ಮಂಗಳೂರು: ರಾಮ ಮಂದಿರ ನಿರ್ಮಾಣಕ್ಕೆ 1 ಪೈಸೆಯನ್ನು ಕೊಡಬೇಡಿ - ಪಿಎಫ್ಐ

ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆಯಾಗಿ 1 ಪೈಸೆಯನ್ನು ಕೊಡಬೇಡಿ ಎಂದು  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಕಾರ್ಯದರ್ಶಿ ಅನೀಸ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Published: 19th February 2021 05:11 PM  |   Last Updated: 19th February 2021 05:11 PM   |  A+A-


Anis Ahmed

ಅನೀಸ್ ಅಹ್ಮದ್

Posted By : Vishwanath S
Source : Online Desk

ಮಂಗಳೂರು: ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆಯಾಗಿ 1 ಪೈಸೆಯನ್ನು ಕೊಡಬೇಡಿ ಎಂದು  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಕಾರ್ಯದರ್ಶಿ ಅನೀಸ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಮಂಗಳೂರಿನ ಉಳ್ಳಾಲದಲ್ಲಿ ಸಮಾವೇಶವೊಂದರಲ್ಲಿ ಮಾತನಾಡಿದ್ದ ಅನೀಸ್ ಅದು ರಾಮ ಮಂದಿರವಲ್ಲ, ಆರ್ ಎಸ್ಎಸ್ ಮಂದಿರ. ಹೀಗಾಗಿ ಯಾರೂ ನಿರ್ಮಾಣಕ್ಕೆ 1 ಪೈಸೆ ಸಹ ನೀಡಬೇಡಿ ಎಂದು ಹೇಳಿದ್ದರು. 

ಇದೇ ವೇಳೆ ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್ ಎಸ್ಎಸ್) ಹರಿಹಾಯ್ದ ಅನೀಸ್, ಪಿಎಫ್ಐ ನ ಶತ್ರು ಅಂದರೆ ಅದು ಆರ್ ಎಸ್ಎಸ್ ಮಾತ್ರ. ದೇಶದಲ್ಲಿರೋ ಆರ್ ಎಸ್ ಎಸ್ ಕ್ಯಾನ್ಸರ್ ಇದ್ದಂತೆ, ಅದು ವಾಸಿ ಆಗಲ್ಲ ಎಂದು ಹೇಳಿದ್ದಾರೆ. 

ರಾಮಮಂದಿರ ನಿರ್ಮಾಣ ದೇಣಿಗೆ ಸಂಬಂಧ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಚಕಾರವೆತ್ತಿದ್ದರು. ಇದರ ಬೆನ್ನಲ್ಲೇ ಅನೀಸ್ ಅಹ್ಮದ್ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.

Stay up to date on all the latest ರಾಜ್ಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp