ಬದಲಾದ ಆಹಾರ ಕ್ರಮ: 'ಚಿಕನ್' ತಿಂದೂ ತಿಂದೂ ಸೋಮಾರಿಯಾಗುತ್ತಿರುವ ಹುಲಿರಾಯ!

ಮಾಂಸಹಾರ ಪ್ರಾಣಿಗಳು ಸದಾ ಸಕ್ರಿಯವಾಗಿರುತ್ತವೆ, ಆದರೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿರುವ ಮಾಂಸಹಾರಿ ಪ್ರಾಣಿಗಳು ತಮ್ಮ ಬದಲಾದ ಆಹಾರ ಕ್ರಮದಿಂದಾಗಿ ಸೋಮಾರಿಗಳಾಗುತ್ತಿವೆ.

Published: 18th February 2021 12:35 PM  |   Last Updated: 18th February 2021 02:36 PM   |  A+A-


A tiger lazes around inside its enclosure in Mysuru Zoo

ಸೋಮಾರಿಯಾಗಿರುವ ಹುಲಿ

Posted By : Shilpa D
Source : The New Indian Express

ಮೈಸೂರು: ಮಾಂಸಹಾರ ಪ್ರಾಣಿಗಳು ಸದಾ ಸಕ್ರಿಯವಾಗಿರುತ್ತವೆ, ಆದರೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿರುವ ಮಾಂಸಹಾರಿ ಪ್ರಾಣಿಗಳು ತಮ್ಮ ಬದಲಾದ ಆಹಾರ ಕ್ರಮದಿಂದಾಗಿ ಸೋಮಾರಿಗಳಾಗುತ್ತಿವೆ.

ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿದ ಕರ್ನಾಟಕ ಮೃಗಾಲ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಎಲ್ಲಾ ಮೃಗಾಲಯಗಳಲ್ಲಿ ಜನವರಿ ತಿಂಗಳಿಂದ ಕೋಳಿ ಮಾಂಸ ನೀಡಲಾಗುತ್ತಿದೆ.

ಕರ್ನಾಟಕವು ದೇಶದಲ್ಲಿ ಅತಿ ಹೆಚ್ಚು ಪ್ರಾಣಿಸಂಗ್ರಹಾಲಯಗಳನ್ನು ಹೊಂದಿದೆ ಮತ್ತು ಮೈಸೂರು ಮೃಗಾಲಯವು ಮಾಂಸಾಹಾರಿಗಳನ್ನು ಹೊಂದಿದೆ, ಇದರಲ್ಲಿ ಚಿರತೆಗಳು, ಬಿಳಿ ಹುಲಿಗಳು, ಜಾಗ್ವಾರ್ ಗಳು ಮತ್ತು ಒಂದು ಡಜನ್ ಗೂ ಹೆಚ್ಚು  ಬಂಗಾಳ ಹುಲಿಗಳು, ಎರಡು ಡಜನ್ ಚಿರತೆಗಳು ಮತ್ತು ತೋಳಗಳು ಮತ್ತು ನರಿಗಳು ಇಲ್ಲಿವೆ. 

ಕೋಳಿ ಮಾಂಸ ನೀಡುವ ಮೊದಲು ಮೈಸೂರು ಮೃಗಾಲಯದಲ್ಲಿ ಪ್ರತಿ ದಿನ 350 ಕೆಜಿ ಗೋಮಾಂಸ ಪೂರೈಸುತ್ತಿತ್ತು. ಈಗ ಕೋಳಿ ಮಾಂಸ ನೀಡುತ್ತಿರುವ ಕಾರಣ ಇಲ್ಲಿರುವ ಮಾಂಸಹಾರಿಗಳು ನಿಷ್ಕ್ರಿಯವಾಗಿದ್ದು, ಅತಿ ಹೆಚ್ಚು ಸಮಯ ನಿದ್ದೆ ಮಾಡುತ್ತಿವೆ, ವಿಶೇಷವಾಗಿ ಹುಲಿಗಳು ಹೆಚ್ಚು ಸೋಮಾರಿಗಳಾಗುತ್ತಿವೆ ಎಂದು ಮೃಗಾಲಯದ ಮೂಲಗಳು ತಿಳಿಸಿವೆ.

ಅಧಿಕಾರಿಗಳು ಗೋಮಾಂಸಕ್ಕೆ ಬದಲಾಗಿ ಮಟನ್ ನೀಡಲು  ಪ್ರಯತ್ನಿಸಿದರು, ಆದರೆ ಮಾಂಸಾಹಾರಿಗಳು ಸಣ್ಣ ಪ್ರಮಾಣದಲ್ಲಿ ತಿನ್ನಲು ನಿರಾಕರಿಸಿದ್ದರಿಂದ, ಅವರು  ಚಿಕನ್ ಮೊರೆ ಹೋಗಬೇಕಾಯಿತು.

ಗೋಹತ್ಯಾ ನಿಷೇಧ ಮಸೂದೆಯಿಂದಾಗಿ ಎಮ್ಮೆ ಮಾಂಸ ನೀಡಲು ಅನುಮತಿಸಲಾಗಿದೆ, ಆದರೆ ಇದು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲ. ಹಳ್ಳಿಗಾಡಿನ ಕೋಳಿಯ ಬೆಲೆ ಹೆಚ್ಚಿರುವುದರಿಂದ, ಪ್ರಾಣಿಸಂಗ್ರಹಾಲಯಗಳು ಫಾರಂ ಕೋಳಿಗಳ ಮೇಲೆ ಅವಲಂಬಿತವಾಗಿವೆ.

ರಣಹದ್ದುಗಳಂತಹ ಪಕ್ಷಿಗಳನ್ನು ಹೊರತು ಪಡಿಸಿ ಎಲ್ಲಾ ಇತರ ಮಾಂಸಾಹಾರಿಗಳು ಕಡಿಮೆ ಚಟುವಟಿಕೆ ತೋರಿಸುತ್ತಿವೆ. ಸ್ವಲ್ಪ ಮಟ್ಟಿಗೆ, ಚಿರತೆಗಳು ನಿಷ್ಕ್ರಿಯವಾಗಿಲ್ಲ. ಆದರೆ ಹುಲಿಗಳು, ನರಿಗಳು ಮತ್ತು ಹೈನಾಗಳು ಸಹ ಕಡಿಮೆ ಚಟುವಟಿಕೆಯನ್ನು ತೋರಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಈ ಮೊದಲು ಗೋಮಾಂಸ ನೀಡಲಾಗುತ್ತಿತ್ತು, ಆಗ ದಿನಕ್ಕೆ 14ಕೆಜಿ ನೀಡಲಾಗುತ್ತಿತ್ತು, 11 ಕೆಜಿ ತಿಂದು ಉಳಿದ ಮೂರು ಕೆಜಿ ಮೂಳೆಗಳನ್ನು ಬಿಡುತ್ತಿದ್ದವು, ಆದರೆ ಈಗ 8ಕೆಜಿ ಚಿಕನ್  ನೀಡಲಾಗುತ್ತಿದ್ದು 2 ಕೆಜಿ ಮೂಳೆಗಳನ್ನು ಬಿಡುತ್ತಿವೆ.

ಮಾಂಸಾಹಾರಿ ಪ್ರಾಣಿಗಳ ಮೇಲೆ ಕೋಳಿಯ ದೀರ್ಘಕಾಲದ ಆಹಾರದ ಪರಿಣಾಮದ ಬಗ್ಗೆ ಮೃಗಾಲಯದ ಸಿಬ್ಬಂದಿ ಚಿಂತಿತರಾಗಿದ್ದಾರೆ. ಕರ್ನಾಟಕ ಮೃಗಾಲಯ ಸದಸ್ಯ ಕಾರ್ಯದರ್ಶಿ ಬಿ ಪಿ ರವಿ  ಅವರು ಮೃಗಾಲಯಗಳಿಗೆ ಗೋಮಾಂಸ ಪೂರೈಸಲು ಸರ್ಕಾರದಿಂದ ವಿನಾಯಿತಿ ಪಡೆಯಲು ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಮೃಗಾಲಯಗಳಲ್ಲಿ ಆಹಾರದ ಕೊರತೆಯ ಬಗ್ಗೆ ದೂರುಗಳು ಬಂದಿಲ್ಲ. ಅಧಿಕಾರಿಗಳು ವಿವರ ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.


Stay up to date on all the latest ರಾಜ್ಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp