up to date on all the latest ರಾಜ್ಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp