ಇಂಧನ ಬೆಲೆ ಏರಿಕೆ: ಮೋದಿ ವಿರುದ್ದ ಹೋರಾಡಲು ಒಗ್ಗೂಡಿದ ಪ್ರತಿಪಕ್ಷಗಳು

ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್  ಗೆ 93 ಹಾಗೂ ಡೀಸೆಲ್ ದರ 85 ರು ತಲುಪಿದೆ, ಈ ಹಿನ್ನೆಲೆಯಲ್ಲಿ ಪ್ರತಿ ಪಕ್ಷಗಳು ಪ್ರತಿಭಟನೆ ನಡೆಸಲು ಮುಂದಾಗಿವೆ.

Published: 19th February 2021 09:15 AM  |   Last Updated: 19th February 2021 09:15 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಬೆಂಗಳೂರು:  ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್  ಗೆ 93 ಹಾಗೂ ಡೀಸೆಲ್ ದರ 85 ರು ತಲುಪಿದೆ, ಈ ಹಿನ್ನೆಲೆಯಲ್ಲಿ ಪ್ರತಿ ಪಕ್ಷಗಳು ಪ್ರತಿಭಟನೆ ನಡೆಸಲು ಮುಂದಾಗಿವೆ.

ಕೊರೋನಾ ಆರ್ಥಿಕ ಸಂಕಷ್ಟದಿಂದ ನಲುಗಿರುವ ಜನ ಸಾಮಾನ್ಯರಿಗೆ ಇಂಧ ಬೆಲೆ ಏರಿಕೆಯಿಂದಾಗಿ ಮತ್ತಷ್ಟು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ.

ಸರ್ಕಾರದ ಈ ವರ್ತನೆಯನ್ನು ನಾನು ಖಂಡಿಸುತ್ತೇನೆ,  ಅಧಿಕಾರಕ್ಕ ಬಂದ 7 ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿರುವುದು ದುರಾದೃಷ್ಟ,  ಇಂಧನ ದರ ಏರಿಕೆ ರೈತರ ಮೈಲೂ ಪರಿಣಾಮ ಬೀರುತ್ತದೆ, ಎಲ್ಲಾ  ಸಮಯದಲ್ಲೂ ಎಲ್ಲಾ ಜನರನ್ನು ಮೋಸಗೊಳಿಸಲು ಸಾಧ್ಯವಿಲ್ಲ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಪೆಟ್ರೋಲ್ ಬೆಲೆ 100 ರು ಸಮೀಪಿಸುತ್ತಿದೆ, ಇದು ಮಧ್ಯಮ ವರ್ಗ ಮತ್ತು ಬಡಜನತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದಕ್ಕೆಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರೊಬ್ಬರೇ  ನೇರ ಹೊಣೆ, ಅವರ ಸರ್ಕಾರವು ಸಾರ್ವಜನಿಕ ಹಣಕಾಸು ನಿರ್ವಹಣೆಯಲ್ಲಿ ವಿಫಲವಾಗಿದೆ ಮತ್ತು ಈಗ ಕೊರತೆಯನ್ನು ನೀಗಿಸಲು ಜನರಿಗೆ ತೆರಿಗೆ ವಿಧಿಸುತ್ತಿದೆ.  ಯುಪಿಎ ಆಡಳಿತದ ಅವಧಿಯಲ್ಲಿ, ಕಚ್ಚಾ ತೈಲ ಬ್ಯಾರೆಲ್‌ಗೆ 110  ಡಾಲರ್ ಆಗಿದ್ದಾಗ ಪೆಟ್ರೋಲ್‌ಗೆ 70 ರೂ ಇತ್ತು, ಈಗ, ಕಚ್ಚಾ ತೈಲ ಬ್ಯಾರೆಲ್ ಗೆ  55 ಇದ್ದಾಗಲೂ ಪೆಟ್ರೋಲ್‌ಗೆ 100 ರೂ. ತಲುಪತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. 

ಪ್ರಧಾನಿ ಮೋದಿ ಅವರು ಅಬಕಾರಿ ಸುಂಕವನ್ನು ಕಡಿತಗೊಳಿಸಬೇಕೆಂದು ಆಗ್ರಹಿಸಿರುವ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಹಿಂದಿನ ಸರ್ಕಾರಗಳ ಮೇಲೆ ಗೂಬೆ ಕೂರಿಸುವುದು ಜಾವಾಬ್ದಾರಿಯು ಸ್ಥಾನದಲ್ಲಿರುವವರಿಗೆ ಸರಿಯಲ್ಲ .  ಸರ್ಕಾರ ಸುಂಕ ಕಡಿಮೆ ಮಾಡುವ ಬಗ್ಗೆ ಯೋಚಿಸಿದೇ  ಆದಾಯ ಸಂಗ್ರಹಣೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದೆ ಎಂದು ಾರೋಪಿಸಿದ್ದಾರೆ.

ಇದೊಂದು ಬಡ ಹಾಗೂ ರೈತ ವಿರೋಧಿ ಸರ್ಕಾರವಾಗಿದೆ, ಸರ್ಕಾರ ಕೂಡಲೇ ಇಂಧನ ದರ ಇಳಿಸದಿದ್ದರೇ ಕೇಂದ್ರದ ವಿರುದ್ದ ರಾಜ್ಯಾಧ್ಯಂತ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.


Stay up to date on all the latest ರಾಜ್ಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp