ಖ್ಯಾತ ಪತ್ರಕರ್ತ, ಲೇಖಕ ನಿರಂಜನ್ ನಿಕ್ಕಂ ವಿಧಿವಶ

ಹಿರಿಯ ಪತ್ರಕರ್ತ, ಲೇಖಕ ನಿರಂಜನ್ ನಿಕ್ಕಂ (66) ನಿಧನರಾಗಿದ್ದಾರೆ. ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಅವರು ನಿಧನರಾದರು.

Published: 17th February 2021 10:39 AM  |   Last Updated: 17th February 2021 12:47 PM   |  A+A-


ನಿರಂಜನ್ ನಿಕ್ಕಂ,

Posted By : Raghavendra Adiga
Source : Online Desk

ಮೈಸೂರು: ಹಿರಿಯ ಪತ್ರಕರ್ತ, ಲೇಖಕ ನಿರಂಜನ್ ನಿಕ್ಕಂ(66) ನಿಧನರಾಗಿದ್ದಾರೆ. ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಅವರು ನಿಧನರಾದರು.

"ಡೆಕ್ಕ್ಕನ್ ಹೆರಾಲ್ಡ್" ಪತ್ರಿಕೆಯ ಮೈಸೂರು ಬ್ಯೂರೋ ಮುಖ್ಯಸ್ಥರಾಗಿ ನಿವೃತ್ತರಾಗಿದ್ದ ನಿರಂಜನ್ ಅವರ ಮೃತದೇಹವನ್ನು ವಿಜಯನಗರದ ಸ್ವಗೃಹದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದು ಸಂಜೆ ನಾಲ್ಕಕ್ಕೆ ಚಾಮುಂಡಿಬೆಟ್ಟದ ತಪ್ಪಲ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಪತ್ರಕರ್ತ ನಿರಂಜನ್ ನಿಕ್ಕಂ, ಯುಒಎಂನಲ್ಲಿ ನಡೆದ ಶತಮಾನೋತ್ಸವದ ಸಂದರ್ಭದಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. 

ಡಿಸಿಎಂ ಅಶ್ವತ್ಥ ನಾರಾಯಣ ಸಂತಾಪ

ಹಿರಿಯ ಪತ್ರಕರ್ತ ನಿರಂಜನ್ ನಿಕ್ಕಂ ನಿಧನಕ್ಕೆ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸಂತಾಪ ಸೂಚಿಸಿದ್ದಾರೆ.

"ಹಿರಿಯ ಪತ್ರಕರ್ತ ನಿರಂಜನ್ ನಿಕ್ಕಂ ಅವರ ಅಗಲಿಕೆಯ ಸುದ್ದಿ ನೋವು ಹಾಗೂ ಆಘಾತ ತಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಬರಹಗಳ ಮೂಲಕ ಯುವ ಜನತೆಯನ್ನು ಪ್ರೇರೇಪಿಸುತ್ತಿದ್ದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಅಶ್ವತ್ಥ ನಾರಾಯಣ ಟ್ವಿಟ್ ಮಾಡಿ ತಿಳಿಸಿದ್ದಾರೆ.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp