ಬೆಂಗಳೂರಿನಲ್ಲಿ ಉದ್ಯಮಿ ಹತ್ಯೆ: ಮಗ, ಸಹೋದರನ ಬಂಧನ

ನಗರದ ಉದ್ಯಮಿಯೊಬ್ಬರ ಹತ್ಯೆಗಾಇ ಒಂದು ವರ್ಷದ ನಂತರ ತಲಘಟ್ಟಪುರ ಪೊಲೀಸರು 100 ಕೋಟಿ ರೂ.ಗಳ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸುಪಾರಿ ನೀಡಿದ್ದ ಆರೋಪದಡಿ ಅವರ ಮಗ ಮತ್ತು ಸಹೋದರನನ್ನು ಬಂಧಿಸಿದ್ದಾರೆ.

Published: 17th February 2021 12:55 PM  |   Last Updated: 17th February 2021 12:55 PM   |  A+A-


ಸಂಗ್ರಹ ವ್ಚಿತ್ರ

Posted By : Raghavendra Adiga
Source : The New Indian Express

ಬೆಂಗಳೂರು: ನಗರದ ಉದ್ಯಮಿಯೊಬ್ಬರ ಹತ್ಯೆಗಾಇ ಒಂದು ವರ್ಷದ ನಂತರ ತಲಘಟ್ಟಪುರ ಪೊಲೀಸರು 100 ಕೋಟಿ ರೂ.ಗಳ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸುಪಾರಿ ನೀಡಿದ್ದ ಆರೋಪದಡಿ ಅವರ ಮಗ ಮತ್ತು ಸಹೋದರನನ್ನು ಬಂಧಿಸಿದ್ದಾರೆ.  

2020 ರ ಫೆಬ್ರವರಿ 14 ರಂದು ಬಳ್ಳಾರಿ ಸ್ಟೀಲ್ ಅಂಡ್ ಅಲಾಯ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ, ಸಿಂಗನಮಾಲೆ ಮಾಧವ್ (70) ಗುಬ್ಬಲಾಲಾ ಮುಖ್ಯ ರಸ್ತೆಯ ರಾಯಲ್ ಪಾಮ್ಸ್ ಲೇಔಟ್ ಬಳಿ ಹಾಡ ಹಗಲೇ ಕೊಲೆಯಾಗಿದ್ದರು.ದಾಳಿಕೋರರು ಅವರ ಕುತ್ತಿಗೆ ಸೀಳಿ ಕೊಲೆ ಮಾಡಿದ್ದರು.

ಪ್ರಕರಣ ಸಂಬಂಧ ಜೂನ್‌ನಲ್ಲಿ ಪೊಲೀಸರು ಒಂಬತ್ತು ಸುಪಾರಿ ಕೊಲೆಗಾರರನ್ನು ಬಂಧಿಸಿದ್ದರು. ಆದರೆ, ಮಾಧವ್ ಅವರ ಮಗ ಹರಿ ಕೃಷ್ಣ (42) ಮತ್ತು ಸಹೋದರ ಶಿವರಾಮ್ ಪ್ರಸಾದ್ (50) ಮಾತ್ರ ನಾಪತ್ತೆಯಾಗಿದ್ದರು.

ಬಳ್ಳಾರಿ ಸ್ಟೀಲ್ ಅಂಡ್ ಅಲಾಯ್ಸ್ ಲಿಮಿಟೆಡ್ ಬಳ್ಳಾರಿಯಲ್ಲಿ 2,000 ಎಕರೆ ಭೂಮಿಯನ್ನು ಹೊಂದಿದೆ ಮತ್ತು ಸಹೋದರರು ಅದೇ ಜಾಗಕ್ಕಾಗಿ ಹೋರಾಟಕ್ಕಿಳಿದಿದ್ದಾರ್ ಎಂದು ಪೋಲಿಸ್ ಹೇಳಿದ್ದಾರೆ. ಕಂಪನಿಯು ಭಾರಿ ನಷ್ಟಕ್ಕೆ ಒಳಗಾಗುತ್ತಿದ್ದಂತೆ, ಮಾಧವ್ ಕ್ರಿಮಿನಲ್ ಆರೋಪಗಳನ್ನು ಎದುರಿಸಬೇಕಾಯಿತು ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು. ಇದು ಮಾಧವ್ ಮತ್ತು ಇಬ್ಬರು ಕುಟುಂಬ ಸದಸ್ಯರ ನಡುವೆ ವಿವಾದಕ್ಕೆ ಕಾರಣವಾಯಿತು, ಅವರು ಸುಪಾರಿ ಕೊಲೆಗಾರರಿಗೆ 25 ಲಕ್ಷ ರೂ. ಸುಪಾರಿ ನೀಡಿದ್ದರು.

“ನಮ್ಮ ಟೀಂ ಇಬ್ಬರನ್ನು ಪತ್ತೆಹಚ್ಚುವ ಕೆಲಸದಲ್ಲಿದ್ದವು, ಅವರು ಜಾಗಗಳನ್ನು ಬದಲಾಯಿಸುತ್ತಲೇ ಇದ್ದರು ಮತ್ತು ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಮಾತ್ರ ಸಂಪರ್ಕದಲ್ಲಿದ್ದರು ತಾಂತ್ರಿಕ ತಜ್ಞರ ಸಹಾಯದಿಂದ ನಾವು ಅವರನ್ನು ಪತ್ತೆ ಹಚ್ಚಿ ಫೆಬ್ರವರಿ 11 ರಂದು ಬಂಧಿಸಿದ್ದೇವೆ. ಅವರನ್ನು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ”ಎಂದು ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಾಧವ್ ಆಸ್ತಿಯನ್ನು ಹಸ್ತಾಂತರಿಸದ ಕಾರಣ ಆರೋಪಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಹೆಸರಲ್ಲಿ ಕೋಟ್ಯಾಂತರ ರೂ. ಆಸ್ತಿ ದ್ದು ಇದೇ ಅವರ ಕೊಲೆಗೆ ಕಾರಣವಾಗಿದೆ.

ಲಗ್ಗೆರೆಯಲ್ಲಿ ಎಲೆಕ್ಟ್ರಿಷಿಯನ್‌ನ ಬರ್ಬರ ಹತ್ಯೆ

ಎಲೆಕ್ಟ್ರಿಷಿಯನ್‌ನ ಒಬ್ಬನನ್ನು ಆತನ ಪತ್ನಿಯ ಸಹೋದರ ಮತ್ತು ಚಿಕ್ಕಪ್ಪ ಸೇರಿ ಕೊಲೆ ಮಾಡಿರುವ ಘಟನೆ ಬೆಂಗಳುರಿನ ಲಗ್ಗೆರೆಯಲ್ಲಿ ನಡೆದಿದೆ.

ಚೇತನ್ (27) ಕಳೆದ ಕೆಲವು ವರ್ಷಗಳಿಂದ ಭೂಮಿಕಾಳನ್ನು ಪ್ರೀತಿಸುತ್ತಿದ್ದ. ಆದರೂ ಭೂಮಿಕಾ ಪೋಷಕರು ಸುಮಾರು ಮೂರು ತಿಂಗಳ ಹಿಂದೆ ಅವಳನ್ನು ಇನ್ನೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಿಸಿದ್ದಾರೆ.

“ಭೂಮಿಕಾ ತನ್ನ ಗಂಡನೊಂದಿಗೆ ಒಂದು ವಾರ ವಾಸಿಸಿದ್ದಳು.  ಬಳಿಕ ಚೇತನ್ ಜೊತೆ ಓಡಿಹೋಗಿ ಅವನನ್ನು ಮದುವೆಯಾಗಿದ್ದಳು. ದಂಪತಿಗಳು ಎಲ್.ಜಿ. ರಾಮಣ್ಣ ಲೇಔಟ್ ನಲ್ಲಿ  ವಾಸವಾಗಿದ್ದರು. ಭೂಮಿಕಾ ಸಹೋದರ ಆಕಾಶ್ (19) ಚೇತನ್ ನನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಎಲ್ಲವೂ ಚೆನ್ನಾಗಿದ್ದ ಹಾಗೆ ನಟಿಸಿ ವಿಳಾಸವನ್ನು ತಿಳಿದುಕೊಂಡಿದ್ದಾನೆ. ಸೋಮವಾರ ಚೇತನ್ ಹುಟ್ಟುಹಬ್ಬವಾಗಿದ್ದು ಆಕಾಶ್ ಮತ್ತು ಅವರ ಚಿಕ್ಕಪ್ಪ ನಂಜೇಶ್ (58) ಚೇತನ್ ಗೆ ಶುಭ ಹಾರೈಸುವ ನೆಪದಲ್ಲಿ ಅವರ ಮನೆಗೆ ಬಂದು ಕತ್ತಿ ಮತ್ತು ಮಾರಕಾಸ್ತ್ರದಿಂದ ಹೊಡೆದು ಕೊಂದಿದ್ದಾರೆ." ಪೊಲೀಸರು ವಿವರಿಸಿದ್ದಾರೆ.


Stay up to date on all the latest ರಾಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp