ದಿಶಾ ಕ್ರಿಯೇಟ್ ಮಾಡಿದ್ದ ವಾಟ್ಸಾಪ್ ಗ್ರೂಪ್ ನಲ್ಲಿ ಖಲಿಸ್ತಾನಿ ಬೆಂಬಲಿತ ಪಿಜೆಎಫ್!

ದೇಶದಾದ್ಯಂತ ಭಾರೀ ಚರ್ಚೆ ಹುಟ್ಟು ಹಾಕಿರುವ ಟೂಲ್ ಕಿಟ್ ವಿವಾದದ ಅಸಲಿಯತ್ತಿನ ಬಗ್ಗೆ ದೆಹಲಿ ಪೊಲೀಸರು ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ. 

Published: 17th February 2021 09:14 AM  |   Last Updated: 17th February 2021 12:45 PM   |  A+A-


file photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ದೇಶದಾದ್ಯಂತ ಭಾರೀ ಚರ್ಚೆ ಹುಟ್ಟು ಹಾಕಿರುವ ಟೂಲ್ ಕಿಟ್ ವಿವಾದದ ಅಸಲಿಯತ್ತಿನ ಬಗ್ಗೆ ದೆಹಲಿ ಪೊಲೀಸರು ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ. 

ಟೂಲ್ ಕಿಟ್ ತಯಾರಿಸಿದವರಿಂದ ಹಿಡಿದು, ಗ್ರೆಟಾ ಥನ್ಬರ್ಗ್ ಟ್ವೀಟ್ ಮಾಡುವ ವರೆಗಿನ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. 

2020ರ ಡಿಸೆಂಬರ್ 6 ರಂದು ದಿಶಾ ಅವರು ಆತ್ಮೀಯರಿಗಾಗಿ ವಾಟ್ಸ್ ಆ್ಯಪ್ ಗ್ರೂಪ್ ಕ್ರಿಯೇಟ್ ಮಾಡಿದ್ದಾರೆ. ಈ ಗ್ರೂಪ್ ಗೆ ಡಿಸೆಂಬರ್ 11ರಂದು ನ್ಯಾಯವಾದಿ ಹಾಗೂ ಹೋರಾಟಗಾರ್ತಿ ನಿಖಿತಾ ಜಾಕೋಬ್ ಅವರು ಸೇರ್ಪಡೆಗೊಂಡಿದ್ದಾರೆ. ಇದಾದ ಮರುದಿನವೇ ಕೆನಡಾ ಮೂಲದ ಖಲಿಸ್ತಾನಿ ಸಂಘಟನೆಯಾದ ಪೆಯೊಟಿಕ್‌ ಜಸ್ಟೀಸ್‌ ಫೌಂಡೇಶನ್‌ (ಪಿಜೆಎಫ್‌) ಸಂಸ್ಥಾಪಕ ಧಲಿವಾಳ್ ಕೂಡ ಸೇರ್ಪಡೆಗೊಂಡಿದ್ದಾನೆಂದು ಹೇಳಿದ್ದಾರೆ. 

ವಾಟ್ಸಾ ಆ್ಯಪ್ ಗ್ರೂಪ್'ಗೆ ಪಿಜೆಎಫ್ ಸೇರ್ಪಡೆಗೊಳಿಸಿದವರು ಯಾರು ಎಂಬುದರ ಕುರಿತು ಈಗಾಗಲೇ ತನಿಖೆ ಆರಂಭಿಸಲಾಗಿತ್ತು. ಫೆಬ್ರವರಿ 12 ರಂದು ಈ ವಿಚಾರ ಸಂಬಂಧ ನಿಖಿತಾ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು. ಬಳಿಕ ಮರು ತನಿಖೆ ನಡೆಸುವುದಾಗಿ ಹೇಳಿ ನಿಖಿತಾ ಅವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಇದರಂತೆ ಮರು ದಿನ ಮನೆಗೆ ತೆರಳಿದಾಗ ನಿಖಿತಾ ಮನೆಯಲ್ಲಿ ಇರಲಿಲ್ಲ. ಫೆಬ್ರವರಿ 13 ರಂದು ಬೆಂಗಳೂರು ಪೊಲೀಸರ ಸಹಾಯದೊಂದಿಗೆ ದಿಶಾ ತಾಯಿಯ ಸಮ್ಮುಖದಲ್ಲಿಯೇ ದಿಶಾ ಅವರನ್ನು ಬಂಧಿಸಲಾಗಿತ್ತು. 

ಪ್ರಕರಣ ದಾಖಲಾಗುತ್ತಿದ್ದಂತೆಯೇ ದಿಶಾ ಅವರು, ವಾಟ್ಸಾಪ್ ಗ್ರೂಪ್ ಡಿಲಿಟ್ ಮಾಡಿದ್ದರು. ಗ್ರೂಪ್ ಕ್ರಿಯೇಟ್ ಆದ ಬಳಿಕ ಗ್ರೆಟಾ ಥನ್ಬರ್ಗ್ ಅವರು ಟೂಲ್ ಕಿಟ್ ಪೋಸ್ಟ್ ಮಾಡಿದ್ದರು. ಆದಾದ ಬಳಿಕ ಡಿಲೀಟ್ ಮಾಡಿದ್ದರು. ದಿಶಾ ಅವರ ಮನವಿ ಮೇರೆಗೆ ಪೋಸ್ಟ್ ಡಿಲೀಟ್ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. 

ದಿಶಾ ಅವರ ಫೋನ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇದನ್ನು ಡಿಜಿಟಲ್ ಸಾಕ್ಷ್ಯಾಧಾರವಾಗಿರಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಗ್ರೆಟಾ ಥನ್ಬರ್ಗ್ ಅವರಿಗೆ ದಿಶಾ ಸಂದೇಶ ಡಿಲೀಟ್ ಮಾಡುವಂತೆ ಕೇಳಿರುವುದೂ ಕೂಡ ಫೋನ್ ನಲ್ಲಿ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.

ದೇಶ ವಿರೋಧಿ ಸೈಟ್ ಗಳೊಂದಿಗೆ ಟೂಲ್ ಕಿಟ್ ಗಳ ನಂಟು...!
ಬಹುತೇಕ ಟೂಲ್ ಕಿಟ್ ಗಳು ಪ್ರತಿಭಟನೆಗಳಿಗೆ ಸಂಬಂಧಿಸಿದ್ದರೂ ಇದರಲ್ಲಿ ಗೂಗಲ್ ಡ್ರೈವ್, ಗೂಗಲ್ ಡಾಕ್ಯುಮೆಂಟ್ಸ್, ವೆಬ್ ಸೈಟ್ ಗಳ ಲಿಂಕ್ ಗಳೇ ಹೆಚ್ಚಾಗಿದ್ದವು ಎಂದು ಹೇಳಲಾಗುತ್ತಿದೆ. ಖಲಿಸ್ತಾನಿ ಪರ ವಾಗಿರುವ askindiawhy.com ವೆಬೈ ಸೈಟ್ ಲಿಂಕ್ ಕೂಡ ಇದರಲ್ಲಿ ಇತ್ತು ಎಂದು ತಿಳಿದುಬಂದಿದೆ. 


Stay up to date on all the latest ರಾಜ್ಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp