ಬೆಂಗಳೂರು: ವಾಟ್ಸಪ್ ವಿಡಿಯೋ ಕಾಲ್‌ನಲ್ಲಿ ಮಹಿಳೆ ಮುಂದೆ ಬೆತ್ತಲಾದ ವ್ಯಕ್ತಿ, ಕಳೆದುಕೊಂಡಿದ್ದು ಎಷ್ಟು ಗೊತ್ತ?

ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ನಮಗೆ ತಿಳಿಯದಂತೆಯೇ ನಮ್ಮ ಮೊಬೈಲ್ ನಲ್ಲಿನ ಫೋಟೋ, ವಿಡಿಯೋಗಳನ್ನು ಕದ್ದು ನೋಡುವ ಪಟಾಲಂ ಇದೆ. ಅಂತಹದರಲ್ಲಿ ವ್ಯಕ್ತಿಯೋರ್ವ ಮಹಿಳೆ ಮುಂದೆ ಬೆತ್ತಲಾಗಿದ್ದು ಅಲ್ಲದೆ ಹಣವನ್ನು ಕಳೆದುಕೊಂಡಿದ್ದಾನೆ.

Published: 19th February 2021 08:07 PM  |   Last Updated: 19th February 2021 08:08 PM   |  A+A-


Bois Locker Room: What we know about the Instagram chat group glorifying gang rape

ಸಾಂದರ್ಭಿಕ ಚಿತ್ರ

Posted By : Vishwanath S
Source : Online Desk

ಬೆಂಗಳೂರು: ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ನಮಗೆ ತಿಳಿಯದಂತೆಯೇ ನಮ್ಮ ಮೊಬೈಲ್ ನಲ್ಲಿನ ಫೋಟೋ, ವಿಡಿಯೋಗಳನ್ನು ಕದ್ದು ನೋಡುವ ಪಟಾಲಂ ಇದೆ. ಅಂತಹದರಲ್ಲಿ ವ್ಯಕ್ತಿಯೋರ್ವ ಮಹಿಳೆ ಮುಂದೆ ಬೆತ್ತಲಾಗಿದ್ದು ಅಲ್ಲದೆ ಹಣವನ್ನು ಕಳೆದುಕೊಂಡಿದ್ದಾನೆ. 

ಬೆಂಗಳೂರಿನಲ್ಲಿ ಅಂಬಿತ್ ಕುಮಾರ್ ಮಿಶ್ರಾ ಎಂಬಾತ ವಾಟ್ಸಪ್ ವಿಡಿಯೋ ಕಾಲ್ ನಲ್ಲಿ ಮಹಿಳೆಯ ಬಣ್ಣದ ಮಾತುಗಳಿಗೆ ಮರುಳಾಗಿ ಆಕೆಯ ಮುಂದೆ ಬೆತ್ತಲಾಗಿದ್ದಾನೆ. ಇದನೆಲ್ಲಾ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡ ಶ್ರೇಯಾ ನಂತರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೆದರಿಸಿ ಹಣಕ್ಕಾಗಿ ಪೀಡಿಸಿದ್ದಾಳೆ. 

ತನ್ನ ಮಾನ ಹರಾಜಾಗುತ್ತದೆ ಎಂದು ಹೆದರಿದ ಅಂಬಿತ್, ಶ್ರೇಯಾಗೆ 20 ಸಾವಿರ ರುಪಾಯಿ ನೀಡಿದ್ದಾನೆ. ಇದೀಗ ಅಂಬಿತ್ ಮಹಿಳೆಯ ವಿರುದ್ಧ ವಂಚನೆ ಹಾಗೂ ಸುಲಿಗೆ ಪ್ರಕರಣವನ್ನು ದಾಖಲಿಸಿದ್ದಾನೆ.

800

ಅಂಬಿತ್ ಮತ್ತು ಶ್ರೇಯಾ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಮೂಲಕ ಪರಿಚಿತರಾಗಿದ್ದರು. ಈ ವೇಳೆ ಶ್ರೇಯಾ ತಾನು ಟೆಕ್ಕಿಯೆಂದು ಪರಿಚಯ ಮಾಡಿಕೊಂಡಿದ್ದಳು. ತಾನು ಮದುವೆಯಾಗುವುದಾಗಿ ಶ್ರೇಯ ಇಂಗಿತ ವ್ಯಕ್ತಪಡಿಸಿದ್ದಳು. 


Stay up to date on all the latest ರಾಜ್ಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp